ಚಾಮರಾಜನಗರ/ ಹನೂರು :ಪ್ರತಿಯೊಬ್ಬರಿಗೂ ಆರೋಗ್ಯ ಭಾಗ್ಯವೇ ಮುಖ್ಯವಾಗಿದ್ದು ಜನರಿಗೆ ಉತ್ತಮ ಸೇವೆ ಒದಗಿಸುವ ನಿಟ್ಟಿನಲ್ಲಿ ಗುರು ಡಯಾಗ್ನಸ್ಟಿಕ್ ಸೆಂಟರ್ ಮುಂದಾಗಬೇಕು. ಎಂದು ಶಾಸಕ ಎಂ. ಆರ್. ಮಂಜುನಾಥ್ ಹೇಳಿದರು.
ಹನೂರು ಪಟ್ಟಣ ಮೈಸೂರು ಮಾರಮ್ಮನ ಬೀದಿ ಹಿಂದೆ ನ್ಯಾಯಾಲಯ ಇದ್ದ ಸ್ಥಳದಲ್ಲಿ ನೂತನವಾಗಿ ತೆರೆದಿರುವ ಗುರು ಡಯಾಗ್ನಸ್ಟಿಕ್ ಸೆಂಟರ್ ಉದ್ಘಾಟನೆ ನೆರವೇರಿಸಿ ಮಾತನಾಡಿದ ಶಾಸಕರು ತಾಲ್ಲೂಕು ಕೇಂದ್ರದಲ್ಲಿ ಎಲ್ಲಾ ರೀತಿ ಸೌಲಭ್ಯ ಹೊಂದಿರುವ ಡಯಾಗ್ನಸ್ಟಿಕ್ ಸೆಂಟರ್ ಪ್ರಾರಂಭ ಆಗಿರುವುದು ಸಂತೋಷವಾಗಿದೆ. ಅದೇ ರೀತಿಯಲ್ಲಿ ಜನ ಸಾಮಾನ್ಯರಿಗೆ ಉತ್ತಮ ಸೇವೆ ಒದಗಿಸುವ ಮೂಲಕ ಜನ ಮನ್ನಣೆ ಪಡೆಯಲಿ ಎಂದು ಹಾರೈಸಿ ಶುಭ ಕೋರಿದರು.
ಗುರು ಡಯಾಗ್ನಸ್ಟಿಕ್ ಸೆಂಟರ್ ಮುಖ್ಯಸ್ಥರು ಆದ ನವೀನ್ ಕುಮಾರ್ ಮಾತನಾಡಿ ಜನರಿಗೆ ಉತ್ತಮ ಗುಣಮಟ್ಟ ಆರೋಗ್ಯ ಸೇವೆ ಒದಗಿಸುವಂಥ ಉದ್ದೇಶವನ್ನ ಹೊಂದಲಾಗಿದೆ. ನಮ್ಮಲ್ಲಿ ಹೆಮಟಾಲಜಿ, ಸೆರೋಲಜಿ, ಕ್ಲಿನಿಕಲ್ ಪ್ಯಾಥಾಲಜಿ, ಬಯೋ-ಕೆಮಿಸ್ಟ್ರಿ,ಇಮ್ಯುನೊಅಸ್ಸೇ, ಮೈಕ್ರೋಬಯಾಲಜಿ, ಇ.ಸಿ.ಜಿ. ಪ್ರಯೋಗಾಲಯಗಳ ಸೇವೆಗಳು ಲಭ್ಯ ಇರುತ್ತದೆ.
ಹಾಗೆಯೇ ಅಲ್ಟಾಸೌಂಡ್ ಸ್ಕಾನಿಂಗ್, ಕಲರ್ ಡಾಕ್ಟರ್ ಡಿಜಿಟಲ್ ಎಕ್ಸ್ –ರೇ, 2ಡಿ ಎಕೋ / ಟಿ.ಎಂ.ಟಿ, ಫಿಸಿಯೋಥೆರಪಿ ಸೇವೆಗಳು ಅತಿ ಶೀಘ್ರದಲ್ಲೆ ಲಭ್ಯವಾಗುತ್ತದೆ. ವಿಶ್ವಸಾರ್ಹ ಪ್ರಯೋಗಾಲಯ ಫಲಿತಾಂಶಗಳಿಗಾಗಿ ಬುದ್ದಿವಂತಿಕೆಯ ಅನುಭವಯುಳ್ಳ ಸಿಬ್ಬಂದಿಗಳಿದ್ದು ಜನರ ಸೇವೆಗೆ ಜನಾರ್ಧನ ಸೇವೆ ಆಗಿರುತ್ತದೆ ಮತ್ತು ಸಮಯ : ಪ್ರತಿನಿತ್ಯ ಬೆಳಿಗ್ಗೆ 7-00 ರಿಂದ ರಾತ್ರಿ 9-00 ಗಂಟೆ ವರೆಗೆ ಸೇವೆ ಲಭ್ಯ ಇರುತ್ತದೆ.
ಮಾಹಿತಿಗಾಗಿ ಈ ಕೆಳಕಂಡ ಮೊಬೈಲ್ ಸಂಖ್ಯೆಗೆ ಕರೆ ಮಾಡಬಹುದಾಗಿ ತಿಳಿಸಿದ್ದಾರೆ.
ಸಂಪರ್ಕ :962023346,
08224-200557,
gurudiagnostic26@gmail.com
ಇದೆ ಸಮಯದಲ್ಲಿ ಚಾಮುಲ್ ನಿರ್ದೇಶಕ ರಾದ ಉದ್ದನೂರು ಪ್ರಸಾದ್,ಮಹದೇವ್,ಶಶಿ,ಸತ್ಯರಾಜ್, ವೆಂಕಟೇಗೌಡ,ಎಸ್ ಆರ್ ಮಹದೇವ್, ವಿಜಯ್ ಕುಮಾರ್, ಗುರುಸ್ವಾಮಿ, ಮೂರ್ತಿ ಹಾಗೂ ಇನ್ನಿತರರು ಇದ್ದರು.
ವರದಿ: ಉಸ್ಮಾನ್ ಖಾನ್



















