ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಜನಪರ ಆಡಳಿತದ ಅನ್ನರಾಮಯ್ಯ ಸಿದ್ದರಾಮಯ್ಯ: ಗಂಗಜ್ಜಿ ನಾಗರಾಜ್

ಹರಪನಹಳ್ಳಿ: ಬುದ್ಧ ಬಸವ ಅಂಬೇಡ್ಕರ್ ಅವರ ನಿಜವಾದ ತತ್ವಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಜನಪರ ಆಡಳಿತಗಳನ್ನು ಜಾರಿಗೆ ತಂದ ನನ್ನ ರಾಮಯ್ಯ . ಕರುನಾಡು ಕಂಡ ಮೇಧಾವಿ ಬಸವಣ್ಣನವರ ತತ್ವವನ್ನು ಸದಾ ಅನುಸರಿಸುವ ಬಹುಜನರ ಹೃದಯ ಗೆದ್ದು ಕೊಟ್ಟ ಮಾತು ತಪ್ಪದ ಕರುನಾಡ ಅನ್ನರಾಮಯ್ಯ ಅಹಿಂದದ ಆಶಾಕಿರಣ ಭಾಗ್ಯಗಳ ಭಾಗ್ಯವಿಧಾತ ಸರಳತೆಯ ಸಾಕಾರಮೂರ್ತಿ ಹಲವಾರು ಸವಾಲುಗಳನ್ನ ಮೆಟ್ಟಿನಿಂತು ಜನರ ಮನಸ್ಸಿನಲ್ಲಿ ವಿಶ್ವಾಸಗಳಿಸಿದ ವಿಶ್ವಾಸರಾಮಯ್ಯ ಸಮ ಸಮಾಜದ ಕನಸ್ಸನ್ನು ಹೊತ್ತ ತ್ಯಾಗರಾಮಯ್ಯ ನಮ್ಮ ಸಿದ್ದರಾಮಯ್ಯ.

ಮೈಸೂರು ನೆಲದ ಒಬ್ಬ ಸಾಮಾನ್ಯ ಬಡ ರೈತ ಕುಟುಂಬದಿಂದ ಹೊರಟು ಕರ್ನಾಟಕದ ಅತ್ಯುನ್ನತ ಹುದ್ದೆಯಾದ ಮುಖ್ಯಮಂತ್ರಿಯ ಸ್ಥಾನವನ್ನು ಅಲಂಕರಿಸಿದರು ಕೂಡ ತಮ್ಮ ಅಧಿಕಾರದ ಅಂತಿಮ ಕ್ಷಣದ ವರೆಗೂ ಬಡವರ ಶೋಷಿತರ ಹಿಂದುಳಿದವರ ದ್ವನಿಯಾಗಿಯೇ ಕೆಲಸ ಮಾಡಿದ ಜನಾಬಿವೃದ್ಧಿಯ ಜನರಾಮಯ್ಯ. ಆದರೆ ಇಂದು ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರಬಹುದು ಆದರೆ ಅವರು ಸದಾ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುವಂತಹ ಶಾಶ್ವತ ಮುಖ್ಯಮಂತ್ರಿಗಳಾಗಿದ್ದಾರೆ. ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಸಾಮಾಜಿಕ ನ್ಯಾಯ ಸಮಾನ ಅವಕಾಶ ಮತ್ತು ಜನಪರ ಆಡಳಿತದ ಹೆಸರಿನಲ್ಲಿ ಅವರು ಬರೆದ ಇತಿಹಾಸ ಎಂದೆಂದಿಗೂ ಅಳಿಸಲಾಗದಂತಹದ್ದು.ಸಿದ್ದರಾಮಯ್ಯ ಅವರು ಕೇವಲ ಮುಖ್ಯಮಂತ್ರಿ ಆಗಿರಲಿಲ್ಲ ಅನೇಕ ಬಡವರ ಶೋಷಿತರ ಹಿಂದುಳಿದವರ ಕುಟುಂಬಗಳಿಗೆ ಭರವಸೆಯಾಗಿದ್ದರು ಕೋಟ್ಯಾಂತರ ಅಭಿಮಾನಿಗಳ ಜನನಾಯಕರಾಗಿದ್ದರು. ರಾಜಕೀಯದಲ್ಲಿ ಅಧಿಕಾರ ಮತ್ತು ಹುದ್ದೆಗಳು ಶಾಶ್ವತವಲ್ಲ ಅದು ಜನರಿಗಾಗಿ ಬದುಕಿದ ನಾಯಕರ ಸೇವೆ ಶಾಶ್ವತವಾಗಿರುತ್ತದೆ . ಸಿದ್ದರಾಮಯ್ಯ ಅವರು ಅಧಿಕಾರದ ಕುರ್ಚಿಯಿಂದ ಎದ್ದಿರಬಹುದು ಆದರೆ ಅವರು ಕಟ್ಟಿದ ಕನಸು ಸಾಮಾಜಿಕ ನ್ಯಾಯದ ಚಳುವಳಿ, ಬಡವರ ಪರವಾದ ಗಟ್ಟಿ ನಿಲುವು ಮತ್ತು ಜನಪರ ರಾಜಕಾರಣ ಎಂದೆಂದಿಗೂ ನಮ್ಮೊಡನೆ ಇರುತ್ತೆ. ಮುಂದಿನ ದಿನಗಳಲ್ಲಿಯೂ ಅವರ ಅನುಭವ ಮಾರ್ಗದರ್ಶನ ಮತ್ತು ಆಶೀರ್ವಾದ ಕರ್ನಾಟಕದ ನನ್ನಂತ ಕೋಟ್ಯಂತರ ಅಭಿಮಾನಿಗಳಿಗೆ ನೀವು ಶಕ್ತಿಯಾಗಲಿ ನಾಯಕತ್ವ ಎಂದರೆ ಕೇವಲ ಅಧಿಕಾರವಲ್ಲ ಅದು ಸಾಮಾನ್ಯ ಜನರ ಹೃದಯದಲ್ಲಿ ಅಚ್ಚಳಿಯದೇ ಆಗಿ ನೆಲೆಸಿರುವುದು ಅಂತಹ ಅಪರೂಪದ ನನ್ನ ನೆಚ್ಚಿನ ಅಹಿಂದ ನಾಯಕನಿಗೆ ನನ್ನ ಹೃತ್ಪೂರ್ವಕವಾದ ಗೌರವವನ್ನು ಸಲ್ಲಿಸುತ್ತೇನೆ.

  • ಗಂಗಜ್ಜಿ ನಾಗರಾಜ್ ,
    ಲೇಖಕರು ಹಾಗೂ ಯುವ ಕಾಂಗ್ರೇಸ್ ಮುಖಂಡರು.
    ಹರಪನಹಳ್ಳಿ.
  • ಕರುನಾಡ ಕಂದ ಸುದ್ದಿ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!