
ನಂಜನಗೂಡು : ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಪಟ್ಟಣದ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ದಳವಾಯಿ ಇವರ ವತಿಯಿಂದ ಶಾಲೆಯ ಮುಖ್ಯೋಪಾಧ್ಯಾಯರಾದ ಲೀಲಾವತಿ ಹಾಗೂ ಸಹ ಶಿಕ್ಷಕರಾದ ನಾಗೇಶ್, ಸಮ್ಮತಿ, ಮಂಜುನಾಥ, ಮಂಜುಳಾ ಮತ್ತು ಶಾಲೆಯ ಮಕ್ಕಳು ಪಟ್ಟಣದ ರಥ ಬೀದಿಯಲ್ಲಿ ನಿಮ್ಮ ಮಕ್ಕಳನ್ನು ಶಾಲೆಗೆ ಸೇರಿಸಿ ಎಂದು ಬೃಹತ್ ಜಾಥಾವನ್ನು ನಡೆಸುವುದರ ಮೂಲಕ ಹಾಗೂ ಘೋಷಣೆಗಳೊಂದಿಗೆ ಸಾರ್ವಜನಿಕರಿಗೆ ಸರಕಾರಿ ಶಾಲೆಯ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಿ ದಾಖಲಾತಿ ಆಂದೋಲನ ನಡೆಸಲಾಯಿತು.
ನಮ್ಮ ಶಾಲೆಯಲ್ಲಿ ಎಲ್ ಕೆ ಜಿ ತರಗತಿ ಪ್ರಾರಂಭವಾಗಿದ್ದು ನಿಮ್ಮ ಮಕ್ಕಳನ್ನು ಶಾಲೆಗೆ ಸೇರಿಸಿ ಎಂದು ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು.
- ಕರುನಾಡ ಕಂದ ಸುದ್ದಿ




















