ಸಿಂಧನೂರು ಅಮರ ಶ್ರೀ ಆಲದ ಮರದ ಹತ್ತಿರ ಅಮರೇಗೌಡ ಮಲ್ಲಾಪೂರ ಅವರ ಮಾತೃವಿಯೋಗವಾಗಿ 9ವರ್ಷಗಳು ಕಳೆದ ನೆನಪಿಗಾಗಿ ಇಂದು ಹಣ್ಣಿನ ಸಸಿ ನೆಟ್ಟು ನೀರುಣಿವ ಕಾಯಕ ನೆರವೇರಿತು.
ಪರಿಸರ ಸಂರಕ್ಷಣೆ,ಪರಿಸರ ಜಾಗೃತಿಯಲ್ಲಿ ಪ್ರತಿದಿನ ಪ್ರತಿಕ್ಷಣ ತೊಡಗಿರುವ ಪರಿಸರ ಪ್ರೇಮಿ ಅಮರೇಗೌಡ ಮಲ್ಲಾಪೂರ ಅವರು ತಾಯಿಯ ಮಾತೃವಿಯೋಗ ಸವಿನೆನಪಿಗಾಗಿ ಇಂದು ಸಸಿ ನೆಟ್ಟು ನೀರುಣಿಸಿದ್ದಾರೆ. ಅಮರೇಗೌಡ ಮಲ್ಲಾಪೂರ ಅವರ ಕಾರ್ಯ ತುಂಬಾ ಶ್ಲಾಘನೀಯವಾದದ್ದು ಅವರು ತಾಯಿಯನ್ನು ಕಳೆದುಕೊಂಡ 9ವರ್ಷಗಳು ಕಳೆದಿವೆ.ಇದರ ಸವಿನೆನಪಿಗಾಗಿ ಇಂದು ಹಣ್ಣಿನ ಸಸಿನೆಟ್ಟು ನೀರುಣಿಸುತ್ತಿದ್ದಾರೆ. ತಾಯಿಯ ಸವಿನೆನಪಿಗಾಗಿ ಈ ಸಮಾಜಕ್ಕೆ ಪರಿಸರಕ್ಕೆ ಏನಾದರೂ ಕೊಡುಗೆ ನೀಡಬೇಕೆಂದು ರಾಜ್ಯಾದ್ಯಂತ ಇಲ್ಲಿಯವರೆಗೆ ಲಕ್ಷಾಂತರ ಸಂಖ್ಯೆಯಲ್ಲಿ ಗಿಡ ನಟ್ಟು ಪೋಷಣೆ ಮಾಡುವ ಕಾರ್ಯನಿರ್ವಹಿಸಿದ್ದಾರೆ. ಅಮರೇಗೌಡ ಮಲ್ಲಾಪೂರ ಅವರು ತಾಯಿಯಂತೆ ಗಿಡಮರಗಳನ್ನು ಪೋಷಣೆ ಮಾಡುತ್ತಿರುವುದು ತುಂಬಾ ಹೆಮ್ಮೆಯ ವಿಷಯ ಅವರಿಗೆ ಅಭಿನಂದನೆಗಳನ್ನು ತಿಳಿಸುತ್ತೇನೆ.ಇದೀಗ ರಾಜ್ಯಾದ್ಯಂತ ಲಕ್ಷಾಂತರ ಸಂಖ್ಯೆಯಲ್ಲಿ ಸಸಿಗಳನ್ನು ಬೆಳಸಿದ ಕೀರ್ತಿ ವನಸಿರಿ ತಂಡಕ್ಕೆ ಸಲ್ಲುತ್ತದೆ.ಇದು ಅಮರೇಗೌಡ ಮಲ್ಲಾಪೂರ ಅವರ ತಾಯಿಯ ಆರ್ಶೀವಾದದಿಂದನೇ ಕಾರಣ ಎಂದು ಹೇಳಲು ಹೆಮ್ಮೆ ಅನಿಸುತ್ತದೆ ಎಂದು ಉಮೇಶ ಗೌಡ ಅರಳಹಳ್ಳಿ ಶ್ಲಾಘನೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ವನಸಿರಿ ಫೌಂಡೇಶನ್ ಗೌರವ ಅದ್ಯಕ್ಷ ಶಂಕರಗೌಡ ಎಲೆಕೂಡ್ಲಿಗಿ, ವನಸಿರಿ ಫೌಂಡೇಶನ್ ಸಂಸ್ಥಾಪಕ ಅದ್ಯಕ್ಷ ಅಮರೇಗೌಡ ಮಲ್ಲಾಪೂರ,ರಾಜ್ಯ ಕಾರ್ಯದರ್ಶಿ ಶರಣೇಗೌಡ ಹಡಗಿನಾಳ,ಅಮರಯ್ಯ ಶಾಸ್ತಿ ಪತ್ರಿಮಠ,ಉಮೇಶ ಅರಳಹಳ್ಳಿ,ಮುದಿಯಪ್ಪ ಹೊಸಳ್ಳಿ ಕ್ಯಾಂಪ್,ಮಸ್ಕಿ ತಾಲೂಕ ಅದ್ಯಕ್ಷ ರಾಜು ಬಳಗಾನೂರ,ವೆಂಕಟರಡ್ಡಿ ಹೆಡಗಿನಾಳ,ಪ್ರದೀಪಗೌಡ ಕನ್ನಾರಿ ಇನ್ನೂ ಹಲವಾರು ಪರಿಸರ ಪ್ರೇಮಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.