ಧಾರವಾಡ:ಡಾ.ಬಿ.ಆರ್.ಅಂಬೇಡ್ಕರ್ ಅವರ ಕುರಿತು ಗೊತ್ತಿರದ ಅನೇಕ ಇತಿಹಾಸ ಘಟನೆಗಳ ಕುರಿತು ಸಂಶೋಧನೆ ನಡೆಯಬೇಕಾಗಿದೆ ಎಂದು ಕೇಂದ್ರ ಸರ್ಕಾರದ ಸಂಸದೀಯ ಮತ್ತು ಸಾಂಸ್ಕೃತಿಕ ರಾಜ್ಯ ಸಚಿವ ಅರ್ಜುನರಾಮ ಮೇಘವಾಲ ಅಭಿಪ್ರಾಯ ಪಟ್ಟರು ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಪೀಠದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೇವಲ ಕೆಲವೇ ಕೆಲವು ಸಮುದಾಯಕ್ಕೆ ಸೀಮಿತವಾಗದೆ ಅನೇಕ ಸಮುದಾಯಗಳ ನಾಯಕರಾಗಿದ್ದರು.
ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸ್ಥಾಪನೆಯಲ್ಲಿ ಅಂಬೇಡ್ಕರ್ ಅವರ ಪಾತ್ರ ಹಿರಿದಾಗಿದೆ ಎಂದ ಅವರು ಲಂಡನ್ ನ ಕೇಂಬ್ರಿಜ್ ವಿಶ್ವವಿದ್ಯಾಲಯಕ್ಕೆ ” ಪ್ರಾಬ್ಲಮ್ ಆಫ್ ರೂಪಿ” ಕುರಿತು ಪಿ.ಎಚ್.ಡಿ.ಸಂಶೋಧನೆ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ.
ಅಂಬೇಡ್ಕರ್ ಅವರು ದಮನಿತ ಸಮುದಾಯ ಹಕ್ಕುಗಳಿಗಾಗಿ ಹೋರಾಟ ಮಾಡುವುದು ಅನಿವಾರ್ಯ ಆಗಿತ್ತು ಎಂದ ಅವರು ಕೇವಲ ಒಂದೇ ಸಮುದಾಯದ ವರ್ಗಕ್ಕೆ ಸೀಮಿತವಾದ ವ್ಯಕ್ತಿಯಲ್ಲ ಎಂದರು.
ಪುನಾ ಒಪ್ಪಂದದ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿಯವರು ನಿರಂತರವಾದ ಉಪವಾಸ ಸತ್ಯಾಗ್ರಹ ಕೈಗೊಂಡ ಸಂದರ್ಭದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಮತ್ತು ಗಾಂಧೀಜಿಯವರ ಮಧ್ಯೆ ವೈಚಾರಿಕ ಭಿನ್ನತೆಗಳು ಏರ್ಪಟ್ಟಾಗ ಅವರ ಪ್ರಾಣ ರಕ್ಷಣೆಗಾಗಿ ಅವರ ಧರ್ಮ ಪತ್ನಿಯಾದ ಕಸ್ತೂರಬಾ ಗಾಂಧಿಯವರು ಡಾ. ಬಿ. ಆರ್. ಅಂಬೇಡ್ಕರ್ ಅವರ ಮನೆಗೆ ಆಗಮಿಸಿ ಅವರ ಧರ್ಮಪತ್ನಿಯಾದ ರಮಾಬಾಯಿ ಅಂಬೇಡ್ಕರ್ ರವರಿಗೆ ಪುನಾ ಒಪ್ಪಂದದಿಂದ ಅಂಬೇಡ್ಕರ್ ಅವರು ಹಿಂದೆ ಸರಿಯುವಂತೆ ಕೇಳಿಕೊಂಡರು. ರಮಾಬಾಯಿ ಅಂಬೇಡ್ಕರ್ ರವರ ಮನವೊಲಿಕೆಯಿಂದ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಪುನಾ ಒಪ್ಪಂದದಿಂದ ಹಿಂದೆ ಸರಿದರು ಈ ಸತ್ಯವನ್ನು ಇತಿಹಾಸಕಾರರು ಮುಚ್ಚಿಕಿದ್ದಾರೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊಫೆಸರ್ ಕೆ. ಬಿ. ಗುಡಸಿ ಅವರು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅಧ್ಯಯನ ಕೇಂದ್ರದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಕುರಿತು ಮ್ಯೂಸಿಯಂ ಸಲುವಾಗಿ ಕೇಂದ್ರದ ಮಂತ್ರಿಯವರಿಗೆ ಮನವಿ ಸಲ್ಲಿಸಿದರು. ಈಗಾಗಲೇ ರಾಜ್ಯ ಸರ್ಕಾರ 5 ಕೋಟಿ ಅನುದಾನ ನೀಡಿದೆ ಇನ್ನುಳಿದ 23 ಕೋಟಿಯನ್ನು ಕೇಂದ್ರ ಸರ್ಕಾರ ಕೊಡಬೇಕೆಂದು ಹಾಗೂ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ 50 ಕೋಟಿ ರೂಪಾಯಿಗಳ ಸಾಂಸ್ಕೃತಿಕ ಕೇಂದ್ರ ಬೃಹತ್ ಕಟ್ಟಡದ ಅವಶ್ಯಕತೆ ಇದೆ ಎಂದು ಮನವಿ ಸಲ್ಲಿಸಿದರು. ಇದಕ್ಕೆ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ ಕೇಂದ್ರ ಸಚಿವರು ಸಾಂಸ್ಕೃತಿಕ ಕೇಂದ್ರ ಮತ್ತು ಅಂಬೇಡ್ಕರ್ ಮ್ಯೂಸಿಯಂ ಜೊತೆಗೆ ಶ್ರೀ ಮಾತೇ ರಮಾಬಾಯಿ ಹೆಸರಿನಲ್ಲಿ ಬೃಹತ್ ಮ್ಯೂಸಿಯಂ ನಿರ್ಮಾಣ ಮಾಡಿರಿ ಅದಕ್ಕೆ ತಗಲುವ ಎಲ್ಲಾ ವೆಚ್ಚವನ್ನು ಕೇಂದ್ರ ಸರ್ಕಾರ ಭರಿಸುತ್ತಿದೆ ಎಂದರಲ್ಲದೆ ಅಂಬೇಡ್ಕರ್ ಅವರು ಬರೆದ ಪ್ರಾಬ್ಲಮ್ ಆಫ್ ರೂಪಿ ಸಂಶೋಧನೆ ಗ್ರಂಥಕ್ಕೆ ನೂರು ವರ್ಷಗಳು ಸಂದಿವೆ ಅದಕ್ಕಾಗಿ ವಿಶ್ವವಿದ್ಯಾಲಯ 100 ಅಂಬೇಡ್ಕರ್ ಚಿಂತಕರನ್ನು ಕರೆಯಿಸಿ ಒಂದು ಅಂತರಾಷ್ಟ್ರೀಯ ವಿಚಾರ ಸಂಕೀರ್ಣ ಏರ್ಪಡಿಸಲು ಮಾನ್ಯ ಕುಲಪತಿಗಳಿಗೆ ಸೂಚಿಸಿದರು. ಅದಕ್ಕೆ ತಗಲುವ ವೆಚ್ಚವನ್ನು ಕೇಂದ್ರ ಸರ್ಕಾರ ಭರಿಸಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಲಪತಿಗಳಾದ ಪ್ರೊಫೇಸರ್ ಕೆ. ಬಿ. ಗುಡಸಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕ. ವಿ. ವಿ. ಕುಲಸಚಿವರಾದ ಯಶಪಾಲ್ ಕ್ಷೀರಸಾಗರ, ಅಂಬೇಡ್ಕರ್ ಅಧ್ಯಯನ ಕೇಂದ್ರದ ಸಂಯೋಜಕರಾದ ಡಾ. ಸುಭಾಸಚಂದ್ರ ಸಿ. ನಾಟಿಕಾರ, ಕೇಂದ್ರ ಲಲಿತ ಕಲಾ ಅಕಾಡೆಮಿ ಪ್ರಾದೇಶಿಕ ಕಛೇರಿ ಸಂಯೋಜಕರಾದ ಶ್ರೀನಿವಾಸ ಶಾಸ್ತ್ರಿ, ಮೌಲ್ಯಮಾಪನ ಕುಲಸಚಿವರಾದ ಪ್ರೊಫೆಸರ್ ಸಿ. ಕೃಷ್ಣಮೂರ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಿಲ್ಲಾ ಸಹ ನಿರ್ದೇಶಕರಾದ ಶ್ರೀ ಕುಮಾರ ಬೆಕ್ಕೇರಿ, ಕರ್ನಾಟಕ ವಿಶ್ವವಿದ್ಯಾಲಯ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷರಾದ ಡಾ. ರವೀಂದ್ರ ಕಾಂಬ್ಳೆ ಸೇರಿದಂತೆ ವಿವಿಧ ವಿಭಾಗದ ಪ್ರಾಧ್ಯಾಪಕರು, ಸಂಶೋಧಕರು, ವಿದ್ಯಾರ್ಥಿಗಳು ಹಾಜರಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.