ಕಲಬುರ್ಗಿ:ಕಾಳಗಿ ತಾಲೂಕಿನ ಕಲ್ಯಾಣ ಕರ್ನಾಟಕ ಭಾಗದಲ್ಲಿಯೇ ಪ್ರಖ್ಯಾತ ಪಡೆದಿರುವ. ಕೋರವಾರ ಅಣಿವೀರಭದ್ರೇಶ್ವರ ಝೇಂಕರಿಸುವ ಜೈಘೋಶ ದೊಂದಿಗೆ. ಸಹಸ್ರಾರು ಸಂಖ್ಯೆಯಲ್ಲಿ ಅಗ್ನಿ ಹಾಯಿದ ಭಕ್ತರು ಭವ್ಯವಾದ ರಥೋತ್ಸವದೊಂದಿಗೆ ಇಂದು ಮಂಗಳವಾರ ಅಣಿಪರ್ವತ ಅಂಗಳದಲ್ಲಿಂದು ಅಪಾರವಾದ ಭಕ್ತಗಣ ಸಾಗರೋಪಾದಿಯಲ್ಲಿ ಶಿವರಾತ್ರಿ ಹಬ್ಬದ ಮಾರನೆ ದಿನ ಅದ್ದೂರಿಯಾಗಿ ನೇರವೇರಲು ಸಜ್ಜಾಗಿದೆ ಕೋರವಾರ ಗ್ರಾಮದ ಪ್ರತಿಷ್ಠಿತ ಬಸಲಿಂಗ ಮನೆತನದಿಂದ ಕುಂಬ ಕಳಶ ನಂದಿಕೋಲು ಗ್ರಾಮಸ್ಥರು ಹಾಗೂ ಅರ್ಚಕರು ಪಟ್ಟದ ಪುರವಂತರ ಸಮ್ಮುಖದಲ್ಲಿ ಪೂಜೆ ಕೈಂಕರ್ಯಗಳು ನೆರವೇರಿಸಿ, ಪುರವಂತರು ಮಂಗಳವಾದ್ಯಗಳ ಸಮೇತ ದೇವಸ್ಥಾನಕ್ಕೆ ತಲುಪಿಸಿ, ಪಲ್ಲಕ್ಕಿಯಲ್ಲಿರುವ ಸ್ವಾಮಿಯ ಸಮೇತ ಐದು ಪ್ರದಕ್ಷಿಣೆ ನೇರವೇರಿಸುವರು.ರಥೋತ್ಸವಕ್ಕೂ ಮುನ್ನ ವೀರಭದ್ರೇಶ್ವರ ಸ್ವಾಮಿಯನ್ನು ಪಲ್ಲಕ್ಕಿಯಲ್ಲಿ ಕರೆತಂದು ರಥೋತ್ಸವದಲ್ಲಿಡುವರು.
ದೇವಸ್ಥಾನದ ಅಧ್ಯಕ್ಷ ಆಡಳಿತ ಅಧಿಕಾರಿ ತಹಸೀಲ್ದಾರ ನಾಗನ್ನಾಥ ತೆರಿಗೆ, ಮಂಜುನಾಥ ಮಹಾರುದ್ರ, ಸಿದ್ಧಲಿಂಗ ಕ್ಷೇಮಶೆಟ್ಟಿ, ಪಟ್ಟದ ಪುರವಂತ ಸೋಮೇಶ್ವರ ಕಂಠಿ ಅರ್ಚಕರು ಅಂಬರೀಶ್ ಧನಂಜಯ ಹಿರೇಮಠ ರವರ ನೇತೃತ್ವದಲ್ಲಿ ರಥೋತ್ಸವ ಚಾಲನೆ ನೀಡುವರು.
ಜಾತ್ರೆ ಪ್ರಯುಕ್ತ ವಿವಿಧ ಧಾರ್ಮಿಕ ರಾತ್ರಿ ರಮೇಶ ವಿಶ್ವಕರ್ಮ ಕೋರವಾರ ರವರ ನೇತೃತ್ವದಲ್ಲಿ ವಿವಿಧ ಸಂಗೀತ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೇರವೇರಿದವು.
ಅಗ್ನಿ ಹಾಯ್ದ ಭಕ್ತರು: ಕೋರವಾರ ಅಣವೀರಭದ್ರೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಪುರವಂತರ ಸಾಂಪ್ರದಾಯಿಕ ಕುಣಿತ,ವಾದ್ಯ, ವೈಭವಗಳೊಂದಿಗೆ ದೇವಸ್ಥಾನದಲ್ಲಿಂದು ಪಲ್ಲಕ್ಕಿ ಉತ್ಸವ, ಸಾಗಿದ ಬಳಿಕ ದೇವಸ್ಥಾನ ಹತ್ತಿರ ಭಕ್ತಾದಿಗಳು ಪ್ರಜ್ವಲಿಸಿದ ಅಗ್ನಿ ಪೂಜಿಸಿ ಪಟ್ಟದ ಪುರವಂತ ಸೋಮೇಶ ಕಂಠಿ ಚಾಲನೆಯ ಮೆರೆಗೆ ಆಂದ್ರ, ಮಹಾರಾಷ್ಟ್ರ, ತೆಲಂಗಾಣ, ಕಲ್ಯಾಣ ಕರ್ನಾಟಕದ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಭಕ್ತರು ಮತ್ತು ಸಹಸ್ರಾರು ಪುರವಂತರು ಹರಕೆ ತೀರಿಸಿದರು. ಬ್ಲಾಕ್ ಐಟಂ
ಬೇಡಿದವರಿಗೆ ಇಷ್ಟಾರ್ಥ ಕರುಣಿಸುವ ಶಿವನ ಜಡೆಯಿಂದ ಉಧಿಸಿದ ಅಣಿವೀರಭದ್ರ ಸ್ವಾಮಿಯ ಜಾತ್ರೆ ಪ್ರಯುಕ್ತ ಅಗ್ನಿ ಹಾಯುವುದೇ ಒಂದು ಭಕ್ತಿಯ ಪರಾಕಾಷ್ಠೆ, ಇದು ಜಾತ್ರೆಯಲ್ಲ ಸಹಸ್ರಾರು ಭಕ್ತರ ಜೀವನ ಕಟ್ಟಿಕಳ್ಳುವ ಉಪಜೀವನದ ಯಾತ್ರೆ, ಅಣವೀರಭದ್ರೇಶ್ವರನಿಗೆ ಭಕ್ತಿ ಇಟ್ಟು ನಡೆದುಕೊಂಡರೆ ಸಕಲ ಇಷ್ಟಾರ್ಥವು ಪೂರೈಸುತ್ತಾರೆ.
ಅಣ್ಣರಾವ ಕಂಠಿ ಕೋರವಾರ ದೇವಸ್ಥಾನದ ಮಾಜಿ ಪುರವಂತರು ಅಣವಿ ವೀರಭದ್ರೇಶ್ವರ ದೇವಸ್ಥಾನ ಸಂಪೂರ್ಣವಾಗಿ ಮಾಹಿತಿ ನೀಡಿದರು.
ವರದಿ ರಾಜಶೇಖರ ಮಾಲಿ ಪಾಟೀಲ್ ಶಹಾಪುರ