ಹೋಳಿ ಹಬ್ಬದ ಶುಭಾಶಯಗಳು ಬಕೆಟ್‌ನಲ್ಲಿ ರಂಗು ತುಂಬಿದ ನೀರು, ಹೋಳಿಯ ರಂಗೇರಲು ಬಣ್ಣ ತುಂಬಿದ ಬಲೂನುಗಳು, ಬಾಯಿಯ ಸವಿ ಹೆಚ್ಚಿಸಲು ತಿನಿಸುಗಳು ಇವೆಲ್ಲಾ ಹೋಳಿಯ ಸಂಭ್ರಮ ಹೆಚ್ಚಿಸಲಿ. ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಹೋಳಿ ಹಬ್ಬದ ಶುಭಾಶಯಗಳು
ಕಾಮನ ಹಬ್ಬ (ಹೋಳಿ ಹಬ್ಬ) ಹಲವು ದೇಶಗಳಲ್ಲಿ ಈ ಹಬ್ಬವನ್ನು ಆಚರಿಸುತ್ತಾರೆ ಹೋಳಿ ಹಬ್ಬವು ಸಂಬಂಧಗಳನ್ನು ಬೆಸೆಯುವ ಬಣ್ಣದ ಹಬ್ಬವಾಗಿದೆ,ಈ ಹಬ್ಬವನ್ನು ಎಲ್ಲಾ ಕಡೇ ಆಚರಿಸಿಸುವ ದೊಡ್ಡ ಹಬ್ಬವಾಗಿದೆ ಹಳ್ಳಿಗಳಲ್ಲಿ ಚಿಕ್ಕ ಚಿಕ್ಕ ಮಕ್ಕಳು ಊರಿನ ಸುತ್ತಮುತ್ತಲಿನ ಓಣಿಯಲ್ಲಿ ಇದ್ದ ಕಟ್ಟಿಗೆಗಳನ್ನು ಕಳವು ಮಾಡಿ ಅದನ್ನು ಎತ್ತಿಕೊಂಡು ” ಕಾಮಣ್ಣನ ಮಕ್ಕಳೋ ಕಳ್ಳ ಸುಳ್ಳ ಮಕ್ಕಳೋ ಎಂದು ಕೂಗುತ್ತಾ ಕೇಕೆ ಹಾಕುತ್ತಾ ಊರಿನ ಓಣಿಯಲ್ಲಿ ಸುತ್ತಿ ಒಂದು ಕಡೇ ಗುಂಪು ಹಾಕಿ ಬಾಯಿ ಬಡೆದುಕೊಳ್ಳುತ್ತಾ ಕಾಮಣ್ಣ ಮಕ್ಕಳ ಕಳ್ಳ ಸುಳ್ಳ ಮಕ್ಕಳೋ ಎಂದು ಕೇಕೇ ಹಾಕುತ್ತಾರೆ ಗೆಳೆಯರು ತನ್ನ ಗುಂಪಿನಲ್ಲಿ ಒಬ್ಬ ಹುಡುಗನನ್ನು ಶವ ತರ ಮಾಡಿ ಶವದ ವಿಮಾನನ ರೇಡಿ ಮಾಡಿ ಅದರಲ್ಲಿ ಮಲಗಿಸಿ ಓಣಿಯ ತುಂಬೆಲ್ಲಾ ಸುತ್ತಾಡಿ ಕೇಕೆ ಹಾಕುತ್ತಾ ಸಂಭ್ರಮದಿಂದ ಈ ಹಬ್ಬವನ್ನು ಆಚರಣೆ ಮಾಡುತ್ತಾರೆ
ಹೋಳಿ ಹಬ್ಬದ ದಿನ ರಾತ್ರಿ ಕಾಮಣ್ಣನ ಗೊಂಬೆ ಮಾಡಿ ಊರಿನ ಗೌಡ್ರು ಈ ಗೊಂಬೆಯನ್ನು ರೆಡಿ ಮಾಡಿರುತ್ತಾರೆ ಅದನ್ನು ಊರಿನ ಹೈಕಳು ಅವರ ಮನೆಯಿಂದ ತೆಗೆದುಕೊಂಡು ಬಂದು ಕಟ್ಟಿಗೆ ಅದನ್ನು ಇಟ್ಟು ಊರಿನ ವಾಲಿಕಾರ ಅದನ್ನು ಪೊದೆ ಮಾಡಿ ಸುಡುತ್ತಾರೆ ಆವಾಗ ಸುಡುವಾಗ ಊರಿನ ಹೈಕಳು ಸುಡುವಾಗ ಬಾಯಿ ಬಡೆದುಕೊಳ್ಳುತ್ತಾ ಕೇಕೆ ಹಾಕುತ್ತಾರೇ ನಂತರ ಸುಟ್ಟ ಕಟ್ಟಿಗೆಗಳನ್ನು ಮನೆಗೆ ತೇಗಿದುಕೊಂಡು ಹೋಗಿ ಆ ಬೆಂಕಿಯಲ್ಲಿ ಹುಳಗಡ್ಲಿ ಯನ್ನು ಸುಟ್ಟು ಕುಟುಂಬದ ಸದಸ್ಯರು ಕೂಡಿ ತಿನ್ನುತ್ತಾರೇ ಹಿರಿಯರ ವಾಡಿಕೆ ಪ್ರಕಾರ ಕಾಮನ ಸುಟ್ಟ ಬೆಂಕಿಯಲ್ಲಿ ಕಡಲಿ ತಿಂದರೇ ಹುಲ್ಲು ಗಟ್ಟಿ ಹಾಗುತ್ತೇವೇ ಎಂಬ ಹಿರಿಯರ ವಾಡಿಕೆ ಇಂದಿಗೂ ಪ್ರಚಲತದಲ್ಲಿದೆ ಹಬ್ಬದ ಮರುದಿನ ವಿವಿಧ ಬಣ್ಣಗಳನ್ನು ಪರಸ್ಪರ ಎರಚಾಡುವ ಮೂಲಕ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೇ ಭಾರತದಾದ್ಯಂತ ಹೋಳಿ ಹಬ್ಬವನ್ನು
ಸಂಭ್ರಮ ಸಡಗರದಿಂದ ಎಲ್ಲಾರೂ ಆಚರಿಸುತ್ತಾರೆ ಯಾವುದೇ ಜಾತಿ ಮತಗಳ ಬೇಧ ಭಾವ ನಿಲ್ಲದೇ ಒಟ್ಟಾಗಿ ಸೇರಿ ಬಣ್ಣಗಳ ಓಕುಳಿಯಲ್ಲಿ ಭಾಗಿಯಾಗುತ್ತಾರೆ,
ಸಮಾನತೆಯ ಹಬ್ಬ
ಜಾತಿ, ಧರ್ಮ, ಮೇಲು, ಕೀಳು, ದೊಡ್ಡವರು, ಚಿಕ್ಕವರು ಎನ್ನುವ ತಾರತಮ್ಯವಿಲ್ಲದೆ ಎಲ್ಲರೂ ಬಣ್ಣವನ್ನು ಬಳಿಯುವುದು, ಪರಸ್ಪರ ಬಣ್ಣಗಳನ್ನು ಎರಚಿಕೊಳ್ಳುವ ಆಚರಣೆಯನ್ನು ಕೈಗೊಳ್ಳುತ್ತಾರೆ. ಈ ಹಬ್ಬವು ಎಲ್ಲರ ನಡುವೆ ಇರುವ ಅಹಂ ಹಾಗೂ ಸೊಕ್ಕಿನ ಭಾವನೆಯನ್ನು ತೊರೆದು ಬೆರೆತು ಬಾಳುವ ಸಂದೇಶವನ್ನು ನೀಡುವುದು. ಎಲ್ಲರೊಂದಿಗೂ ಬೆರೆತಾಗ ಜೀವನದಲ್ಲಿ ಹೆಚ್ಚು ಸಂತೋಷ ಇರುತ್ತದೆ ಎನ್ನುವುದನ್ನು ಹೋಳಿ ಹಬ್ಬ ತೋರಿಸಿಕೊಡುವುದು.
ಚಳಿಗಾಲದ ಅಂತ್ಯವನ್ನು ಸೂಚಿಸುತ್ತದೆ
ಫಾಲ್ಗುಣ ಮಾಸದ (ಫೆಬ್ರುವರಿ ಮತ್ತು ಮಾರ್ಚ್ ನಡುವೆ ಬರುವ ಸಮಯ) ಹುಣ್ಣಿಮೆಯ ನಂತರ ಹೋಳಿಯನ್ನು ಆಚರಿಸಲಾಗುವುದು. ಈ ಹಬ್ಬದ ಉತ್ಸವವು ವಸಂತ ಕಾಲದ ಆರಂಭವನ್ನು ಹಾಗೂ ದೀರ್ಘ ಕಾಲದ ಚಳಿಯ ಅಂತ್ಯವನ್ನು ಸೂಚಿಸುತ್ತದೆ.
ಹೋಳಿಯ ಇತಿಹಾಸ?
ಪೂರ್ವದಲ್ಲಿ ತಾರಕಾಸುರನೆಂಬ ರಾಕ್ಷಸನಿದ್ದನು. ಆತ ದುರಹಂಕಾರಿಯೂ ಹಾಗೂ ಕ್ರೂರಿಯೂ ಆಗಿದ್ದನು. ತಾರಕಾಸುರ ತನಗೆ ಸಾವು ಬರದಿರಲಿ ಎಂದು ತಪಸ್ಸು ಮಾಡಿದ್ದನು. ಆಗ ಬ್ರಹ್ಮ ಪ್ರತ್ಯಕ್ಷನಾಗುತ್ತಾನೆ. ಆಗ ನನಗೆ ಮರಣ ಬಾರದಿರಲಿ, ಬಂದರೂ ಅದು ಶಿವನಿಗೆ ಜನಿಸಿದ ಏಳು ದಿನದ ಶಿಶುವಿನಿಂದ ಬರಲಿ ಎಂಬ ವರವನ್ನು ಕೇಳಿದ್ದನು. ತಾರಕಾಸುರನ ತಪ್ಪಸ್ಸನ್ನು ಮೆಚ್ಚಿ ಬ್ರಹ್ಮ ವರವನ್ನು ಕೊಡುತ್ತಾನೆ. ಆಗ ತನಗೆ ವರ ಸಿಕ್ಕಿದೆ ಎಂದು ತಾರಕಾಸುರ ಮೆರೆಯುತ್ತಿರುತ್ತಾನೆ.
ಇತ್ತ ಭೋಗ ಸಮಾಧಿಯಲ್ಲಿದ್ದ ಶಿವ, ಪಾರ್ವತಿಯ ಜೊತೆ ಸಮಾಗಮ ಹೊಂದಲು ಸಾದ್ಯವಿರಲಿಲ್ಲ. ಆಗ ದೇವತೆಗಳು ಪಾರ್ವತಿಯಲ್ಲಿ ಮೋಹ ಹೊಂದುವಂತೆ ಮಾಡಲು ಕಾಮನಲ್ಲಿ ಬೇಡಿದರು. ಕಾಮ ಅಂದರೆ (ಮನ್ಮಥ) ಮತ್ತು ಅವನ ಪತ್ನಿ ರತಿದೇವಿ ಈ ಸತ್ಕಾರ್ಯಕ್ಕೆ ಒಪ್ಪಿದ್ದರು. ಈ ವೇಳೆ ಭೋಗಸಮಾಧಿಯಲ್ಲಿದ್ದ ಶಿವನಿಗೆ ಹೂ ಬಾಣಗಳಿಂದ ಹೊಡೆದು ಸಮಾಧಿಯಿಂದ ಎಚ್ಚರಿಸಿದರು. ಇದರಿಂದ ಕುಪಿತಗೊಂಡ ಶಿವನು ತನ್ನ ಮೂರನೇ ಕಣ್ಣಿಂದ ಕಾಮನನ್ನು ಸುಟ್ಟು ಭಸ್ಮ ಮಾಡಿದನು. ರತಿದೇವಿ ದು:ಖದಿಂದ ಶಿವನಲ್ಲಿ ಪತಿಭಿಕ್ಷೆಯನ್ನು ಬೇಡಿದಳು. ಶಾಂತಗೊಂಡ ಶಿವನು ಪತ್ನಿಯೊಡನೆ ಮಾತ್ರ ಶರೀರಿಯಾಗುವಂತೆ ಕಾಮನಿಗೆ ವರ ಕೊಟ್ಟನು. ಲೋಕಕಲ್ಯಾಣಕ್ಕಾಗಿ ಮನ್ಮಥನು ಅನಂಗನಾದ. ಈ ಘಟನೆ ನಡೆದದ್ದು ಫಾಲ್ಗುಣ ಶುದ್ಧ ಪೂರ್ಣಿಮೆಯಂದು. ಆದ್ದರಿಂದ ಈ ದಿನವನ್ನು “ಕಾಮನ ಹುಣ್ಣಿಮೆ”ಯಾಗಿ ಆಚರಿಸಲ್ಪಡುತ್ತದೆ.
ಮತ್ತೊಂದು ಕಥೆ:
ಹಿರಣ್ಯಕಶಿಪುವಿನ ಸಹೋದರಿ ಹೋಲಿಕಾ ಇದ್ದಳು. ಹಿರಣ್ಯಕಶಿಪು ತನ್ನ ರಾಜ್ಯದಲ್ಲಿ ದೇವರನ್ನು ಪೂಜಿಸುವುದನ್ನು ನಿಷೇಧಿಸಿದ್ದು, ತನ್ನನ್ನೇ ದೇವರೆಂದು ಪೂಜಿಸುವಂತೆ ಆದೇಶಿಸಿದ್ದನು. ಆದರೆ ಆತನ ಮಗ ಪ್ರಹ್ಲಾದ ವಿಷ್ಣು ದೇವರ ಪರಮ ಭಕ್ತನಾಗಿದ್ದನು. ತಾನು ಎಷ್ಟೆ ಪ್ರಯತ್ನ ಮಾಡಿದರು ಮಗನಿಂದ ವಿಷ್ಣು ದೇವರ ಆರಾಧಾನೆಯನ್ನು ನಿಲ್ಲಿಸಲು ಸಾಧ್ಯವಾಗಿಲ್ಲ. ಕೊನೆಗೆ ಹಿರಣ್ಯಕಶಿಪು ತನ್ನ ಮಗನನ್ನು ದಂಡಿಸಲು ತೀರ್ಮಾನಿಸುತ್ತಾನೆ. ಆಗ ಬೆಂಕಿಯು ಸುಡದಂತೆ ವರವನ್ನು ಪಡೆದಿದ್ದ ತನ್ನ ತಂಗಿ ಹೋಲಿಕಾಳ ಸಹಾಯವನ್ನು ಹಿರಣ್ಯಕಶಿಪು ಪಡೆಯುತ್ತಾನೆ. ಹಿರಣ್ಯಕಶಿಪು ತನ್ನ ಮಗನನ್ನು ಆಕೆಯ ತೊಡೆಯ ಮೇಲೆ ಕೂರಿಸಿಕೊಳ್ಳುವಂತೆ ತಂಗಿಯಲ್ಲಿ ಕೇಳಿದನು. ಹೋಲಿಕಾ ಅಣ್ಣನ ಆಜ್ಞೆಯಂತೆ ಪ್ರಹ್ಲಾದನನ್ನು ತನ್ನ ತೊಡೆಯ ಮೇಲೆ ಕೂರಿಸಿಕೊಳ್ಳುತ್ತಾಳೆ. ಆದರೆ ಈ ಪಾಪಕೃತ್ಯವನ್ನು ಹೋಲಿಕಾ ಮಾಡಿದ್ದರಿಂದಾಗಿ, ಆಕೆಯ ವರ ನಿಷ್ಫಲವಾಗುತ್ತದೆ. ಇದರಿಂದ ಹೋಲಿಕಾ ಸುಟ್ಟು ಬೂದಿಯಾಗುತ್ತಾಳೆ. ಪ್ರಹ್ಲಾದ ಸುರಕ್ಷಿತವಾಗಿ ಬೆಂಕಿಯಿಂದ ಹೊರಬರುತ್ತಾನೆ. ಅದಕ್ಕಾಗಿ ಪ್ರತೀ ವರ್ಷ ಹೋಲಿಯ ಮುನ್ನ ಹಿಂದೂ ಮನೆಗಳಲ್ಲಿ ಹೋಲಿಕನನ್ನು ಸುಡುತ್ತಾರೆ.
ಈ ಹಬ್ಬ ಮನೆಯ ಪ್ರತಿಯೊಬ್ಬ ಸದಸ್ಯರನ್ನು ಒಂದುಗೂಡಿಸುತ್ತದೆ ಮತ್ತು ಹಬ್ಬದ ಸಡಗರವನ್ನು ಪ್ರತಿಯೊಬ್ಬರಲ್ಲಿ ತುಂಬುತ್ತದೆ. ಕೆಟ್ಟದ್ದು ಒಳ್ಳೆಯದರ ಮುಂದೆ ತಲೆಬಾಗಲೇಬೇಕು ಎಂಬ ಸಂದೇಶವನ್ನು ಹೋಳಿ ಹಬ್ಬ ಸಾರುತ್ತದೆ. ದುಷ್ಕ್ರತ್ಯಗಳು ದೇವರ ಶಕ್ತಿಯ ಎದುರು ಎಂದಿಗೂ ಜಯವನ್ನು ಪಡೆಯಲು ಸಾಧ್ಯವಿಲ್ಲ ಎಂಬ ಸಾರ ಈ ಹಬ್ಬದ ಹಿಂದಿದೆ. ಹೋಲಿಕನಂತೆ ಕೆಟ್ಟ ಶಕ್ತಿಗಳು, ದುಷ್ಟ ಆಲೋಚನೆಗಳು ನಾಶವಾಗಿ ಹೊಸದರ ಪ್ರಾರಂಭದ ಕಡೆಗೆ ಮನುಷ್ಯರು ಹೋಗುತ್ತಾರೆ.ವಿವಿಧೆಡೆಯಲ್ಲಿ ಆಚರಣೆ
ಹೋಳಿ ಹಬ್ಬವನ್ನು ಸಾಮಾನ್ಯವಾಗಿ ನೇಪಾಳ ಮತ್ತು ಭಾರತೀಯರು ಮಾತ್ರ ಆಚರಿಸುತ್ತಿದ್ದರು. ಈ ಪ್ರದೇಶದಿಂದ ಹೋಗಿ ಇತರೆಡೆ ನೆಲೆಸಿರುವ ಜನಗಳು ಹಾಗೂ ಹಿಂದೂ ಸಂಸ್ಕೃತಿ ಹಾಗೂ ಆಚರಣೆಯನ್ನು ಅರಿತ ಜನರು ಸಹ ವಿವಿಧ ಪ್ರದೇಶದಲ್ಲಿ ಹೋಳಿ ಹಬ್ಬದ ಆಚರಣೆಯನ್ನು ಮಾಡುತ್ತಿದ್ದಾರೆ. ಈ ಹಿನ್ನೆಲೆಯಿಂದಾಗಿ ಇಂದು ಬಾರ್ಸಿಲೋನ್, ಮಾರಿಷನ್, ಫಿಜಿ, ಗಯಾನಾ, ಟ್ರಿನಿಟಾಡ್ ಮತ್ತು ಟೊಬಾಗೊ, ಫಿಲಿಪೈನ್, ಯುಎಸ್‍ಎ ಮತ್ತು ಯುಕೆಗಳಂತಹ ಪ್ರಮುಖ ದೇಶಗಳಲ್ಲಿಯೂ ಆಚರಿಸುತ್ತಾರೆ.
=============
ಗವಿ ಕೆರಳ್ಳಿ(ನಿಮ್ಮ ಜಿ,ಕೆ)
ಮಾಳೇಕೊಪ್ಪ(ಕೊಪ್ಪಳ)