ಹರಿದ್ರ ವರ್ಣದ ಸೇವಂತಿ ದಳಗಳು
ಕತ್ತರಿಸಿದ ಅದರ ಹಸಿರ ತೊಟ್ಟುಗಳು
ಕುಂಕುಮ ಬಣ್ಣದ ಗುಲಾಬಿ ದಳಗಳು
ಜೊತೆಗೆ ಕೇಸರಿಯ ಕ್ಯಾರೆಟ್ ತುಣುಕುಗಳು
ಗರಿಗೆದರಿರುವ ಸುಗಂಧ ಪುಷ್ಪಗಳು
ತ್ರಿಕೋನಾಕಾರದ ಸೌತೆ ಹೋಳುಗಳು
ಸೇರಿ ಮೂಡಿರುವ ಸುಲಲಿತ ಚಿತ್ತಾರವು
ಕಾವ್ಯವೊಂದ ಹೆಣೆಯಲು ಆಗಿದೆ ನಲ್ಮುಂಜಾವು
- ಲಲಿತಾ ಕೆ ಆಚಾರ್, ಬೆಂಗಳೂರು




















