ರಾಯಚೂರು/ಸಿಂಧನೂರು ತಾಲೂಕಿನ ಜಾಲಿಹಾಳ ಹೋಬಳಿಯ ವಿಶ್ವಕರ್ಮ ಸಮಾಜದ ವತಿಯಿಂದ ವಿಶ್ವಕರ್ಮರ ಕುಲದೇವತೆ ಶ್ರೀಕಾಳಿಕಾದೇವಿಯ ನೂತನ ದೇವಸ್ಥಾನ ನಿರ್ಮಾಣಕ್ಕಾಗಿ ಇಂದು ವಿಧಾನ ಪರಿಷತ್ ಸದಸ್ಯರು ಹಾಗೂ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ರಾಜ್ಯಾದ್ಯಕ್ಷರಾದ ಕೆ.ಪಿ.ನಂಜುಂಡಿ ವಿಶ್ವಕರ್ಮ ಅವರನ್ನು ಬೆಂಗಳೂರಿನ ನಿವಾಸದಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರು ಹಾಗೂ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ರಾಜ್ಯಾದ್ಯಕ್ಷರಾದ ಸನ್ಮಾನ್ಯ ಕೆ.ಪಿ.ನಂಜುಂಡಿ ವಿಶ್ವಕರ್ಮ ಅವರು ರಾಜ್ಯದಲ್ಲಿ45ಲಕ್ಷಕ್ಕೂ ಹೆಚ್ಚು ವಿಶ್ವಕರ್ಮ ಸಮಾಜದವರಿದ್ದೇವೆ ನಮ್ಮ ಸಮಾಜದ ದೇವಸ್ಥಾನಗಳ ಅಭಿವೃದ್ದಿಗೆ ಸರ್ಕಾರ ಅನುದಾನ ನೀಡಬೇಕು.ನಮ್ಮ ಸಮಾಜದ ಪುರಾತನ ಕಾಲದಿಂದಲೂ ದೇವಸ್ಥಾನಗಳು ಹಾಳುಬಿದ್ದಿರುವುದು ವಿಪರ್ಯಾಸ ದೇವರನ್ನೇ ಮಾಡಿಕೊಡುವ ವಿಶ್ವಕರ್ಮ ಸಮಾಜ ಇಂದು ದೇವಸ್ಥಾನ ನಿರ್ಮಿಸಿಕೊಳ್ಳಲು ಅನುದಾನಕ್ಕೆ ಭಿಕ್ಷೆ ಬೇಡುವ ಪರಿಸ್ಥಿತಿ ಬಂದೊದಗಿದೆ ಇನ್ನೂ ಕೆಲವು ಕಡೆಗಳಲ್ಲಿ ನಮ್ಮ ಸಮಾಜದ ಬಂದುಗಳು ಪೂಜಿಸಲು ದೇವಸ್ಥಾನಗಳೂ ಇಲ್ಲ ಇದನ್ನು ಕೇಳಲಿಕ್ಕೂ ಕೂಡ ನಮಗೆ ರಾಜಕೀಯ ಪ್ರಜ್ಞೆ ಇಲ್ಲ.ಇಂದು ಜಾಲಿಹಾಳ ಹೋಬಳಿ ಹಾಗೂ ಗಿಣಿಗೇರಾ ಹೋಬಳಿಯ ಬಂಧುಗಳು ನನ್ನ ಬಳಿ ಬಂದು ತಮ್ಮ ಅಹವಾಲು ನೀಡಿದ್ದಾರೆ ನಾನು ಇದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಅನುದಾನ ದೊರಕಿಸಿ ಕೊಡಲು ಪ್ರಯತ್ನಿಸುತ್ತೇನೆ ಎಂದರು.
ಇದೇ ಸಂದರ್ಭದಲ್ಲಿ ಜಾಲಿಹಾಳ ಹೋಬಳಿಯ ಹಾಗೂ ಗಿಣಿಗೇರಾ ಹೋಬಳಿಯ ವಿಶ್ವಕರ್ಮ ಬಂಧುಗಳು ನೂತನ ದೇವಾಲಯ ನಿರ್ಮಾಣಕ್ಕಾಗಿ ಕೆ.ಪಿ.ನಂಜುಂಡಿ ವಿಶ್ವಕರ್ಮ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಾಲಿಹಾಳ ಹೋಬಳಿ ವಿಶ್ವಕರ್ಮ ಸಮಾಜದ ಅಧ್ಯಕ್ಷರಾದ ಪಂಪಾಪತಿ ಕಮ್ಮಾರ,ಕಾಳಪ್ಪ ಬಡಿಗೇರ, ಹನುಮಂತ ಬಡಿಗೇರ,ಚನ್ನಪ್ಪ ಕೆ.ಹೊಸಹಳ್ಳಿ, ಮಹೇಶ ಬೂದಗುಂಪಾ,ಮಹೇಶ ಬಡಿಗೇರ ಬೇವಿನಹಳ್ಳಿ, ಶಿವಕುಮಾರ ಕಲ್ ತಾವರೇಗೇರಾ,ವಿರುಪಾಕ್ಷಿ ಹಿರೇಬೊಮ್ಮನಾಳ,ಶಂಬಣ್ಣ ಹಿರೇಬೊಮ್ಮನಾಳ ಇನ್ನೂ ಹಲವಾರು ವಿಶ್ವಕರ್ಮ ಬಂಧುಗಳು ಉಪಸ್ಥಿತರಿದ್ದರು.