ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಮಣ್ಣಿನ ಬಗ್ಗೆ ನಮಗೇನು ಗೊತ್ತು?

ಕೆಲ ದಿನಗಳ ಹಿಂದೆ ಯಂತ್ರ ಮೇಳದಲ್ಲಿ ನಡೆದ ರಸಪ್ರಶ್ನೆ ಗೋಷ್ಠಿಯಲ್ಲಿ ಒಂದು ಪ್ರಶ್ನೆ. ಫಲವತ್ತಾದ ಒಂದಿಂಚು ಮೇಲ್ಮಣ್ಣು ಸೃಷ್ಟಿಯಾಗಲು ಎಷ್ಟು ಸಮಯ ಬೇಕು?! ವಿದ್ಯಾರ್ಥಿಗಳ ಮೂರು ತಂಡವಿತ್ತು. ಎದುರು ಬದಿ ಅನೇಕ ಸಂಖ್ಯೆಯಲ್ಲಿ ಕೇಳುಗರಿದ್ದರು. ಬಂದ ಉತ್ತರ ಒಂದು ವರ್ಷ, ಮೂರು ವರ್ಷ,ಐದು ವರ್ಷ ಹೀಗೆ! ಸರಿಯಾದ ಉತ್ತರದ ನಿರೀಕ್ಷೆಯಲ್ಲಿ ಪ್ರಶ್ನೆ ಸಭಿಕರತ್ತ ಹೋಯಿತು. 10, 100 ಆಗಿ ಹಿಂದಿನಿಂದ ಒಂದು ಉತ್ತರ ಬಂತು ಒಂದು ಸಾವಿರ ವರ್ಷಗಳು!. ಉತ್ತರ ಸರಿಯಾಗಿತ್ತು ದೊಡ್ಡದಾಗಿ ಚಪ್ಪಾಳೆಯೂ ಬಿದ್ದಿತ್ತು.

ಇಲ್ಲಿ ನಾವು ಗಮನಿಸಬೇಕಾದ ಸಂಗತಿ ಎಂದರೆ ಮಣ್ಣಿನ ಕುರಿತು ನಮಗೇನು ಗೊತ್ತಿದೆ ಎಂದು. ನಾವು ನಿಂತನೆಲ ಮಣ್ಣು, ನಾವು ಉಣ್ಣುವ ಅನ್ನ ಬೆಳೆಯುವ ಜಾಗ ಮಣ್ಣು, ನಾವು ಕುಡಿಯುವ ನೀರು ಸಂಗ್ರಹಿಸಿಡುವುದು ಈ ಮಣ್ಣು. ನಾವು ಉಸಿರಾಡುವ ಗಾಳಿ ಸಿಗುವುದೂ ಈ ಮಣ್ಣಿನಲ್ಲಿ ಬೆಳೆದ ಸಸ್ಯಗಳಿಂದ. ಸಕಲ ಜೀವಕೋಟಿಗಳ ಆವಾಸಸ್ಥಾನವು ಮಣ್ಣು.ಇವು ಎಲ್ಲವೂ ಸಿಗಬೇಕಾದರೆ ಆ ಮಣ್ಣಿನಲ್ಲಿ ಫಲವಂತಿಗೆ ಇರಬೇಕು. ನೀರು ಹಿಡಿದಿಡುವ ಶಕ್ತಿ ಇರಬೇಕು. ಸಸ್ಯ ಪೋಷಕಾಂಶಗಳ ಲಭ್ಯತೆ ಇರಬೇಕು. ಇಂತಹ ಜೀವಂತ ಮಣ್ಣು ಸಸ್ಯ ತ್ಯಾಜ್ಯಗಳು, ಪ್ರಾಣಿ ತ್ಯಾಜ್ಯಗಳು ನಿರಂತರವಾಗಿ ಬೀಳುತ್ತಾ ಮಳೆ,ಗಾಳಿ, ಬಿಸಿಲಿನ ಶಾಖದಿಂದ ಒತ್ತಡದಿಂದ ಸೃಷ್ಟಿಯಾಗುವ ರಸಪಾಕ ಈ ಮಣ್ಣು. ಅದೊಂದು ಪರಿಪೂರ್ಣ ಪಾಕ. ಅಂತದ್ದೊಂದು ಪರಿಪೂರ್ಣ ಪಾಕದ ಒಂದಿಂಚು ದಪ್ಪನೆಯ ಜೀವದಾರಕ ಮೇಲ್ಮಣ್ಣು ಸೃಷ್ಟಿಯಾಗಲು ಬೇಕಾಗುವ ಅವಧಿ ಬರೋಬ್ಬರಿ ಒಂದು ಸಾವಿರ ವರ್ಷಗಳು. ಆಶ್ಚರ್ಯವಾಗುವುದಿಲ್ಲವೇ?

  ಪರಿಪೂರ್ಣ ಪಾಕವನ್ನು ಹೇಗೆ ಸೃಷ್ಟಿಯಾಗಿದೆಯೋ ಅದೇ ರೀತಿ ಬಳಸಿದರೆ ಅದು ನಮಗೆ ಜೀವದಾರಕವಾಗಬಹುದು. ಸುಲಭದಲ್ಲಿ ಹೇಳುವುದಿದ್ದರೆ ಜೇನೊಂದು ಪರಿಪೂರ್ಣ ಪಾಕ.ಜೇನು ಎರಿಯಲ್ಲಿ ಸಂಗ್ರಹವಾಗಿ ಮೇಣದ ಪದರದಿಂದ ಮುಚ್ಚಿದ್ದರೆ ಪಾಕ ತಾಯಾರಿ ಆಯಿತೆಂದರ್ಥ. ನೀರು,ಬಿಸಿ ಇತ್ಯಾದಿಗಳನ್ನು ಸ್ಪರ್ಶಿಸದೆ ಬರಣಿ ಗಾಜಿನ ಪಾತ್ರೆಗಳು  ಇತ್ಯಾದಿಗಳಲ್ಲಿ ಗಾಳಿಯಾಡದಂತೆ  ಸಂಗ್ರಹಿಸಿ ಇಟ್ಟರೆ ಎಷ್ಟು ಕಾಲವಾದರೂ  ಹಾಳಾಗದು. ಆದರೆ ಮನುಷ್ಯ ನಿರ್ಮಿತ ಪಾಕಗಳೆಲ್ಲವೂ ಕೆಲವೊಂದು ಅವಧಿಯೊಳಗೆ ಹಾಳಾಗುವುದನ್ನು ನಾವು ನೋಡುತ್ತಿದ್ದೇವೆ. ಅದೇ ರೀತಿ ಕೋಟ್ಯಂತರ ವರ್ಷಗಳ ಶ್ರಮದ ಮೂಲಕ ಪ್ರಕೃತಿ  ನಿರ್ಮಿಸಿ ಕೊಟ್ಟದ್ದು ಜೀವಧಾರಕವಾದ ಈ ನಮ್ಮ ಮಣ್ಣು. ಅದೇ ಪರಿಪೂರ್ಣ  ರಸಪಾಕದೊಂದಿಗೆ ಜೀವಧಾರಕವಾಗಿ ಮುಂದಿನ ಪೀಳಿಗೆಗೆ ಕಾಪಿಡುವುದು ನಮ್ಮ ಕರ್ತವ್ಯ.

ಪ್ರಕೃತಿ ತನ್ನ ಮೇಲ್ಮಣ್ಣನ್ನು ಜೀವಧಾರಕವಾಗಿ ಉಳಿಸಿಕೊಳ್ಳಲು ಅದೆಷ್ಟು ಸಂದರ್ಭದಲ್ಲಿ ಹೋರಾಟ ಮಾಡುತ್ತದೆ ಎಂಬುದನ್ನು ಗಮನಿಸಿ. ಧರೆಯೊಂದರಿಂದ ಮಣ್ಣುತೆಗೆದಲ್ಲಿ ಮಳೆಗಾಲ ಕಳೆಯುವುದರೊಳಗಾಗಿ ಧರೆಯ ಮೇಲೆ ಪಾಚಿಯ ಪದರವನ್ನು ಗಮನಿಸಿ. ಮತ್ತಿನ ವರ್ಷಕ್ಕೆ ಮೊದಲೇ ಪಾಚಿಯ ಮೇಲೆ ಹುಲ್ಲಿನ ಪದರ ಒಂದು ಸೃಷ್ಟಿಯಾಗುವುದನ್ನು ಗಮನಿಸಿ . ಮುಂದಿನ ಹಂತದಲ್ಲಿ ಗಿಡ ಮರಗಳು ಬೆಳೆಯುವುದನ್ನು ನೋಡಿ. ಹಂತ ಹಂತವಾಗಿ ಹೊಸ ಸೃಷ್ಟಿಯ ಕಡೆಗೆ ಪ್ರಕೃತಿ ಸದಾ ಹೋರಾಟ ನಡೆಸುತ್ತಲೇ ಇರುತ್ತದೆ. ಕಳೆದ 40 ವರ್ಷಗಳ ಹಿಂದಿನವರೆಗೂ ಅದೆಷ್ಟೋ ಸಾವಿರ ವರ್ಷಗಳಿಂದ ಕೃಷಿ ಮಾಡುತ್ತಿದ್ದರೂ ಮಣ್ಣಿನ ಆರೋಗ್ಯದ ಬಗ್ಗೆ ಯಾವುದೇ ಕೂಗು ಇರಲಿಲ್ಲ. ಆದರೆ ಇತ್ತೀಚಿನ ವರ್ಷಗಳಲ್ಲಿ ಅಧಿಕ ಇಳುವರಿಯ ಮೋಹಕ್ಕೆ ಒಳಗಾಗಿ ಮಣ್ಣಿನ ಸತ್ವವನ್ನು ಹೀರಿ ಸಸ್ಯಗಳಿಗೆ ತುಂಬಿ ಕೊಡುತ್ತಿದ್ದೇವೆ. ಸಾವಯವ ವಸ್ತುಗಳು ಕಳಿತು ಮೇಲ್ಮಣ್ಣು ಸೃಷ್ಟಿಯಾಗಬೇಕಾದ ಜಾಗದಲ್ಲಿ ಸಸ್ಯಗಳೇ ಬರದಂತೆ ವಿಷವನ್ನು ಇಕ್ಕಿ ಫಲವತ್ತಾದ ಮೇಲ್ಮಣ್ಣು ಸೃಷ್ಟಿಯಾಗದಂತೆ ತಡೆಯುತ್ತಿದ್ದೇವೆ. ನಿಧಾನವಾಗಿ ನಡೆಯುವ ಪ್ರಕೃತಿಯ ಬದಲಾವಣೆಗೆ ನಮ್ಮ ಧಾವಂತದ ಮನುಷ್ಯ ಸೃಷ್ಟಿಯನ್ನು ಧಾರೆಯರೆದು ನಮ್ಮ ಅರಿವಿಗೆ ಬಾರದೇ ಮಣ್ಣಿನ ನಾಶದತ್ತ ಹೆಜ್ಜೆ ಇಡುತ್ತಿದ್ದೇವೆ.

ನೆನಪಿಡಬೇಕಾದದ್ದು ಒಮ್ಮೆ ಹಾಳಾದ ಮಣ್ಣು ಮರು ಸೃಷ್ಟಿಯಾಗಬೇಕಾದರೆ ಒಂದು ಸಾವಿರ ವರ್ಷಗಳೇ ಬೇಕಾಗಬಹುದು ಎಷ್ಟು ತಲೆ ಮಾರುಗಳು ಉರುಳಿ ಹೋದಾವು?
ಎಷ್ಟು ನೀನುಂಡರೇಂ? ಪುಷ್ಟಿ ಮೈಗಾಗುವುದು,
ಹೊಟ್ಟೆ ಜೀರ್ಣಿಸುವಷ್ಟೇ, ಮಿಕ್ಕುದೆಲ್ಲ ಕಸ,
ಎಷ್ಟು ಗಳಿಸಿಟ್ಟೊಡಂ ನಿನಗೆ ದಕ್ಕುವುದೆಷ್ಟು?,
ಮುಷ್ಟಿಪಿಷ್ಟವು ತಾನೆ?ಮಂಕುತಿಮ್ಮ.

ಮುಷ್ಟಿಪಿಷ್ಟಕ್ಕಿಂತ ಹೆಚ್ಚಿನದ್ದಕ್ಕಾಗಿ ನಮ್ಮಿಂದ ಸೃಷ್ಟಿ ಮಾಡಲು ಸಾಧ್ಯವಿಲ್ಲದ ಮಣ್ಣನ್ನು ಹಾಳು ಮಾಡದೆ ಇರೋಣ.

ಎ.ಪಿ. ಸದಾಶಿವ ಮರಿಕೆ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ