ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ದೌರ್ಜನಕ್ಕೆ ಒಳಗಾಗಿದ್ದ ಕುಟುಂಬಕ್ಕೆ ಸರ್ಕಾರದಿಂದ 8 ಲಕ್ಷ ಪರಿಹಾರ ಹಾಗೂ ಸರ್ಕಾರಿ ನೌಕರಿ ಕೊಡಿಸಿದ:ರಘುವೀರ ನಾಯಕ

ರಾಯಚೂರು//ಮಾ7. ಜಿಲ್ಲೆಯ ಹೈದರಾಬಾದ್ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕ ಸಂಘದ ವಿಭಾಗೀಯ ಕಾರ್ಯದರ್ಶಿ ಎನ್. ರಘುವೀರ ನಾಯಕ ಅವರು ಮತ್ತೊಂದು‌ ಮಹತ್ವದ ಕೆಲಸ ಮಾಡಿದ್ದಾರೆ.‌

ದೌರ್ಜನ್ಯಕ್ಕೆ ಒಳಗಾಗಿದ್ದ ಮತ್ತೊಂದು ಕುಟುಂಬಕ್ಕೆ ಸರಕಾರದಿಂದ 8 ಲಕ್ಷ ರೂ ಪರಿಹಾರ ಹಾಗೂ ಸರಕಾರಿ ನೌಕರಿ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಹಿಂದೆ ರಾಯಚೂರು ನಗರದ ಎಪಿಎಂಸಿ ಯಲ್ಲಿ ಹಮಾಲಿ ಕೆಲಸ ಮಾಡುತ್ತಿದ್ದ ವಾಲ್ಮೀಕಿ ಸಮಾಜದ ತಿಮ್ಮಪ್ಪ ಎಂಬ ವ್ಯಕ್ತಿಯನ್ನು ದುಷ್ಕರ್ಮಿ ಕೊಲೆ ಮಾಡಿದ್ದ. ಕುಟುಂಬ ತೀವ್ರ ಕಂಗಾಲಾದಾಗ ನೆರವಿಗೆ ನಿಂತಿದ್ದ ರಘುವೀರ ನಾಯಕ ಕಚೇರಿ-ಕಚೇರಿ ಅಲೆದಾಡಿ ದಾಖಲಾತಿಗಳನ್ನು ಸಂಗ್ರಹಿಸಿ ಎಸ್ ಸಿ ಎಸ್ ಟಿ ದೌರ್ಜನ್ಯ ಪ್ರಕರಣದಡಿ ಕುಟುಂಬಕ್ಕೆ 8 ಲಕ್ಷ ರೂ ಪರಿಹಾರ ಮತ್ತು ತಿಮ್ಮಪ್ಪನ ಪಿಯುಸಿ ಓದುತ್ತಿದ್ದ ಮಗನಿಗೆ ಸರಕಾರಿ‌ ನೌಕರಿ ಕೊಡಿಸಿದ್ದರು.

ಈಗ ಇಂತದ್ದೇ ಪ್ರಕರಣದಲ್ಲಿ ನೊಂದ ಕುಟುಂಬದ ನೆರವಿಗೆ ರಘುವೀರ ನಾಯಕ ನಿಂತಿದ್ದಾರೆ.ಮಾನವಿ ತಾಲೂಕಿನ ಗವಿಗಟ್ ಗ್ರಾಮದಲ್ಲಿ ವಾಲ್ಮೀಕಿ ನಾಯಕ ಸಮಾಜದ ಅಮರೇಶ ಎಂಬ ಯುವಕನ ಕೊಲೆ ಆಗಿತ್ತು. ಹದಿನೈದು ಜನರ ಮೇಲೆ ಕೊಲೆ ಪ್ರಕರಣ ದಾಖಲಾಗಿದೆ.

ಕೊಲೆಯಾದ ಅಮರೇಶನಿಗೆ ಮದುವೆಯಾಗಿ ಕೇವಲ ಆರು ತಿಂಗಳು ಆಗಿತ್ತು. ಒಕ್ಕಲುತನ ಮಾಡಿಕೊಂಡಿದ್ದ ಅಮರೇಶ ತನ್ನದಲ್ಲದ ತಪ್ಪಿಗೆ ಕೊಲೆಯಾಗಿ ಹೋಗಿದ್ದ. ಅಮರೇಶನ ತಾಯಿ ಮತ್ತು ಪತ್ನಿಗೆ ಜೀವವೇ ಹೋದಂತಾಗಿ ಕಂಗಾಲಾಗಿ ಹೋಗಿದ್ದರು.

ಈ ವಿಷಯ ರಘುವೀರ ನಾಯಕ ಗಮನಕ್ಕೆ ಬಂದಾಗ, ಹೋದ ಅಮರೇಶನ ಜೀವ ಅಂತೂ ವಾಪಸ್ ಬರಲ್ಲ, ಆದರೆ ಆ ಕುಟುಂಬಕ್ಕೆ ಸರಕಾರ ನೀಡುವ ಸೌಲಭ್ಯದಿಂದ ವಂಚಿತ ಆಗಬಾರದು ಅನ್ನುವ ನಿರ್ಧಾರಕ್ಕೆ ಬಂದು, ಕೊಲೆಯಾದ ಅಮರೇಶನಿಗೆ ಸಂಬಂಧಿಸಿದ ಎಫ್ ಐ ಆರ್ ಸೇರಿದಂತೆ ಪ್ರತಿಯೊಂದು ದಾಖಲೆ ಸಂಗ್ರಹಿಸಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮಾತನಾಡಿ ನೆರವು ಒದಗಿಸುವಲ್ಲಿ ಯಶಸ್ವಿಯಾಗಿದ್ದಾರೆ.
8 ಲಕ್ಷ ರೂ ನಗದು ಪರಿಹಾರವನ್ನು ಅಮರೇಶನ ತಾಯಿಗೆ ಮತ್ತು ಸರಕಾರಿ ಉದ್ಯೋಗದ ಆದೇಶವನ್ನು ಅಮರೇಶನ ಪತ್ನಿ ಲಕ್ಷ್ಮೀ ಗೆ ಕೊಡಿಸಿದ್ದಾರೆ.

ಇವತ್ತು ಅಮರೇಶನ ಕುಟುಂಬವನ್ನು ಜಿಲ್ಲಾಧಿಕಾರಿ ಕಚೇರಿಗೆ ಕರೆದುಕೊಂಡು ಹೋಗಿ ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ ಅವರಿಂದ ನೇಮಕಾತಿ ಆದೇಶ ಪತ್ರವನ್ನು ಕೊಡಿಸಿದ್ದಾರೆ. ಪಶುಪಾಲನಾ ಇಲಾಖೆಯಲ್ಲಿ ಗ್ರೂಪ್ ಡಿ ಹುದ್ದೆಗೆ ಅಮರೇಶನ ಪತ್ನಿ ಲಕ್ಷ್ಮೀ ಅವರ ನೇಮಕ ಮಾಡಿರುವ ಆದೇಶವನ್ನು ಜಿಲ್ಲಾಧಿಕಾರಿಗಳು ನೀಡಿದ್ದಾರೆ.

ರಘುವೀರ ನಾಯಕ ಅವರ ಕಾರ್ಯಕ್ಕೆ ಸ್ವತಃ ಜಿಲ್ಲಾಧಿಕಾರಿಗಳೇ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಂತಹ ಪ್ರಕರಣದಲ್ಲಿ ಸರಕಾರಿ ನೌಕರಿ ದೊರೆಯಲು ಹಲವು ವರ್ಷಗಳೇ ಬೇಕಾಗುತ್ತದೆ. ಆದರೆ, ಈ ಪ್ರಕರಣದಲ್ಲಿ ಒಂದೇ ವರ್ಷದಲ್ಲಿ ಆದೇಶ ಮಾಡಲು ಜಿಲ್ಲಾಧಿಕಾರಿಗಳು ಕಾರಣರಾಗಿದ್ದಾರೆ. ಆದೇಶ ಮಾಡಿದ ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ ಅವರಿಗೂ ಹಾಗೂ ನೊಂದ ಕುಟುಂಬದ ನೆರವಿಗೆ ನಿಂತ ರಘುವೀರ ನಾಯಕ ಅವರಿಗೆ ಸಮುದಾಯದ ಅನೇಕ ಮುಖಂಡರು , ಅನ್ಯ ಅಸಮುದಾಯದ ಮುಖಂಡರು ಹಾಗೂ ರಾಯಚೂರು ಜಿಲ್ಲೆಯ ವಾಲ್ಮೀಕಿ ಸಮುದಾಯದರು ಇವರ ಕಾರ್ಯವನ್ನು ಮೆಚ್ಚಿ ಅಭಿನಂದನೆಯನ್ನು ಸೂಚಿಸಿದ್ದಾರೆ. ಇವರ ಸಮಾಜ ಕಾರ್ಯಕ್ಕೆ ಅನೇಕ ಯುವಕರು ಪ್ರೇರಿತರಾಗಿ ನಾವು ಸಹ ಇವರಂತೆ ಸಮಾಜ ಸೇವೆ ಮಾಡಬೇಕು ಎಂಬ ನಿರ್ಧಾರವನ್ನು ಹೊಂದಿದ್ದಾರೆ. ರಘುವೀರ ನಾಯಕರಿಗೆ ಫೋನಿನ ಮೂಲಕ ವಿಚಾರಿಸಿದಾಗ ಅವರು ಸಮಾಜ ಸೇವೆ ಮಾಡುವಲ್ಲಿ ನನಗೆ ಆತ್ಮ ಸಂತೃಪ್ತಿ ಇದೆ ಎಂದು ಹೇಳಿದರು.
ವರದಿ// ವೆಂಕಟೇಶ.ಹೆಚ್.ಬೂತಲದಿನ್ನಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ