ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಮಂಗಳೂರಿನ ಸ್ವರೂಪ ಅಧ್ಯಯನ ಕೇಂದ್ರದಿಂದ “ಪುಸ್ತಕ ಪ್ರೀತಿ” ಕಾರ್ಯಾಗಾರ

ಕೊಡಿಯಾಲಬೈಲ್ , ಮಂಗಳೂರು ಫೆಬ್ರವರಿ 25 : ರಾಷ್ಟ್ರೀಯ ಅಭಿವೃದ್ಧಿ ಶಿಕ್ಷಣ ಯೋಜನೆ – 2023 , ಸ್ವರೂಪ ಜ್ಞಾನ ಭಾರತಿ ಸಮಿತಿ , ಮಂಗಳೂರು ಇದರ ಸಹಯೋಗದಲ್ಲಿ ಎರಡು ದಿನಗಳ ” ಪುಸ್ತಕ ಪ್ರೀತಿ ” ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಗುರುರಾಜ ಮಾರ್ಪಳ್ಳಿ ನೆರವೇರಿಸಿದರು. ಮುಖ್ಯ ಅತಿಥಿ ಯಾಗಿ ಶ್ರೀ . ವಿವೇಕಾನಂದ ಎಚ್ ಆರ್ ಬೆಂಗಳೂರು ಉಪಸ್ಥಿತರಿದ್ದರು. ಶ್ರೀ . ಗೋಪಾಡ್ಕರ್ ಮತ್ತು ಶ್ರೀಮತಿ ಸುಮಾಡ್ಕರ್ ಕಾರ್ಯಕ್ರಮವನ್ನು ನಿರೂಪಿಸಿದರು. ದಿನ ಪೂರ್ತಿ ಉಪಸ್ಥಿತರಿದ್ದ ಖ್ಯಾತ ಸಾಹಿತಿಗಳು ಮತ್ತು ಉದಯೋನ್ಮುಖ ಬರಹಗಾರರಿಂದ ಕತೆ , ಕವನ ಗಳನ್ನು ಬರೆಸಿ ಗುಂಪು ಚರ್ಚೆ ಮಾಡಲಾಯಿತು. ಸಂಜೆ 4 :೦೦ ಗೆ ಸಾಹಿತಿ ಶ್ರೀ . ಗುರುರಾಜ ಮಾರ್ಪಳ್ಳಿ ಯವರು ಬರೆದ ” ಅವ್ವ ನನ್ನವ್ವ ” ಪುಸ್ತಕವನ್ನು ಸಾಹಿತಿ ಶ್ರೀ . ವಿವೇಕಾನಂದ ಎಚ್ . ಆರ್ ಬಿಡುಗಡೆ ಗೊಳಿಸಿದರು. ನಂತರ ಲೇಖಕಿ ಶ್ರೀಮತಿ. ಕಾತ್ಯಾಯಿನಿ ಕುಂಜಿಬೆಟ್ಟು ಪುಸ್ತಕದ ಸ್ತೂಲ ಪರಿಚಯ ಮಾಡಿದರು. ಸಾಹಿತಿ ಶ್ರೀ . ಗುರುರಾಜ ಮಾರ್ಪಳ್ಳಿ ಪುಸ್ತಕದ ಬಗ್ಗೆ ವಿವರಿಸುತ್ತಾ ಇದು ತನ್ನ ತಾಯಿ ಗಾಗಿ ಬರೆದ ಪುಸ್ತಕ , ತಾಯಿಗೆ ಸಮರ್ಪಿತ ಎಂದು ಹೇಳಿದರು. ಸಭೆಗೆ ಪರಿಸರ ಪ್ರೇಮಿ ಶ್ರೀ . ದಿನೇಶ್ ಹೊಳ್ಳ ಮೆರುಗು ಕೊಟ್ಟರು. ಶ್ರೀ . ವಾಡ್ಕರ್ ಬಗ್ಗೆ ಅಭಿಮಾನ ವ್ಯಕ್ತ ಪಡಿಸುತ್ತಾ , ಶ್ರೀಯುತರ ಸಂಸ್ಥೆಯ ವಿದ್ಯಾರ್ಥಿ ಗಳ ಜೊತೆ ಹನ್ನೆರಡು ವರ್ಷಗಳ ಸಂಪರ್ಕ ವನ್ನು ನೆನಪಿಸಿಕೊಂಡರು. ಸಂಜೆ 5 ಗಂಟೆ ಗೆ ನಮ್ಮ ತುಳುವೆರ್ ಮುದ್ರಾಡಿ ಬಳಗದವರಿಂದ ” ಅವ್ವ ನನ್ನ ಅವ್ವ ” 1೦೦ ನೇ ನಾಟಕ ಪ್ರದರ್ಶನ ದೊಂದಿಗೆ ಇವತ್ತಿನ ಕಾರ್ಯಕ್ರಮ ಮುಕ್ತಾಯ ಗೊಂಡಿತು.
ವರದಿ. ಚಂದ್ರಶೇಖರ ಹೆಬ್ಬಾರ್ ಕೊಲ್ಯ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ