ಕೆಂಪು ಹಸಿರು ಬಿಳಿ ವರ್ಣಗಳ ಸಂಗಮ
ಜೋಡಿಸಲು ಆಗಿದೆ ಚಿತ್ತಾರದ ಸರಿಗಮ
ಪದಗಳ ಜೋಡಿಸಲು ಕಾವ್ಯದ ಉಗಮ
ಶುಭ ಮುಂಜಾವಿಗಿದೊಂದು ಸಂಭ್ರಮ
ಸುಮನಗಳತ್ತ ಇದೀಗ ಹೊರಟಿದೆ ಪಯಣ
ಸಾರಲು ಪುಷ್ಪ ಮೊಗ್ಗಗಳ ಐಸಿರಿಯ ತೋರಣ
ಸದಭಿರುಚಿಕರ ಕಣ್ಮನಗಳಿಗಿದೊಂದು ರಸದೌತಣ
ಬನ್ನಿರಿ ಆಸ್ವಾದಿಸುತ ನಾವು ಮುಂದೆ ಸಾಗೋಣ
- ಲಲಿತಾ ಕೆ ಆಚಾರ್, ಬೆಂಗಳೂರು




















