ಸಿರುಗುಪ್ಪ – ಮಹಿಳಾ ದಿನಾಚರಣೆಯ ಅಂಗವಾಗಿ ಮಾರ್ಚ್ 13 ಶುಕ್ರವಾರ ದಿನ ತಾಲೂಕು ಕ್ರೀಡಾಂಗಣದಲ್ಲಿ ಮಹಿಳೆಯರಿಗಾಗಿ ರಂಗೋಲಿ ಸ್ಕಿಪಿಂಗ್, ಫ್ಯಾಷನ್ ಷೋ, ಫೈರ್ ಲೆಸ್ ಕುಕ್ಕಿಂಗ್ (ಬೆಂಕಿ ಇಲ್ಲದೆ ಅಡುಗೆ ತಯಾರಿ), ಬಾಟಲಿಯಲ್ಲಿ ನೀರು ತುಂಬುವ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಆಸಕ್ತಿಯುಳ್ಳ ಮಹಿಳೆಯರು ಸ್ಪರ್ಧೆಯಲ್ಲಿ ಭಾಗವಹಿಸಬಹುದು ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ
ಪ್ರಥಮ ಬಹುಮಾನ-5001/-ರೂ ಗಳು
ದ್ವಿತೀಯ ಬಹುಮಾನ-3001/-ರೂ. ಗಳು
ತೃತೀಯ ಬಹುಮಾನ-1001/-ರೂ. ಗಳು ಇದ್ದು ಸ್ಕಿಪಿಂಗ್, ಫ್ಯಾಷನ್ ಷೋ, ಫೈರ್ ಲೆಸ್ ಕುಕ್ಕಿಂಗ್ (ಬೆಂಕಿ ಇಲ್ಲದೆ ಅಡುಗೆ ತಯಾರಿ ) ಬಾಟಲಿಯಲ್ಲಿ ನೀರು ತುಂಬುವುದು ಸ್ಪರ್ಧೆಗಳಿಗೆ
ಪ್ರಥಮ ಬಹುಮಾನ-ಎಲೆಕ್ಟ್ರಿಕ್ ರೈಸ್ ಕುಕ್ಕರ್ ದ್ವಿತೀಯ ಬಹುಮಾನ-ಇಂಡಕ್ಷನ್ ಸ್ಟವ್,
ತೃತೀಯ ಬಹುಮಾನ-ಹಾಟ್ ಬಾಕ್ಸ್ ನೀಡಲಾಗುವುದು ನಿಯಮಗಳು ಅನ್ವಯವಾಗುತ್ತವೆ ಹೆಚ್ಚಿನ ಮಾಹಿತಿಗಾಗಿ ನಗರ ಸಭೆಯ ಆರೋಗ್ಯ ಶಾಖೆಯ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಪೌರಾಯುಕ್ತ ಗಂಗಾಧರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ : ಮಸೀದಿ ಅಬ್ದುಲ್ ಗೌಸ್ ,ಸಿರುಗುಪ್ಪ




















