ಕೊಪ್ಪಳ: ಗಂಗಾವತಿ ನಗರದ ಮೈಬುಬ್ ನಗರ ಮತ್ತು ಮಾಜಿ ಸಚಿವರಾದ ಇಕ್ಬಾಲ್ ಅನ್ಸಾರಿಯವರ ಪರವಾಗಿ ಅಭಿವೃದ್ಧಿಗಾಗಿ ಅನ್ಸಾರಿ ಎನ್ನುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ನಗರ ಘಟಕದ ಅಧ್ಯಕ್ಷರಾದ ಶ್ಯಾಮಿದ್ ಮನಿಯರ್ ನಗರಸಭಾ ಸದಸ್ಯರಾದ ಮನೋಹರ್ ಸ್ವಾಮಿ ಹಿರೇಮಠ, ಕಾಶಿಮ್ ಸಾಬ್ ಗದ್ವಾಲ್, F.ರಾಘವೇಂದ್ರ, ಪಕ್ಷದ ಹಿರಿಯ ನಾಯಕರಾದ ಎಸ್. ಬಿ. ಖಾದ್ರಿ, ಮಾಜಿ ಸದಸ್ಯರಾದ ಕಮಲಿ ಬಾಬಾ, ಪಕ್ಷದ ನಾಯಕರಾದ ಗಿರೀಶ್ ಗಾಯಕ್ವಾಡ್, ಜ್ಯೋತಿ ಸಿಂಗ್, ದುರ್ಗೇಶ್ ದೊಡ್ಡಮನಿ,ಸಲೀಂ, ಗಿಡ್ಡ ಹುಸೇನ್, ಮಂಜು, ಫಯಾಜ್, ದಾವುಲ್, ಗೌಸ್ ಮತ್ತು ಮೈಬೂಬ ನಗರ ಮತ್ತು ಗೌಸಿಯ ಕಾಲೋನಿಯ ಕಾಂಗ್ರೆಸ್ ಪಕ್ಷದ ನಾಯಕರುಗಳು ಮತ್ತು ಸಾವಿರಾರು ಕಾರ್ಯಕರ್ತರು, ಮಹಿಳೆಯರು ಭಾಗವಹಿಸಿದ್ದರು. ಸಂದರ್ಭದಲ್ಲಿ ಮಾತನಾಡಿದ ಅನ್ಸಾರಿ ಅವರು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಗೃಹ ಲಕ್ಷ್ಮಿ, ಗೃಹಜ್ಯೋತಿ ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ತರಲಾಗುವುದು, ಭ್ರಷ್ಟ ಬಿಜೆಪಿ ಸರ್ಕಾರದ ಕಾರ್ಯವೈಖರಿಗೆ ಜನ ಬೇಸತ್ತು ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಲಿದ್ದಾರೆ, ಬಡ ಮಕ್ಕಳಿಗೆ ಸಮವಸ್ತ್ರ,ಶೂ, ಲ್ಯಾಪ್ಟಾಪ್ ವಿತರಿಸದೆ ಅನ್ಯಾಯ ಮಾಡಿದೆ, ಅನ್ನಭಾಗ್ಯ ಅಕ್ಕಿಯಲ್ಲಿ 2 ಕೆಜಿ ಕಡಿತ ಮಾಡಿದೆ, ಬಿಜೆಪಿ ಅಕ್ರಮ ನೇಮಕಾತಿ, ಕಮಿಷನ್ ದಂಧೆ,ಬೆಲೆ ಏರಿಕೆ ವಿರುದ್ಧ ಜನ ರೋಸಿ ಹೋಗಿದ್ದಾರೆ ಮತ್ತು ಗಂಗಾವತಿ ಕ್ಷೇತ್ರಕ್ಕೆ ಚುನಾವಣೆಗೆ ಹೊಸ ಪಕ್ಷದಿಂದ ಸ್ಪರ್ಧಿಸಲು ವ್ಯಕ್ತಿ ಒಬ್ಬರು ಬಂದಿದ್ದಾರೆ ಅವರ ಬಣ್ಣದ ಮಾತಿಗೆ ಯುವಕರು ಮತ್ತು ಕ್ಷೇತ್ರದ ಜನತೆ ಬಲಿಯಾಗಬೇಡಿ, ನಾನು ನಿಮ್ಮವನು ನಿಮ್ಮ ಜೊತೆ ಇರುತ್ತೇನೆ ಆಶೀರ್ವಾದ ಮಾಡಬೇಕು ಎಂದರು.
