ಹೂಗುಚ್ಛಕ್ಕೆ ಉಪಯೋಗಿಸುವ ಹಸಿರೆಲೆ ಗರಿಗಳು
ಬಿಡಿಸಿ ಜೋಡಿಸಿದಾಗ ಅರಳಿರುವ ಪಚ್ಚೆ ಪುಷ್ಪಗಳು
ಕೈತೋಟದಲಿ ತೂಗುತಿದ್ದ ಶ್ವೇತ ತುಂಬೆಹೂಗಳು
ತೋಟಗಳ ಅಂಚಿನಲಿ ಶೋಭಿಸುವ ಕುಡಿಗಳು
ಕ್ರಿಯಾಶೀಲ ಕಲೆಯಲಿನ ಸುಲಲಿತ ಚಿತ್ತಾರವು
ಶುಭೋದಯದಿ ಮೂಡಿರುವ ಲಘು ಕಾವ್ಯವು
ಅಭಿಮಾನಿಗಳ ಮನೋಲ್ಲಾಸಕ್ಕಾಗಿ ಅರ್ಪಿತವು
ದಿನವಿಡೀ ಉಲಿಯಲು ಮನದ ಸಮತೋಲನವು
- ಲಲಿತಾ ಕೆ ಆಚಾರ್, ಬೆಂಗಳೂರು




















