ನೂಲಿನಂತೆ ಸೀರೆ ಅಜ್ಜಿಯಂತೆ ಮೊಮ್ಮಗಳು
ಮೂರನೇ ತರಗತಿ ಕಲಿಕೆಯ ಧ್ರುತಿ ಇವಳು
ತಾನೂ ಚಿತ್ತಾರ ಮಾಡಲು ಮುಂದಾಗಿಹಳು
ಮನೋಲ್ಲಾಸ ಉತ್ಸಾಹದಿ ಮುಗುಳ್ನಗುತಿಹಳು
ಖುಷಿಯಲಿ ಅಮ್ಮಮ್ಮ ಕಾವ್ಯ ಹೆಣೆದಳು
ತನ್ಮಯತೆಯ ಹುರುಪಿಗೆ ಶುಭ ಹಾರೈಸಿದಳು
ನಲ್ಮುಂಜಾವಲಿ ಸುಮನಗಳಲ್ಲಿಗೆ ರವಾನಿಸಿದಳು
ಮಕ್ಕಳ ಮನದ ವಿಕಸನಕೆ ಮಾದರಿ ಇವಳೆಂದಳು
- ಲಲಿತಾ ಕೆ ಆಚಾರ್ ಬೆಂಗಳೂರು



















