ಕನಕಗಿರಿ : ದಿನಾಂಕ 15/08/2026 ರ ಶನಿವಾರದಂದು 80 ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಕನಕಗಿರಿ ಪಟ್ಟಣದ ಶ್ರೀ ಸಾಯಿ ಪಬ್ಲಿಕ್ ಶಾಲೆಯಲ್ಲಿ ಸಂಸ್ಥೆಯ ಆಡಳಿತ ಮಂಡಳಿಯವರಾದ ಶ್ರೀ ಅಮರೇಶಪ್ಪ ಜೀನೂರು ಕಾರಟಗಿ ( ಗೌರವಾನ್ವಿತ ಅಧ್ಯಕ್ಷರು ಶ್ರೀ ಸಾಯಿ ಶಿಕ್ಷಣ ಸಂಸ್ಥೆ) ಹಾಗೂ ಶ್ರೀ ಪರಸಪ್ಪ ಸುದ್ದಿ ಕಾರಟಗಿ
(ಗೌರವಾನ್ವಿತ ಉಪಾಧ್ಯಕ್ಷರು ಶ್ರೀ ಸಾಯಿ ಶಿಕ್ಷಣ ಸಂಸ್ಥೆ.) ಇವರಿಂದ ತ್ರಿವರ್ಣ ಧ್ವಜಾರೋಹಣ ನೆರವೇರಿಸುವುದರೊಂದಿಗೆ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಹರೀಶ ನಾಯಕ, ಸಹ ಶಿಕ್ಷಕರಾದ ಶ್ರೀ ಮಂಜುನಾಥ ಹಾಸಗಲ್, ಸಹ ಶಿಕ್ಷಕಿ ಬೀಬಿ ಫಾತಿಮಾ ಗಡಾದ್, ಸಹಶಿಕ್ಷಕರಾದ ಶ್ರೀ ಮಂಜುನಾಥ ಮಿಟ್ಲಕೋಡ, ಹಾಗೂ ಇನ್ನುಳಿದ ಸಹ ಶಿಕ್ಷಕಿಯರಾದ ಶ್ರೀಮತಿ ತ್ರಿವೇಣಿ ರಾಮ್ ಜಿ, ರಿಯಾನಾ ಬೇಗಂ, ಶ್ರೀಮತಿ ನೀಲಾ ಚಿತ್ರಗಾರ, ಪದ್ಮಾವತಿ ಚಿತ್ರಗಾರ, ಅಕ್ಷತಾ ಬೋಂದಾಡೆ, ಶಶಿಕಲಾ ತಂದೆ ನಾಗೇಶ ಕನಕಗಿರಿ, ರೋಜಾ ಕನಕಗಿರಿ ಶಾಲೆಯ ಅಕೌಂಟೆಂಟ್ ಶ್ರೀ ವೆಂಕಟೇಶ ಕಂಠಿ ಮತ್ತು ಬೋಧಕೇತರ ಸಿಬ್ಬಂದಿಯಾದ ವೆಂಕಟೇಶ ಕಲಿಕೇರಿ, ಶ್ರೀಮತಿ ಜುಬೇದಾ ಬೇಂಗಂ, ಜಡೇಶ್.ವಿ, ಭೀಮೇಶ ಕಲಿಕೇರಿ, ಹನುಮೇಶ ತಿಪ್ಪನಾಳ ಹಾಗೂ ಶಾಲೆಯ ಪಾಲಕರು ಮತ್ತು ಮುದ್ದು ಮಕ್ಕಳು ಭಾಗವಹಿಸಿದ್ದರು.
ಶ್ರೀಮತಿ ತ್ರಿವೇಣಿ ರಾಮ್ ಜಿ ಶಿಕ್ಷಕಿ ಕಾರ್ಯಕ್ರಮದ ನಿರೂಪಣೆಯ ಜವಾಬ್ದಾರಿ ಹೊತ್ತು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರ್ವಹಿಸಿದರು. ಇನ್ನುಳಿದ ಶಿಕ್ಷಕ ಶಿಕ್ಷಕಿಯರು ಕೂಡ ಇನ್ನುಳಿದ ಜವಾಬ್ದಾರಿ ನಿರ್ವಹಿಸಿದರು.
ಬೀಬಿ ಫಾತಿಮಾ ಅವರಿಂದ ಮಕ್ಕಳಿಗೆ ಶಾಲಾ ಹಂತದಲ್ಲಿ ನೃತ್ಯ ಅಭ್ಯಾಸ ಮಾಡಿಸಿ ಶಾಲೆಯಲ್ಲಿ ನೃತ್ಯ ಪ್ರದರ್ಶಿಸಲಾಯಿತು.
ಹಾಗೂ ಪಟ್ಟಣದ ಪಬ್ಲಿಕ್ ಮೈದಾನದಲ್ಲಿ ಸರಕಾರದಿಂದ ಪ್ರತಿ ವರ್ಷವೂ ನಡೆಯುವ ಕಾರ್ಯಕ್ರಮದಲ್ಲಿ ಶಾಲೆಯಿಂದ ಪಥಸಂಚಲನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು.
ಪಥ ಸಂಚಲನದ ಕುರಿತು ಶಾಲೆಯ ಮಕ್ಕಳಿಗೆ ಶ್ರೀ ಮಂಜುನಾಥ ಮಿಟ್ಲಕೋಡ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಕುರಿತು ಮಕ್ಕಳಿಗೆ ಶಿಕ್ಷಕಿಯಾದ ರೋಜಾ ಕನಕಗಿರಿ ಅಭ್ಯಾಸ ಮಾಡಿಸಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶಾಲೆಯ ಮಕ್ಕಳಿಗೆ ತೃತೀಯ ಸ್ಥಾನ ದೊರಕಿದೆ. ಪಟ್ಟಣದ ಗೌರವಾನ್ವಿತ ತಹಶೀಲ್ದಾರರಿಂದ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಶಾಲೆಯ ಮಕ್ಕಳ ಸಾಧನೆಗೆ ಪಾಲಕರು, ಪೋಷಕರು, ಹಾಗೂ ಶಾಲೆಯ ಆಡಳಿತ ಮಂಡಳಿಯವರು ಸಂತಸ ವ್ಯಕ್ತಪಡಿಸಿದರು.
ಇನ್ನುಳಿದಂತೆ ಶಾಲಾ ಹಂತದ ಸಾಂಸ್ಕೃತಿಕ ಕಾರ್ಯಕ್ರಮಗಳಾದ ನೃತ್ಯ, ಭಾಷಣ ಮುಂತಾದವುಗಳು ಯಶಸ್ವಿಯಾಗಿ ನೆರವೇರಿಸಲಾಯಿತು.
ವರದಿ ಹನುಮಂತಪ್ಪ ನಾಯಕ




















