ಹಾನಗಲ್: ನಾಡಿನ ಜಲ ನೆಲ ಧರ್ಮ ಸಂಸ್ಕೃತಿ ಉಳುವಿಗಾಗಿ ಹಲವಾರು ಸಂಘಟನೆಗಳು ಸೇನೆಗಳು ವೇದಿಕೆಗಳು ಉದ್ಭವಗೊಂಡಿವೆ. ದೇಶದ ನಾನಾ ಭಾಗಗಳಲ್ಲಿ ರಾಜ್ಯದ ಉಳಿವಿಗಾಗಿ ತಮ್ಮದೇ ಆದ ಸಂಘಟನೆಗಳನ್ನ ರಚಿಸಿಕೊಂಡು ಅಲ್ಲಿಯ ನೆಲ ಜಲ ಸಂಸ್ಕೃತಿಗಾಗಿ ತಮ್ಮದೇ ಆದ ಸಂಘಟನೆಗಳನ್ನು ಕಟ್ಟಿಕೊಂಡು ಹೋರಾಡುತ್ತಿವೆ. ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಧ್ಯಕ್ಷರಾದ ಶ್ರೀ ನಿಂಗರಾಜ್ ಗೌಡ್ರು , ಆದೇಶದ ಮೇರೆಗೆ ಇಂದು ಹಾವೇರಿ ಜಿಲ್ಲಾ ಹಾನಗಲ ತಾಲೂಕಿನ ಪ್ರವಾಸಿ ಮಂದಿರದಲ್ಲಿ ನೂತನವಾಗಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ತಾಲೂಕ ಘಟಕ ಉದ್ಘಾಟನೆಯನ್ನು ಮಾಡಲಾಯಿತು.. ಜೊತೆಗೆ ಮಹಿಳಾ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಸೇನೆಯ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಈ ಒಂದು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶ್ರೀ ಎಂ ಕೆ ತಿಮ್ಮಾಪುರ ಜಿಲ್ಲಾ ಗೌರವ ಅಧ್ಯಕ್ಷರು. ಜಿಲ್ಲಾಧ್ಯಕ್ಷರಾದ ಶ್ರೀ ರಾಮು ತಳವಾರ, ತಾಲೂಕ ಅಧ್ಯಕ್ಷರಾದ ಶ್ರೀ ಮಾರುತಿ ತಾಳಂದ, ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಸುಮಾ ಪುರದ, ಜಿಲ್ಲಾ ಉಪಾಧ್ಯಕ್ಷರಾದ ಶ್ರೀಮತಿ ಗೀತಾ ಅರಳಂತಿ ಮಠ, ಶ್ರೀ ಮಂಜುನಾಥ ತುರುವಂದ, ಜಿಲ್ಲಾ ಅಧ್ಯಕ್ಷರು ಕಾರ್ಮಿಕ ಘಟಕ. ಶ್ರೀ ಜಿ ,ಎಸ್, ಪಾಟೀಲ, ಅಧ್ಯಕ್ಷರು ತಾಲೂಕ ಘಟಕ, ಹಾನಗಲ ನಗರ ಘಟಕದ ಅಧ್ಯಕ್ಷರಾದ ಶ್ರೀಮತಿ ಪ್ರೇಮ ಮುದಿಗೌಡರ ನಗರ ಘಟಕದ ಉಪಾಧ್ಯಕ್ಷರಾದ ಶ್ರೀಮತಿ ಪ್ರೇಮಾ ಕಮ್ಮಾರ, ಹಾನಗಲ್ ತಾಲೂಕ ಘಟಕದ ಅಧ್ಯಕ್ಷರು ಶ್ರೀಮತಿ ಅರುಂಧತಿ, ಎಸ್, ಶಾಂತಪುರ ಮಠ, ಶ್ರೀ ಚನ್ನಬಸಯ್ಯ ಕಂತಿಮಠ, ತಾಲೂಕ ಅಧ್ಯಕ್ಷರು ರೈತ ಘಟಕ ಹಾನಗಲ. ಶ್ರೀ ಪ್ರಭಾಕರ ಬಿಸ್ನಾಳ, ಶ್ರೀ ಶಾಂತಪ್ಪ ಎಸ್ ಮಗಂತಿ, ಶ್ರೀಮತಿ ದಿಲ್ ಶಾಬಿ ನೀರಲಗಿ, ಶ್ರೀಮತಿ ಗಾಯತ್ರಿ ಶ್ರೀ ಬಸವರಾಜ ಲಕ್ಮಪುರ ಶ್ರೀ ಎಲ್ಲಪ್ಪ ಹೆಗ್ಗಣ್ಣನವರ, ಇನ್ನೂ ಹಲವಾರು ಪ್ರತಿನಿಧಿಗಳು ಈ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು. ವರದಿಗಾರರು_ರವಿ ಓಲೆಕಾರ. ಹಾನಗಲ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.