
ಬೆಂಗಳೂರು: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ-2026 ಪ್ರಯುಕ್ತ ಆರೋಹಣ ಸಂಸ್ಥೆಯ ವತಿಯಿಂದ ಭಗಿನಿ ಸಾಧನೆಗೆ ಸನ್ಮಾನ ಎಂಬ ಕಾರ್ಯಕ್ರಮವನ್ನು ದಿನಾಂಕ 29.03.2026 ಭಾನುವಾರ ಬೆಳಿಗ್ಗೆ 10.30ರಿಂದ ನಗರದ ಬಸವನಗುಡಿಯಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ. ಪಿ. ವಾಡಿಯ ರಸ್ತೆ ಇಲ್ಲಿ ಆಯೋಜಿಸಲಾಗಿತ್ತು.
ಪತ್ರಕರ್ತೆ, ಲೇಖಕಿ ಮತ್ತು ಪ್ರಕಾಶಕಿ ಡಾ.ಆರ್. ಪೂರ್ಣಿಮಾ ಇವರು ಕಾರ್ಯಕ್ರಮ ಉದ್ಘಾಟಿಸಿದ್ದು
ಮುಖ್ಯ ಅತಿಥಿಯಾಗಿ ಡಾ. ಸಂಧ್ಯಾ ಕೃಷ್ಣಮೂರ್ತಿ (ನಿವೃತ್ತ ಡೈರೆಕ್ಟರ್ ಜನರಲ್) ಭಾಗವಹಿಸಿದ ಈ ಸಂಧರ್ಭದಲ್ಲಿ ಮಹಿಳಾ ಸಾಧಕಿಯರು ಎಂದು ಶ್ರೀಮತಿ. ಎಸ್.ಸಿ.ಶಾರದಾ (Company Secretary & Independent Director), ಲಿಪಿ ಪ್ರಾಜ್ಞೆ, ಪ್ರಸಿದ್ಧ ಲೇಖಕಿ, ರಂಗಕರ್ಮಿ, ಅಂಕಣಗಾರ್ತಿ, ನೃತ್ಯ-ನಾಟಕ ವಿಮರ್ಶಕರು ಶ್ರೀಮತಿ ವೈ.ಕೆ. ಸಂಧ್ಯಾ ಶರ್ಮ, ಶ್ರೀಮತಿ ನೀಲಮ್ಮ (ವೀರಶೈವ ರುದ್ರಭೂಮಿಯಲ್ಲಿ ಗುಂಡಿ ತೋಡುವ ಕಾಯಕ ) ಇವರುಗಳನ್ನು ಅವರ ವಿಶಿಷ್ಟ ಸಾಧನೆಗಳನ್ನು ಗುರುತಿಸಿ ಗೌರವಿಸಲಾಗಿದ್ದು ಕಾರ್ಯಕ್ರಮ ನಿರ್ವಾಹಕ ಶ್ರೀ ಸುಧೀಂದ್ರ ಅವರು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.
ವರದಿ: ಕೊಡಕ್ಕಲ್ ಶಿವಪ್ರಸಾದ್, ಬೆಂಗಳೂರು




















