ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಮಹಿಳೆಯರು ಒಳ್ಳೆಯ ಜೀವನದೊಂದಿಗೆ ಆರ್ಥಿಕವಾಗಿ ಸಬಲರಾಗಿ : ಎಂ. ರಜನಿ

ಬಳ್ಳಾರಿ / ಕಂಪ್ಲಿ: ಆಧುನಿಕ ಭಾರತರದಲ್ಲಿ ಮಹಿಳೆಯರ ಬದುಕು ಕಷ್ಟಕರ. ಅಂತರದಲ್ಲಿ ಪವಿತ್ರ ಚಾರಿಟೇಬಲ್‌ಯಿಂದ ಸಾಕಷ್ಟಯ ತರಬೇತಿ ಜೊತೆಗೆ ಸ್ವಯಂ ಉದ್ಯೋಗ ಕಂಡುಕೊಳ್ಳಲು ಅನುವು ಮಾಡುವ ಮೂಲಕ ಮಹಿಳೆಯರ ಸ್ವಾವಲಂಬನೆಯ ಬದುಕಿಗೆ ಆಸರೆಯಾಗಿದೆ ಎಂದು ಮುಖಂಡರು ಎಂ.ರಜನಿ ಹೇಳಿದರು.
ಪಟ್ಟಣದ ಎಂ.ಡಿ.ಕ್ಯಾಂಪಿನ ಶಿರಡಿ ಸಾಯಿಬಾಬ ದೇವಸ್ಥಾನ ಬಳಿಯಲ್ಲಿರುವ ಪವಿತ್ರ ಚಾರಿಟೇಬಲ್ ಕಛೇರಿಯಲ್ಲಿ ಪವಿತ್ರ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷೆ ವಿ.ಪವಿತ್ರಗೌಡ ಇವರ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ಸಮಾಜದಲ್ಲಿ ಮಹಿಳೆಯರಿಗೆ ಒಳ್ಳೆಯ ಸ್ಥಾನಮಾನವಿದೆ. ಅದರಂತೆ ಮಹಿಳೆಯರು ಒಳ್ಳೆಯ ಜೀವನದೊಂದಿಗೆ ಆರ್ಥಿಕವಾಗಿ ಸಬಲರಾಗಲು ಪವಿತ್ರ ಚಾರಿಟೇಬಲ್ ನೀಡುವ ತರಬೇತಿ ಮುಖಾಂತರ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಕಷ್ಟು ಮಹಿಳೆಯರಿಗೆ ಅನುವು ಮಾಡಿಕೊಟ್ಟಿದೆ. ಮಹಿಳೆಯರ ಸಂಕಷ್ಟವನ್ನು ಆಲಿಸಿ, ಪವಿತ್ರ ಚಾರಿಟೇಬಲ್ ಮೂಲಕ ಮಹಿಳೆಯರು ತರಬೇತಿಯೊಂದಿಗೆ ಸ್ವಯಂ ಉದ್ಯೋಗದ ಕಡೆ ಮುಖ ಮಾಡಲು ಅನುವು ಮಾಡಿಕೊಟ್ಟಿದ್ದಾರೆ. ಇಲ್ಲಿನ ಸಾಕಷ್ಟು ಮಹಿಳೆಯರು ಭವಿಷ್ಯ ರೂಪಿಸಿಕೊಂಡು ಹೋಗಿದ್ದಾರೆ. ಸಮಾಜ ಸೇವೆಯೊಂದಿಗೆ ಜನರ ಪ್ರೀತಿ, ವಿಶ್ವಾಸಗಳಿಸುವ ಜೊತೆಗೆ ಸಾಕಷ್ಟು ಮಹಿಳೆಯರಿಗೆ ಚಾರಿಟೇಬಲ್ ಟ್ರಸ್ಟ್ ಮೂಲಕ ತರಬೇತಿ ನೀಡುವದೊಂದಿಗೆ ಸ್ವಯಂ ಉದ್ಯೋಗಕ್ಕೆ ಅನುವು ಮಾಡಿಕೊಡುತ್ತಿದ್ದಾರೆ. ಇಂತಹ ಇನ್ನಷ್ಟು ಸೇವೆಗಳ ಮೂಲಕ ದೊಡ್ಡ ಮಟ್ಟದಲ್ಲಿ ಬೆಳೆಯಲಿ ಎಂದರು.
ಈ ಸಂದರ್ಭದಲ್ಲಿ ಟ್ರಸ್ಡ್ ಉಪಾಧ್ಯಕ್ಷ ವಿ.ಶಿವನಗೌಡ, ಸದಸ್ಯ ವಿ.ವಿವೇಕ್‌ಗೌಡ, ಸಿಬ್ಬಂದಿಗಳಾದ ಎಂ.ರಜನಿ, ಶಿವರಾಜ, ಉದಯಮೇರಿ, ಶೈಲಜಾ, ಪಾರ್ವತಿ, ವಾಣಿ ಸೇರಿದಂತೆ ಮಹಿಳೆಯರು ಇದ್ದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!