ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಮಾತಿನ ಮನೆಗೀಗ ಆರು ವರ್ಷ: ನಟಿ ಹೇಮಾ ಅಭಿನಂದನೆ

ಬೆಂಗಳೂರು: “ಮಾತಿನ ಮನೆಯ ಕಾರ್ಯ ಚಟುವಟಿಕೆಗಳು ನಿಜಕ್ಕೂ ಶ್ಲಾಘನೀಯ, ಆರು ವರ್ಷಗಳಲ್ಲಿ 125 ಕಾರ್ಯಕ್ರಮಗಳನ್ನು ನಿರಂತರವಾಗಿ ಮಾಡಿಕೊಂಡುಬಂದಿರುವುದನ್ನು ಮೆಚ್ಚಬೇಕು, ರಾ ಸು ವೆಂಕಟೇಶ ಅವರ ಈ ಕನ್ನಡಪರ ಕಾರ್ಯ ನಿರಂತರ ಸಾಗಲಿ” ಹೀಗೆಂದು ಹಾರೈಸಿದವರು “ಅಮೇರಿಕಾ ಅಮೇರಿಕಾ” ಚಿತ್ರದ ನಾಯಕಿ, ವಿದುಷಿ ಹೇಮಾ ಪ್ರಭಾತ್‌, ಅವರು ಮಾತಿನ ಮನೆಯ ಆರನೆಯ ವಾರ್ಷಿಕೋತ್ಸವ ಹಾಗೂ 125ನೆಯ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು.

ನಂತರದಲ್ಲಿ ನೂಪುರ ಕಲಾಸಂಸ್ಥೆಯ ವಿದುಷಿ ಪದ್ಮಿನಿ ಉಪಾದ್ಯ ಹಾಗೂ ವಿದುಷಿ ಬೃಂದಾ ಅವರನ್ನೂ ಕೂಡಾ ಮಾತಿನ ಮನೆಯ ಪರವಾಗಿ ಅಭಿನಂದಿಸಲಾಯಿತು.

ಇದೇ ಸಂದರ್ಭದಲ್ಲಿ ನಟಿ ವಿದುಷಿ ಹೇಮಾ ಪ್ರಭಾತ್‌ ಅವರನ್ನು ಮಾತಿನ ಮನೆ, ನೊಬಲ್‌ ಹಾರ್ಟ್ಸ್‌ ಹಾಗೂ ಉದಯಭಾನು ಕಲಾಸಂಘದ ಪರವಾಗಿ ಗೌರವಿಸಲಾಯಿತು.

ಇದಕ್ಕೂ ಮುಂಚೆ ಮಾತಿನ ಮನೆಯ ಕಲಾವಿದೆಯರಿಂದ ತಥಾಸ್ತು ನೃತ್ಯರೂಪಕದ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.

ಚಿ. ಆರ್ಯ ಭಟ್‌ ಹಾಗೂ ಕುಮಾರಿ ಗಾರ್ಗಿ ಭಟ್‌ ಅವರ ಮಂಕುತಿಮ್ಮನ ಕಗ್ಗ ವಾಚನ-ವ್ಯಾಖ್ಯಾನ ನೆರದ ನೂರಾರು ಮಂದಿಯನ್ನು ರೋಮಾಂಚನಗೊಳಿಸಿತ್ತು. ಅವರನ್ನು ವಿದುಷಿ ಹೇಮಾ ಮಕ್ಕಳನ್ನು ಪ್ರಶಂಸಿಸಿ, ಅಭಿನಂದನಾ ಪತ್ರ ನೀಡಿದ್ದರು.

ಮಾತಿನ ಮನೆಯ ಸಾಧನೆಯ ಹಾದಿಯನ್ನು ಕುರಿತ 10 ನಿಮಿಷಗಳ ಕಿರುಚಿತ್ರವನ್ನು ಪ್ರದರ್ಶಿಸಲಾಯಿತು. ಮಾತಿನ ಮನೆಯ ರಾ ಸು ವೆಂಕಟೇಶ ಪ್ರಾಸ್ತಾವಿಕ ನುಡಿಗಳಲ್ಲಿ ಮಾತಿನ ಮನೆಯ ಸಾಧನೆಗೆ ಎಲ್ಲರ ಸಹಕಾರ, ಹಾರೈಕೆಗಳೇ ಕಾರಣ ಎಂದು ನುಡಿದಿದ್ದರು.

ಮುಖ್ಯ ಕಾರ್ಯಕ್ರಮವಾಗಿ, ದಾವಣಗೆರೆಯ ನೂಪುರ ಕಲಾಸಂಘದ 25 ಮಕ್ಕಳಿಂದ ಒಂದೂವರೆ ತಾಸುಗಳ ದಶಾವತಾರ ನೃತ್ಯ ರೂಪಕ ಜನರನ್ನು ಮಂತ್ರಮುಗ್ಧರನ್ನಾಗಿಸಿತ್ತು. ಕ್ರಿಕೆಟ್‌ ಪಂದ್ಯದ ಆಕರ್ಷಣೆಯ ಮದ್ಯೆಯೂ, ಕೊನೆಯವರೆವಿಗೂ ಸಭಾಂಗಣ ತುಂಬಿದ್ದು ಮೆಚ್ಚುಗೆಯ ಅಂಶವಾಗಿತ್ತು.

ನಾಡಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಗಿ, ಡಾ. ಬಿ. ಎಸ್‌. ಸತ್ಯನಾರಾಯಣ ಅವರು ಆಹ್ವಾನಿತರೆಲ್ಲರನ್ನು ಸ್ವಾಗತಿಸಿದರು.

ವರದಿ : ಕೊಡಕ್ಕಲ್ ಶಿವಪ್ರಸಾದ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!