ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಜಿಲ್ಲಾ ಮಟ್ಟದ ಸಂಘಟನಾ ಸಭೆ ಹಾಗೂ ಪರಿಶಿಷ್ಟ ಪಂಗಡ ಮೀಸಲಾತಿ ಪಾದಯಾತ್ರೆಯ ಅಭಿನಂದನಾ ಸಮಾರಂಭ

ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಶ್ರೀಕಾಳಿಕಾದೇವಿ ದೇವಸ್ಥಾನದಲ್ಲಿ ಇಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ(ರಿ.) ರಾಯಚೂರು ಜಿಲ್ಲಾ ವಿಶ್ವಕರ್ಮ ಸಮಾ(ರಿ.) ತಾಲೂಕ ಘಟಕ ಲಿಂಗಸೂಗೂರು ವತಿಯಿಂದ ತಾಲೂಕು ಮತ್ತು ಜಿಲ್ಲಾ ಘಟಕಗಳು ಪದಾಧಿಕಾರಿಗಳ ಮತ್ತು ಮುಖಂಡರುಗಳ “ಜಿಲ್ಲಾ ಮಟ್ಟದ ಸಂಘಟನಾ ಸಭೆ ಮತ್ತು ಪರಿಶಿಷ್ಟ ಪಂಗಡ ಮೀಸಲಾತಿ ಪಾದಯಾತ್ರೆಯ ಅಭಿನಂದನಾ ಸಮಾರಂಭ ನೆರವೇರಿತು.

ಈ ಕಾರ್ಯಕ್ರಮದಲ್ಲಿ ಕೆ.ಪಿ.ನಂಜುಂಡಿ ವಿಶ್ವಕರ್ಮರ ನೇತೃತ್ವದಲ್ಲಿ ನಡೆದ ವಿಶ್ವಕರ್ಮ ಬಂಧುಗಳ ಸಾಮೂಹಿಕ ಉಪನಯನ, ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ,ವಿಶ್ವಕರ್ಮ ಜನಜಾಗೃತಿ ಸಮಾವೇಶ ಹಾಗೂ ಪರಿಶಿಷ್ಟ ಪಂಗಡ ಮೀಸಲಾತಿಗಾಗಿ ಲಿಂಗ ಸೂಗೂರಿನಿಂದ ರಾಯಚೂರುವರಗೆ ಪಾದಯಾತ್ರೆಯಲ್ಲಿ ಭಾಗವಹಿಸಿದ ಸಮಾಜದ ಬಂಧುಗಳಿಗೆ ಸನ್ಮಾನಿಸಿ ಗೌರವಿಸಲಾಯಿತು .

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಮೇಶ ಬಡಿಗೇರ ಲಿಂಗಸೂಗೂರು ಇವರು ವಹಿಸಿಕೊಂಡಿದ್ದರು.

ಈ ಸಂದರ್ಭದಲ್ಲಿ ರಾಜ್ಯ ವಿಶ್ವಕರ್ಮ ಸಮುದಾಯಗಳು ಅಭಿವೃದ್ಧಿ ನಿಗಮದ ಮಾಜಿ ಅದ್ಯಕ್ಷರು ಹಾಗೂ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ರಾಯಚೂರು ಜಿಲ್ಲಾ ಉಸ್ತವಾರಿಗಳಾದ ಶ್ರೀ ಲೋಹಿತ್ ವೈ ಕಲ್ಲೂರು ಮಾತನಾಡಿ ವಿಶ್ವಕರ್ಮ ಸಮಾಜಕ್ಕೆ ಮೀಸಲಾತಿ ಅತ್ಯವಶ್ಯಕವಾಗಿದೆ ಏಕೆಂದರೆ ಸಮಾಜದ ಮುಖ್ಯ ಕುಲಕಸುಬುಗಳು ಈಗಾಗಲೇ ಸುಮಾರು70ರಷ್ಟು ಕಡಿಮೆಯಾಗಿವೆ.ಹಿಂದಿನ ಕಾಲದಲ್ಲಿ ಹಳ್ಳಿಗಳಲ್ಲಿ ಜನರು ವ್ಯವಸಾಯಕ್ಕಾಗಿ ವಿಶ್ವಕರ್ಮ ಸಮಾಜವನ್ನೇ ನಂಬಿಕೊಂಡಿದ್ದರು.ಇತ್ತೀಚಿನ ದಿನಗಳಲ್ಲಿ ಟ್ಯ್ರಾಕ್ಟರ್ ನಂತಹ ವಾಹನಗಳು ಆಗಮಿಸಿ ಕುಲಕಸುಬುಗಳು ನಶಿಸುತ್ತಾ ಬಂದಿವೆ ಆದ್ದರಿಂದ ಅನಿವಾರ್ಯವಾಗಿ ಸಮಾಜಕ್ಕೆ ಮೀಸಲಾತಿ ಅತ್ಯವಶ್ಯಕವಾಗಿದೆ. ಇದರಿಂದ ಸಮಾಜದ ನಾಯಕರಾದ ಕೆ.ಪಿ.ನಂಜುಂಡಿ ಅವರು ಮೀಸಲಾತಿ ಜಾಗೃತಿ ಸಭೆ ಹಾಗೂ ಲಿಂಗಸೂಗೂರಿನಿಂದ ರಾಯಚೂರವರೆಗೆ ರಾಜ್ಯದಲ್ಲೇ ಪ್ರಪ್ರಥಮ ಬಾರಿಗೆ ಪರಿಶಿಷ್ಟ ಮೀಸಲಾತಿಗಾಗಿ ಪಾದಯಾತ್ರೆಗೆ ಚಾಲನೆ ನೀಡಿದ್ದಾರೆ.ಇದನ್ನು ನಾವುಗಳೆಲ್ಲರೂ ಮನಗೊಳ್ಳಬೇಕು ಮತ್ತು ರಾಜ್ಯದೆಲ್ಲಡೆ ಜನಜಾಗೃತಿ ಸಭೆ ಮಾಡುವ ಮೂಲಕ ಸಮಾಜದ ಬಂಧುಗಳಿಗೆ ಮೀಸಲಾತಿ ಅರಿವು ಮೂಡಿಸಬೇಕಾಗಿದೆ. ಲಿಂಗಸೂಗೂರು ರಾಯಚೂರು ಪಾದಯಾತ್ರೆ ರಾಜ್ಯಕ್ಕೆ ಮಾದರಿಯಾಗಿದೆ ಈ ಪಾದಯಾತ್ರೆಯಲ್ಲಿ ಭಾಗವಹಿಸಿದ ಸಮಾಜದ ಬಂಧುಗಳಿಗೆ ಹಾಗೂ ದಾರಿಯುದ್ದಕ್ಕೂ ಪಾದಯಾತ್ರೆ ಮಾಡಲು ಸಹಕಾರ ನೀಡಿದ ಎಲ್ಲ ನನ್ನ ರಕ್ತ ಸಂಬಂದಿಕರಿಗೆ ತುಂಬಾ ಧನ್ಯವಾದಗಳು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಬ್ರಹ್ಮಗಣೇಶ ವಕೀಲರು,ಅ ಕ ವಿ ಮ ಜಿಲ್ಲಾ ಅದ್ಯಕ್ಷ ಮಾರುತಿ ಬಡಿಗೇರ,ರಾ ಜಿ ವಿ ಸ ಜಿಲ್ಲಾಧ್ಯಕ್ಷ ಗಿರೀಶ ಆಚಾರ್ಯ,ಕಲ್ಬುರ್ಗಿ ಅ.ಕ.ವಿ.ಮ ಮಾಜಿ ಜಿಲ್ಲಾದ್ಯಕ್ಷ ಅಶೋಕ ಪೊದ್ದಾರ,ರಾ ಜಿ ವಿ ಸ ದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ರಾಮು ಗಾಣಧಾಳ, ಮಹಾಸಭಾ ಜಿಲ್ಲಾ ಉಪಾಧ್ಯಕ್ಷ ಉಮೇಶ್ ಬಡಿಗೇರ್, ಜಿಲ್ಲಾ ಹಿರಿಯ ಮುಖಂಡರಾದ ಅಮರೇಶ್ ಬಡಿಗೇರ್, KVCDC ಮಾಜಿ ನಿರ್ದೇಶಕ ಉದಯ ಕುಮಾರ ಕಂಬಾರ, ಲಿಂಗಸುಗೂರು ಮಹಾಸಭಾ ತಾಲೂಕ ಅಧ್ಯಕ್ಷರು ಅಯ್ಯಪ್ಪ ಪತ್ತಾರ,ಮಹಾಸಭಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮನೋಹರ್ ಬಡಿಗೇರ,ಜಿಲ್ಲಾ ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷ ಡಾ.ವೆಂಕಟೇಶ ಅನ್ವರಿ, KVCDC ಜಿಲ್ಲಾ ನಾಮನಿರ್ದೇಶಕ ಎಸ್ ರವೀಂದ್ರ ಕುಮಾರ, ಸಮಾಜದ ಯುವ ಅಧ್ಯಕ್ಷ ಮಲ್ಲಿಕಾರ್ಜುನ ಬಡಿಗೇರ,ಮಹಾಸಭಾ ಜಿಲ್ಲಾ ಯುವ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ ಮಸ್ಕಿ,ಲಿಂಗಸೂಗೂರು ಸಮಾಜದ ಮುಖಂಡರಾದ ಕಸಬಾ ಲಿಂಗಸಗೂರು ವೀರಭದ್ರಪ್ಪ,ಕರಸ್ಥಾಳಪ್ಪ ಬಡಿಗೇರ, ರಮೇಶ್ ಪತ್ತಾರ ಗುರುಗುಂಟ,ಪ್ರಕಾಶ ವಕೀಲರು, ನೀಲಪ್ಪ ಕಂಬಾರ,ವೀರಭದ್ರಪ್ಪ ಹುಲಿಗುಡ್ಡ,ಬೊಮ್ಮನಾಳ ಮಲ್ಲಯ್ಯ, ಸುರೇಶ್ ಪತ್ರಕರ್ತರು, ಮೇಗಲ್ ಪೇಟೆ,ಮೌನೇಶ, ಕನ್ನಳ ಮೌನೇಶ,ಕಾಳಪ್ಪ, ಶ್ರೀಶೈಲಪ್ಪ,ಸತೀಶ ಪತ್ತಾರ, ನಾಗರಾಳ ವೀರೇಶ,ನಾಗರಾಳ ಮೌನೇಶ,ವಿನೋದ ಕುಮಾರ್,ಪ್ರಶಾಂತ, ರವಿಕುಮಾರ,ಮುರುಳಿದರ ಹಟ್ಟಿ,ಮಹಿಳಾ ಘಟಕದ ತಾಲೂಕ ಅದ್ಯಕ್ಷೆ ಭಾನುಮತಿ, ಅನ್ನಪೂರ್ಣಮ್ಮ,ಜಯಶ್ರೀ ಬಡಿಗೇರ,ಲಕ್ಷ್ಮಿದೇವಿ ಕೆ ಹೊಸಳ್ಳಿ,ಸುಮಂಗಳ,ಸಿಂಧನೂರು ತಾಲೂಕ ಅದ್ಯಕ್ಷ ವೀರಭದ್ರಪ್ಪ ಹಂಚಿನಾಳ,ಮಸ್ಕಿ ತಾಲೂಕ ಅದ್ಯಕ್ಷ ಕಾಳಪ್ಪ ಕಣ್ಣೂರು, ಸಿರವಾರ ಸಮಾಜದ ತಾಲೂಕ ಅಧ್ಯಕ್ಷ ಪ್ರಭುಸ್ವಾಮಿ ಹೀರಾ, ಸಿಂಧನೂರಿನ ಧರ್ಮಣ್ಣ ಗುಂಜಳ್ಳಿ, ಮಂಜುನಾಥ ಬಡಿಗೇರ ಕೋಟ್ನಕಲ್, ಬಸವರಾಜ ಕಮತಗಿ,ಚನ್ನಪ್ಪ ಕೆ ಹೊಸಳ್ಳಿ, ಮುತ್ತಣ್ಣ ಪತ್ತಾರ,ರಾಜು ಬಳಗನೂರು,ಮಸ್ಕಿ ತಾಲೂಕಿನ ಪಂಪಾಪತಿ ಬಡಿಗೇರ,ಪ್ರಬಣ್ಣ ಬಡಿಗೇರ,ಪಂಪಣ್ಣ ಬಡಿಗೇರ,ಮೌನೇಶ ಬೆಳ್ಳಿಗನೂರ,ಸಿರವಾರ ತಾಲೂಕಿನ ಮೌನೇಶ ಜಾಡಲ್ದಿನ್ನಿ,ಮಲ್ಲಿಕಾರ್ಜುನ ಬಡಿಗೇರ,ದೇವರಾಜ ಬಡಿಗೇರ,ರಾಯಚೂರಿನ ನರಸಪ್ಪ ಕಂಬಾರ ಬ್ಯಾಂಕ್, ಪ್ರಕಾಶ ಗುಂಜಳ್ಳಿ, ಮೌನೇಶ ಗೋನವರ, ವೀರೇಶ ಜಲಾಲನಗರ್,ಮೌನೇಶ ವಡವಾಟಿ, ವಿನೋದ ಕುಮಾರ್ ವಲ್ಕಮದಿನ್ನಿ ಇನ್ನು ಮುಂತಾದವರು ಉಪಸ್ಥಿತರಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ