ನಿಸರ್ಗದ ಐಸಿರಿಯಲಿ ಕಂಡೆನೊಂದು ವಿಸ್ಮಯ
ಗಿಡದಿ ಜೋಕಾಲಿ ಮಾಡುತಿದ್ದ ಅದ್ಭುತ ತೆನೆಯ
ಬಿಡಿಸಿ ಜೋಡಿಸಲಾಯಿತು ಚಿತ್ತಾರದ ಅಭಯ
ಕೆಂಬಣ್ಣದ ಹೂಗಳ ಸಿಂಗರಿಸಲು ಉಭಯ
ಕಾವ್ಯದಲಿ ಬಣ್ಣಿನೆಯು ಓದುಗ ಮನಗಳಿಗೀಗ
ಆಸ್ವಾದಿಸುತ ಮುಂದೆ ಸಾಗುತಲಿ ಬೇಗ ಬೇಗ
ಹಂಚಿಕೊಳಲು ಪರಸ್ಪರ ಶುಭೋದಯವ ಈಗ
ಮಿತ್ರರಿಗೆ ರವಾನಿಸುತ ಕಾಯುತಲಿ ಆ ವೇಗ
- ಲಲಿತಾ ಕೆ ಆಚಾರ್ ,ಬೆಂಗಳೂರು




















