
ತುಮಕೂರು : ರೋಟರಿ ಕ್ಲಬ್ ಕೊರಟಗೆರೆ , ಸಂಸ್ಥೆಯು 2ನೇ ವರ್ಷದ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು. ಕಾರ್ಯಕ್ರಮವು ಕಾಮಧೇನು ಹೋಟೆಲ್ ನಲ್ಲಿ ಆಯೋಜನೆ ಮಾಡಲಾಗಿತ್ತು.
ಸಮಾಜಸೇವೆ ಮಾಡಲು ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಲು ಮತ್ತು ಪರಿಸರ ಶಾಂತಿಯನ್ನು ಉತ್ತೇಜಿಸಲು ವಿವಿಧ ವೃತ್ತಿಪರರು, ಉದ್ಯಮಿಗಳು ಹಾಗೂ ಸಾರ್ವಜನಿಕರು ಒಟ್ಟಾಗಿ ಸೇರಿ ರಚಿಸಿರುವ ಸ್ವಯಂಸೇವಾ ಸಂಘವೇ ರೋಟರಿ ಕ್ಲಬ್.
ರೋಟರಿ ಎಂದರೆ ಸೇವೆಯ ಸಂಸ್ಥೆ. ನೊಂದವರ ಕಣ್ಣೀರೊರೆಸುವ ಕೆಲಸವೇ ನಮ್ಮ ಮೊದಲ ಆದ್ಯತೆ” ಎಂದು ಕೊರಟಗೆರೆ ರೋಟರಿ ಕ್ಲಬ್ನ ಮಾಜಿ ಅಧ್ಯಕ್ಷ ಎ.ಜಿ ಮಂಜುನಾಥ್ ಹೇಳಿದರು.
ಪಟ್ಟಣದ ಹೊರವಲಯದ ಕಾಮಧೇನು ಕಂಪರ್ಟ್ಸ್ನಲ್ಲಿ ಭಾನುವಾರ ನಡೆದ ಪದಗ್ರಹಣ ಸಮಾರಂಭದಲ್ಲಿ ಉದ್ದೇಶಿಸಿ ಮಾತನಾಡಿ ಕಳೆದ ವರ್ಷದ ಸಾಧನೆ ಹೆಮ್ಮೆ ತಂದಿದೆ ಕಳೆದ ಒಂದು ವರ್ಷದಲ್ಲಿ ರೋಟರಿ ಕ್ಲಬ್ ವತಿಯಿಂದ ಅರ್ಥಪೂರ್ಣ ಕಾರ್ಯಕ್ರಮಗಳನ್ನು ನಡೆಸಿದ್ದೇವೆ. ಇದು ನಮಗೆ ಹೆಮ್ಮೆ ತಂದಿದೆ” ಡಯಾಲಿಸಿಸ್ ಸಹಾಯ, ಅಂಗವಿಕಲರಿಗೆ ವೀಲ್ಚೇರ್ ವಿತರಣೆ, ಪಲ್ಸ್ ಪೋಲಿಯೋ ಕಾರ್ಯಕ್ರಮ, ಮಹಿಳೆಯರ ಸ್ವಾವಲಂಬನೆಗಾಗಿ ಎಲೆಕ್ಟ್ರಿಕ್ ಆಟೋ ವಿತರಣೆ ಸೇರಿದಂತೆ ಹಲವು ಜನಪರ ಕಾರ್ಯಕ್ರಮಗಳು ಯಶಸ್ವಿಯಾಗಿವೆ ಎಂದು ತಿಳಿಸಿದರು.
“ನೊಂದವರ ಪರವಾಗಿ ನಿಲ್ಲುವ ಸಂಸ್ಥೆ”
ಜಂಟಿ ಕಾರ್ಯದರ್ಶಿ ಚೇತನ್ ದಾಸರಹಳ್ಳಿ ಮಾತನಾಡಿ, “ರೋಟರಿ ಕ್ಲಬ್ ಕೇವಲ ಸಂಸ್ಥೆಯಲ್ಲ. ಇದು ನೊಂದವರ ಪರವಾಗಿ ನಿಲ್ಲುವ ಮತ್ತು ಆತ್ಮಸ್ಥೈರ್ಯ ಹೆಚ್ಚಿಸುವ ವೇದಿಕೆ. ಜನಪರ ಕಾರ್ಯಗಳ ಮೂಲಕ ಜನಮನ್ನಣೆ ಗಳಿಸಿದೆ” ಎಂದರು.
ಕಾರ್ಯಕ್ರಮದಲ್ಲಿ ನೂತನ ಅಧ್ಯಕ್ಷರಾಗಿ ನರಸಿಂಹಮೂರ್ತಿ ವಿ.ಕೆ. ಅಧಿಕಾರ ಸ್ವೀಕರಿಸಿದರು. ಗ್ರಾಮೀಣ ಭಾಗದ ಸದಸ್ಯರೊಂದಿಗೆ ಬೆರೆತು ಸಮುದಾಯದ ಅಭಿವೃದ್ಧಿ, ಶಿಕ್ಷಣ,ಆರೋಗ್ಯ ರಕ್ಷಣೆ ಮತ್ತು ಬಡತನ ನಿವಾರಣೆಗೆ ಹೊತ್ತು ನೀಡುವುದಾಗಿ ನೂತನ ಅಧ್ಯಕ್ಷರು ತಿಳಿಸಿದರು. ರೋಟರಿಯನ್ ನಿರಂತರವಾಗಿ ಸಮಾಜದ ಜೊತೆ ಇದ್ದಾಗ ಸಮಾಜ ಸೇವೆಯನ್ನು ಸಂಘದೊಂದಿಗೆ ಸಂಸ್ಥೆಯ ರೂಪರೇಶಿಗಳನ್ನು ಅಳವಡಿಸಿ ನೊಂದು ಬೆಂದ ಬಡವರ ಪರ ಕಾರ್ಯಕ್ರಮಗಳನ್ನು ಮಾಡುವುದಾಗಿ ಹೇಳಿ, ರೋಟರಿ ಸಂಸ್ಥೆಯು ಯುವಜನರಿಗೆ ನಾಯಕತ್ವ ಮತ್ತು ಸೇವಾ ಕಾರ್ಯಕ್ರಮಗಳನ್ನು ಪ್ರಾಯೋಜಿಸುತ್ತದೆ. ರೋಟರಿ ಸಂಸ್ಥೆಯು ಒನ್ ಮ್ಯಾನ್ ಕಾರ್ಯಕ್ರಮವಲ್ಲ ಎಲ್ಲರೂ ಒಟ್ಟಾಗಿ ಯಾವುದೇ ಕೆಲಸವನ್ನು ಮಾಡಿದರೆ ಯಶಸ್ಸು ಖಂಡಿತ ನಮ್ಮದಾಗುತ್ತದೆ ಅದು ನಮ್ಮ ಕೊರಟಗೆರೆ ಸಂಸ್ಥೆಯ ರೋಟೋರಿಯನ್ಸ್ ಎಲ್ಲರೂ ಒಟ್ಟಾಗಿ ಮಾಡುವುದಾಗಿ ಪ್ರಾಮಾಣಿಕವಾಗಿ ಪ್ರಮಾಣ ಮಾಡಿದರು. ಜೊತೆಗೆ ರೋಟರಿ ಕ್ಲಬ್ನ ವಿವಿಧ ಹುದ್ದೆಗಳಿಗೆ ಹೊಸ ಪದಾಧಿಕಾರಿಗಳು ಜವಾಬ್ದಾರಿ ವಹಿಸಿಕೊಂಡರು.
ಕಳೆದ ವರ್ಷದ ಪ್ರಮುಖ ಸಾಧನೆಗಳು:
- ಆರೋಗ್ಯ: ಡಯಾಲಿಸ್ ರೋಗಿಗಳಿಗೆ ಸಹಾಯ
- ಅಂಗವಿಕಲರಿಗೆ: ವೀಲ್ಚೇರ್ ವಿತರಣೆ
- ಮಹಿಳಾ ಸಬಲೀಕರಣ: ಎಲೆಕ್ಟ್ರಿಕ್ ಆಟೋ ವಿತರಣೆ
- ಮಕ್ಕಳ ಆರೋಗ್ಯ: ಪಲ್ಸ್ ಪೋಲಿಯೋ ಕಾರ್ಯಕ್ರಮ
ಈ ವೇಳೆ ಇನ್ಸ್ಟಾಲೇಷನ್ ಅಧಿಕಾರಿ ಡಿ ವಿನೋದ್ ಕುಮಾರ್, ಜಿಲ್ಲಾ ಕಾರ್ಯದರ್ಶಿ ಪ್ರಸನ್ನ ಕುಮಾರ್, ಜಿಲ್ಲಾ ಜಂಟಿ ನಿರ್ದೇಶಕ ಬಿಳಿಗೆರೆ ಶಿವಕುಮಾರ್, ಸಂಸ್ಥಾಪಕ ಅಧ್ಯಕ್ಷ ಶ್ರೀನಿವಾಸ್ ಮೂರ್ತಿ, ಕಾರ್ಯದರ್ಶಿಹೊನ್ನೇಶ್ ಪಿಕೆ ,ನಾಗರಾಜು, ಸುರೇಶ್ ಎನ್ ಯು, ನಂದನ್, ಪ್ರಸನ್ನಕುಮಾರ್. ಎಸ್, ಚೇತನ್ ದಾಸರಹಳ್ಳಿ, ನಾಗೇಂದ್ರ ಕುಮಾರ್, ನವಕೋಟಿ ನಾರಾಯಣ್, ಹನುಮಂತರಾಜು ಸೇರಿದಂತೆ ಇನ್ನಿತರರು ಇದ್ದರು.
ವರದಿ. ಪ್ರಸನ್ನಕುಮಾರ್. ಎಸ್. ಕೊರಟಗೆರೆ




















