ಬೆಳಗಾವಿ ಜಿಲ್ಲೆಯ ಕಿತ್ತೂರು ಮತಕ್ಷೇತ್ರದಲ್ಲಿ ಚುನಾವಣಾ ತಯಾರಿ ರಂಗೇರಿದೆ ಬರುವ ಫೆಬ್ರುವರಿ 28 ರಂದು ಹೊಸ ಕಾದರವಳ್ಳಿಯ ವೀರಭದ್ರೇಶ್ವರ ದೇವಾಲಯದ ಆವರಣದಲ್ಲಿ ಮಾಜಿ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಅದ್ದೂರಿಯಾದ ತಯಾರಿ ನಡೆದಿವೆ ಇದಕ್ಕೆ ಇಂಬು ನೀಡುವಂತೆ ಅಳಿಯ ಬಾಬಾಸಾಹೇಬ ಪಾಟೀಲರಿಗೆ ಸಿಹಿ ತಿನಿಸುವ ಮೂಲಕ ಮಾವ ಅಳಿಯ ಒಂದಾಗಿ ಚುನಾವಣಾ ಕದನದಲ್ಲಿ ಕಲಿಗಳನ್ನ ಎದುರಿಸಲು ಸಜ್ಜಾಗಿದ್ದಾರೆ ಇದರ ಮಧ್ಯೆ ಜನರ ಉತ್ಸಾಹ ಇಮ್ಮಡಿಯಾಗಿದೆ ಕಾರಣ ಕಳೆದ ಮೂರು ಚುನಾವಣೆಯಲ್ಲಿ ಸೋತು ಸುಣ್ಣವಾಗಿರುವ ನೇಗಿನಹಾಳದ ಧಣಿ ಶ್ರೀ ದಾನಪ್ಪ ಗೌಡ ಇನಾಂದಾರ್ ಮೂರು ಚುನಾವಣೆಯಲ್ಲಿ ಒಂದಿಲ್ಲೊಂದು ಕಾರಣಗಳಿಂದ ಸೋತಿರುವ ಹಳೆಯ ಹುಲಿ ಘಾಯಮಾಡಿಕೊಂಡು ಪಂಜರದಿಂದ ಹೊರಗೆ ಬಂದ ಹಾಗೆ ಕ್ಷೇತ್ರದಲ್ಲಿ ಮಿಂಚಿನ ಸಂಚಾರ ಆರಂಭ ಮಾಡಿದ್ದಾರೆ ಸಹಜವಾಗಿ ತಮ್ಮ ಹಳೆಯ ಖದರನ್ನು ಮರೆತುಹೋದ ವೈಭವವನ್ನು ಮರುಕಳಿಸುವ ಲೆಕ್ಕಾಚಾರ ನಡೆದಿದೆ ಇಲ್ಲಿಯವರೆಗೆ ಏಕಪಕ್ಷೀಯವಾಗಿ ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷದ ಪ್ರಾಬಲ್ಯ ಜನರಿಗೆ ಕಣ್ಣು ಕುಕ್ಕಿಸುವ ಹಾಗೆ ಅಮಿತ್ ಷಾ ಭಾಷಣ ಜನರ ಮನಸ್ಸಿಗೆ ಮುದ ನೀಡಿತ್ತು ಅದಕ್ಕೆ ಪ್ರತಿಯಾಗಿ ಹೌದೋ ಹುಲಿಯಾ ಖ್ಯಾತಿಯ ಕರ್ನಾಟಕ ಕಂಡ ಅದ್ಭುತ ಕೈ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಸದಸ್ಯರು ಚುನಾವಣಾ ಕಹಳೆ ಊದುವ ಕಾರ್ಯಕ್ರಮ ಜೊತೆಗೆ ಕ್ಷೇತ್ರದಲ್ಲಿ ಕಳೆಗುಂದಿದ ಕೈ ಕಾರ್ಯಕರ್ತರ ಬಲಪಡಿಸಲು ಈ ವೇದಿಕೆ ಚರ್ಚೆಗೆ ಗ್ರಾಸವಾಗಿದೆ ಸಹಜವಾಗಿ ಹಿರಿಯರನ್ನು ಕಡೆಗಣಿಸಿದ್ದಾರೆ ಹಾಲಿ ಶಾಸಕರು ಎಂಬ ಅಸಮಾಧಾನಕ್ಕೆ ಪ್ರಜಾದ್ವನಿ ಕಾರ್ಯಕ್ರಮ ಹೊಸ ಚೈತನ್ಯವನ್ನು ಧಣಿಗಳಿಗೆ ತುಂಬುತ್ತದೆ ಎಂಬುವುದು ಜನರ ಅಭಿಪ್ರಾಯ ಹಾಗೂ ಧಣಿಗಳೂ ಸಹ ವಿವಿಧ ಕಾರ್ಯಕ್ರಮಗಳಿಗೆ ತೆರಳಿ ತೆರೆಮರೆಯಲ್ಲಿ ಮೊದಲಿನ ತಪ್ಪುಗಳನ್ನು ಮರುಕಳಿಸದಂತೆ ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದಾರೆ ಸಂಘಟನೆ ಜೋರಾಗಿದೆ ಸದ್ದಿಲ್ಲದೆ ಗೆಲುವಿಗೆ ದಾರಿ ಗಟ್ಟಿಗೊಳಿಸುತ್ತಿದ್ಧಾರೆ ಕ್ಷೇತ್ರದಲ್ಲಿ ಅವರ ಅಭಿಮಾನಿಗಳಿಗೆ ಸಂತಸ ತಂದಿದೆ.
ವರದಿಗಾರ.ದಿನೇಶಕುಮಾರ ಅಜಮೇರಾ