ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಸರ್ವ ಧರ್ಮಗಳ ಭಾವೈಕ್ಯತೆಯನ್ನು ಹೊಂದಿರುವ ಸೀಮೆ: ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಜೀ

ಹನೂರು:ತಾಲೂಕಿನ ಒಡೆಯರ್ ಪಾಳ್ಯ ಗ್ರಾಮದಲ್ಲಿ ಗುರು ಮಲ್ಲೇಶ್ವರ ಸಭಾ ಭವನ ಉದ್ಘಾಟನಾ ಕಾರ್ಯವನ್ನು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಗಳು ಹಾಗೂ ಸಾಲೂರು ಬೃಹನ್ ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿಗಳು ನೆರವೇರಿಸಿದರು.
ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಈ ಕ್ಷೇತ್ರವನ್ನು ಮಲೆಗಳ ಸಾಲು ಎಂದು ಕರೆಯಬಹುದು ಇದು ಇಂದಿನಿಂದ ಬಂದ ಪ್ರತೀತಿಯಾಗಿದೆ ಎಲ್ಲಾ ಧರ್ಮಗಳ ಭಾವೈಕ್ಯತೆಯನ್ನು ಹೊಂದಿರುವ ಸೀಮೆ ಇದು ಇಲ್ಲಿಗೆ ಬರದೇ ಇರುವ ಸ್ವಾಮೀಜಿಗಳಿಲ್ಲ ನಾವೆಲ್ಲರೂ ಧಾರ್ಮಿಕ ಪರಂಪರೆಯನ್ನು ಶ್ರೀಮಂತಿಕೆಯಿಂದ ಮುಂದುವರೆಸಿಕೊಂಡು ಹೋಗಬೇಕು ಈ ಕಟ್ಟಡ ಅನೇಕ ಕಾಲದಿಂದ ಪೂರ್ಣವಾಗದೆ ನಿಂತಿತ್ತು, ಅದನ್ನು ಪೂರ್ಣಗೊಳಿಸಿದ ಕೀರ್ತಿ ನಿಶಾಂತ್ ಅವರಿಗೆ ಸಲ್ಲುತ್ತದೆ. ಸಮಾಜ ಎಲ್ಲಿ ನಿಂತಿದೆ ಎಂದರೆ ಅದು ಮಠಗಳ ಮೇಲೆ ನಿಂತಿದೆ, ನಮ್ಮ ವೀರಶೈವ ಲಿಂಗಾಯತರ ಜೀವ ಎಲ್ಲಿದೆ ಎಂದರೆ ಅದು ಮಠಗಳಲ್ಲಿ ಮಾತ್ರ ಇದೆ . ನಮ್ಮ ಪರಂಪರೆಯಲ್ಲಿ ನಾವು ಯಾರು ಎಂದು ತಿಳಿದಿಲ್ಲ ಬಸವಣ್ಣರು ಹೇಳಿದ ಹಾಗೆ ನಾವು ನಡೆದುಕೊಳ್ಳುತ್ತಿದ್ದೀವಾ, ಮಕ್ಕಳಿಗೆ ತಾಯಂದಿರು ಕಾಯಕವನ್ನು ಮಾಡಿಸಬೇಕು ಹಾಗೂ ಎಲ್ಲವೂ ಒಟ್ಟಾಗಿ ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬರಬೇಕು ಎಂಬುದಾಗಿ ತಿಳಿಸಿದರು.
ಸಾಲೂರು ಬೃಹನ್ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರು ಮಾತನಾಡಿ ಗುರು ಮಲ್ಲೇಶ್ವರ ಸಭಾಭವನ ಒಂದು ಸುಂದರವಾದ ಕಟ್ಟಡವಾಗಿ ತಲೆಯೆತ್ತಿ ನಿಂತಿದೆ ಈ ಕಟ್ಟಡ ಅರ್ಧದಲ್ಲಿ ನಿಂತಿದ್ದ ಸಮಯದಲ್ಲಿ ಊರಿನ ಗ್ರಾಮಸ್ಥರು ಬಂದು ನಿಶಾಂತ್ ರವರ ಬಳಿ ಈ ಕಟ್ಟಡವನ್ನು ಪೂರ್ಣಗೊಳಿಸಲು ಕೇಳುತ್ತೇವೆ ಎಂದು ಹೇಳಿದ್ದರು ಆ ಸಮಯದಲ್ಲಿ ನಿಶಾಂತ್ ರವರು ಆ ಕಟ್ಟಡದ ಪೂರ್ಣ ಜವಾಬ್ದಾರಿಯನ್ನು ತೆಗೆದುಕೊಂಡು ಕೇವಲ ಆರು ತಿಂಗಳಲ್ಲಿ ಕಟ್ಟಡವನ್ನು ಪೂರ್ಣಗೊಳಿಸಿದ್ದಾರೆ. ಅನೇಕ ದೇವಾಲಯಗಳ ಜೀರ್ಣೋದ್ಧಾರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ಸನ್ನು ಪಡೆದಿದ್ದಾರೆ. ಈ ಸಭಾಭವನದ ಉದ್ಘಾಟನೆಗೂ ಮುಂಚೆಯೇ ಒಂದು ಮದುವೆ ಕಾರ್ಯಕ್ರಮ ಮಾಡಲು ಕೇಳಿಕೊಂಡಿರುತ್ತಾರೆ. ಈ ಸಭಾಭವನವು ಕೇವಲ ಮದುವೆ ಹಾಗೂ ಸಂತೋಷದ ಸಂದರ್ಭಗಳಿಗೆ ಸೀಮಿತವಾಗಬಾರದು ಇಲ್ಲಿ ತಿಂಗಳಿಗೆ ಅಥವಾ ಎರಡು ತಿಂಗಳಿಗೆ ಗುರುಗಳಿಂದ ಆಶೀರ್ವಚನ ಕಾರ್ಯಕ್ರಮಗಳು ನಡೆಯುವುದರಿಂದ ಮಕ್ಕಳಲ್ಲಿ ಭಾವೈಕ್ಯತೆಯನ್ನು ಮೂಡಿಸಲು ನಾವೆಲ್ಲರೂ ಶ್ರಮಿಸಬೇಕು ಎಂಬುದಾಗಿ ತಿಳಿಸಿದರು.
ಪೊನ್ನಚಿ ಮಾದೇವಸ್ವಾಮಿ ನವರು ಮಾತನಾಡಿ ನಿಶಾಂತ್ ರವರು ಕಳೆದ 9 ತಿಂಗಳಿನ ಹಿಂದೆ
ಹನೂರಿಗೆ ಬಂದು ತಮ್ಮ ಕೈಲಾದಷ್ಟು ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅವರು ಸುಮಾರು 140 ದೇವಸ್ಥಾನಗಳ ಜೀರ್ಣೋದ್ಧಾರ ಮಾಡಿದ್ದಾರೆ. 25 ಮಠಗಳನ್ನು ಜೀರ್ಣೋದ್ಧಾರ ಮಾಡಲು ಸಹಾಯ ಹಸ್ತವನ್ನು ಚಾಚಿದ್ದಾರೆ, ಸುಮಾರು 12 ಕುಡಿಯುವ ನೀರಿನ ಘಟಕವನ್ನು ಸ್ಥಾಪನೆ ಮಾಡಿದ್ದಾರೆ. ಹಾಲಂಬಾಡಿಯಲ್ಲಿ 19 ಕುಟುಂಬಕ್ಕೆ 19 ಹಸುವನ್ನು ನೀಡಿದ್ದಾರೆ ಬಡವರು ಬದುಕನ್ನು ಕಟ್ಟಿಕೊಳ್ಳಲಿ ಎಂಬ ಉದ್ದೇಶದಿಂದ ನೀಡಿರುತ್ತಾರೆ. ಕಾಮಗೆರೆಯ ಆದಿ ಜಾಂಬವ ಜನಾಂಗದ ಕಂಡಾಯಕೆ 5 ಕೆಜಿ ಬೆಳ್ಳಿಯನ್ನು ಕೊಟ್ಟಿರುತ್ತಾರೆ. ಕೊತ್ತನೂರು ಹಾಗೂ ಲೋಕ್ಕನಹಳ್ಳಿಯಲ್ಲಿ ಅಂಬೇಡ್ಕರ್ ಪ್ರತಿಮೆಗೆ ಸಹಾಯ ಹಸ್ತವನ್ನು ಚಾಚಿದ್ದಾರೆ. ಉಪ್ಪರ ಸಮುದಾಯ ಭವನಕ್ಕೆ ಒಂದು ಎಕರೆ ಜಮೀನನ್ನು ಖರೀದಿ ಮಾಡಿಕೊಟ್ಟಿರುತ್ತಾರೆ. ಇದೇ ರೀತಿ ಹನೂರು ಕ್ಷೇತ್ರದಲ್ಲಿ ಸುಮಾರು 30 ಕೋಟಿ ಹಣವನ್ನು ಖರ್ಚು ಮಾಡಿದ್ದಾರೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ತ್ರಿವಿಧ ದಾಸೋಹ ಮಹಾಮಠ ದೇವನೂರು ಶ್ರೀ ಮಹಾಂತ ಸ್ವಾಮಿಗಳು, ಕುಂದೂರು ಮಠ ಮೈಸೂರು ಶ್ರೀ ಶರತ್ ಚಂದ್ರ ಸ್ವಾಮೀಜಿಗಳು, ಕುದೇರು ಮಠದ ಶ್ರೀ ಗುರುಶಾಂತ ಸ್ವಾಮಿಗಳು, ದೊಡ್ಡ ಮಠ ಬಂಡಳ್ಳಿ ಶ್ರೀ ಫಲಹಾರ ಪ್ರಭುದೇವಸ್ವಾಮಿಗಳು, ಪಟ್ಟದ ಮಠ ಗುಂಡೆಗಾಲ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿಗಳು, ನಿಶಾಂತ್ ಇನ್ನು ಮುಂತಾದ ಮುಖಂಡರುಗಳು ಹಾಜರಿದ್ದರು.

ವರದಿ: ಉಸ್ಮಾನ್ ಖಾನ್.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ