ಬಳ್ಳಾರಿ: ನಗರದ ಪ್ರಮುಖ ಸಮಸ್ಯೆಯಾಗಿರುವ ರಾಷ್ಟ್ರೀಯ ಹೆದ್ದಾರಿ-67 (NH-67) ರಸ್ತೆ ಸಂಚಾರ ದಟ್ಟಣೆ ಮತ್ತು ಮೂಲಭೂತ ಸೌಕರ್ಯ ಕೊರತೆಯನ್ನು ಶಾಶ್ವತವಾಗಿ ಪರಿಹರಿಸಲು ಪ್ರಸ್ತುತ NH-67 ಬಳ್ಳಾರಿ ಬೈ-ಪಾಸ್ ನಿಂದ ಸುಧಾಕ್ರಾಸ್ ವರೆಗಿನ ರಸ್ತೆಯನ್ನು ಎರಡು ಲೇನ್‌ನಿಂದ ನಾಲ್ಕು ಲೇನ್‌ಗೆ ಅಭಿವೃದ್ಧಿಪಡಿಸಲು ಸುಮಾರು ರೂ. 90 ಕೋಟಿ ಅನುದಾನ ಮಂಜೂರು ಮಾಡುವಂತೆ ಹಾಗೂ ಗುಳ್ಯಮ್ ಸೇತುವೆ ನಿರ್ಮಾಣಕ್ಕೆ 60 ಕೋಟಿ ಅನುದಾನ ನೀಡುವಂತೆ ಸಂಸದ ಇ. ತುಕಾರಾಂ
ಮನವಿ ಮಾಡಿದರು.
ಸಂಸದರ ಮನವಿಗೆ ಸಕಾರತ್ಮಕವಾಗಿ ಸ್ಪಂದಿಸಿದ ಮಾನ್ಯ ಸಚಿವರು NH-67 ಬಳ್ಳಾರಿ ಬೈ-ಪಾಸ್ ನಿಂದ ಸುಧಾಕ್ರಾಸ್ ವರೆಗಿನ ರಸ್ತೆಯನ್ನು ಎರಡು ಲೇನ್‌ನಿಂದ ನಾಲ್ಕು ಲೇನ್‌ಗೆ ಅಭಿವೃದ್ಧಿಪಡಿಸಲು ಕೂಡಲೇ ಅನುಮೋದನೆ ನೀಡುವುದಾಗಿ ಹಾಗೂ ಗುಳ್ಯಾಮ್ ಸೇತುವೆ ನಿರ್ಮಾಣಕ್ಕೆ ಕೇಂದ್ರ ರಸ್ತೆ ಮತ್ತು ಮೂಲಸೌಕರ್ಯ ನಿಧಿ (CRIF) ಅಡಿಯಲ್ಲಿ ಅನುದಾನ ನೀಡಲು ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿರುತ್ತಾರೆ.
ಇದು ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಕೈಗಾರಿಕಾ ಬೆಳವಣಿಗೆ, ರಾಜ್ಯಾಂತರ ಸಂಪರ್ಕ ಮತ್ತು ಸಾರ್ವಜನಿಕರ ಸುರಕ್ಷತೆಗಾಗಿ ಈ ರಸ್ತೆ ಅತ್ಯಂತ ಮಹತ್ವದ್ದಾಗಿದ್ದು, ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಅಗತ್ಯವನ್ನು ಸ್ಪಷ್ಟವಾಗಿ ಸರ್ಕಾರದ ಮುಂದೆ ಮಂಡಿಸಲಾಗಿದೆ.
ವರದಿ : ಜಿಲಾನಸಾಬ್ ಬಡಿಗೇರ್




















