ಕಲಬುರಗಿ/ ಸುರಪುರ ನಗರದ ಹೊರವಲಯದ ಗುಡಿಹಾಳ (ಜೆ) ಗ್ರಾಮದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದು ಶಾಲೆಗೆ ಶೇ 97. 22% ಫಲಿತಾಂಶ ಬಂದಿದೆ.
ಶಾಲೆಯ ವಿದ್ಯಾರ್ಥಿನಿ ಅನನ್ಯ (601/96.16%) ಅಂಕಗಳನ್ನು ಪಡೆದುಕೊಂಡು ಶಾಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
ಬಸನಗೌಡ (595/95.2%) ಅಂಕಗಳನ್ನು ಪಡೆದು ಶಾಲೆಗೆ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾನೆ.
ಭಾಗ್ಯ (593/94.88%) ಅಂಕಗಳನ್ನು ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ ಜೊತೆಗೆ ನಂದಿನಿ (581/92.96%) ಅಂಕಗಳನ್ನು ಪಡೆದು ಶಾಲೆಗೆ 4ನೇ ಸ್ಥಾನ ಪಡೆದುಕೊಂಡಿದ್ದಾರೆ.
ಶಾಲೆಯ ಒಟ್ಟು 35 ವಿದ್ಯಾರ್ಥಿಗಳ ಪೈಕಿ ಜನ ಬಾಲಕರು ಹಾಗೂ 10 ಜನ ಬಾಲಕಿಯರು ಡಿಸ್ಟಿಂಕ್ಷನ್ ನಲ್ಲಿ ಪಾಸಾಗಿದ್ದಾರೆ. ಪ್ರಥಮ ಶ್ರೇಣಿಯಲ್ಲಿ 12 ಜನ ಬಾಲಕರು ಹಾಗೂ 10 ಜನ ಬಾಲಕಿಯರು ಉತ್ತೀರ್ಣರಾದರೆ ಉಳಿದ ಇಬ್ಬರು ಬಾಲಕ, ಬಾಲಕಿಯರು ದ್ವಿತೀಯ ಸ್ಥಾನದಲ್ಲಿ ಉತ್ತೀರ್ಣರಾಗಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಶ್ರಮಿಸಿದ ಶಾಲೆಯ ಎಲ್ಲಾ ವಿಷಯವಾರು ಶಿಕ್ಷಕರಿಗೆ ಹಾಗೂ ಸಿಬ್ಬಂದಿ ವರ್ಗಕ್ಕೆ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಜಯಶ್ರೀ ಗಣಾಚಾರಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
- ಕರುನಾಡ ಕಂದ ಪತ್ರಿಕೆ




















