ಕಲ್ಬುರ್ಗಿ: ಜೇವರ್ಗಿ ತಾಲೂಕಿನ ಅಂಕಲಗಿ ಗ್ರಾಮದ ಸಮಾಧಾನ ಪೂಜಾರಿಯವರು ರಾಜ್ಯ ರಾಜಕೀಯ ವಲಯದಲ್ಲಿ ಬಿರುಗಾಳಿ ಎಬ್ಬಿಸಿದ್ದಾರೆ ಮುಂಬೈ ಖ್ಯಾತ ಉದ್ಯಮಿ 2023 ನೇ ವಿಧಾನ ಸಭೆಯ ಚುನಾವಣೆ ಸಮೀಪಿಸುತ್ತಿದ್ದಂತೆ,,ರಾಜಕಾರಣಿಗಳು ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಸೇರ್ಪಡೆಯಾಗುವವರ ಸಂಖ್ಯೆ ಹೆಚ್ಚುತ್ತಿದೆ ಆದರೆ ಇಲ್ಲೊಂದು ಮತ ಕ್ಷೇತ್ರದಲ್ಲಿ ಮುಂಬೈ ಖ್ಯಾತ ಉದ್ಯಮಿ ಒಬ್ಬರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ ಎಂದು ಜೇವರ್ಗಿ ನಗರದಲ್ಲಿ ಬಿಸಿ ಬಿಸಿ ಚರ್ಚೆಯಾಗುತ್ತಿದೆ. ಅದು ಯಾವ ವಿಧಾನ ಸಭಾ ಕ್ಷೇತ್ರ ಎಂದರೆ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಕ್ಷೇತ್ರ ಹಾಗೂ ಹಾಲಿ ಶಾಸಕರಾದ ಡಾ|| ಅಜೇಯ್ ಸಿಂಗ್ ರವರ ಮತ ಕ್ಷೇತ್ರಕ್ಕೆ. ಬಿರುಗಾಳಿ ಎಬ್ಬಿಸಿದ ಮುಂಬೈ ಖ್ಯಾತ ಉದ್ಯಮಿ ಸಮಾಧಾನ ಪೂಜಾರಿಯವರು ಸಂಚಲನ ಮೂಡಿಸಿದ್ದಾರೆ.
ಮುಂಬೈನ ಖ್ಯಾತ ಉದ್ಯಮಿ ಅಭಿಮಾನಿಗಳು ಸಂಭ್ರಮಾಚರಣೆ?
ಸಮಾಧಾನ ಪೂಜಾರಿಯವರ ಹೆಸರಿನಲ್ಲಿ ಅಭಿಮಾನಿಗಳ ಸಂಘ ರಚನೆ ಮಾಡಿದ್ದಾರೆ. ಈ ಮೂಲಕ ಎಲ್ಲಾ ಗ್ರಾಮಗಳಲ್ಲಿ ಸಮಾಧಾನ ಪೂಜಾರಿ ರವರ ಕಾರ್ಯ ದಕ್ಷತೆ ಸಮಾಜದ ಪರ ಕೆಲಸ ಕಾರ್ಯಗಳು ಎಲ್ಲೆಲ್ಲಿ ಮಾಡಿದ್ದಾರೆ ಹಾಗೂ ಅದಲ್ಲದೆ ನಮ್ಮ ಕ್ಷೇತ್ರಕ್ಕೆ ಅವರು ಬಂದರೆ, ಮುಂದೆ. ನಮ್ಮ ಜೇವರ್ಗಿ ಕ್ಷೇತ್ರದಲ್ಲಿ ಅಭಿವೃದ್ಧಿ ಪರ ಕೆಲಸ ಕಾರ್ಯಗಳು ಹೊಳೆ ಹರಿಸಬಹುದು ಎಂದು ಹೇಳಿದರು.
ಮುಂಬೈಯಲ್ಲಿ ನೂರಾರು ಜನಪರ ಕಾರ್ಯಗಳು
ಸಾವಿರಾರು ಕುಟುಂಬಗಳಿಗೆ ಆಶ್ರಯ ನೀಡಿದ ಸಮಾಧಾನ ಪೂಜಾರಿಯವರು ಮುಂಬೈನಲ್ಲಿ ಅವರದ್ದೇ ಆದ ಭಾಗ್ಯ ಡೆವಲಪರ್ಸ್ ಮೂಲಕ ಬಡ ಕುಟುಂಬಗಳಿಗೆ ಸಹಾಯ ಮಾಡುತ್ತಾ ಸಮಾಜ ಮುಖಿ ಕಾರ್ಯವನ್ನು ಯಶಸ್ವಿಯಾಗಿ ಹತ್ತು ವರ್ಷಗ ಳಿಂದ ಮಾಡುತ್ತಾ ಬಂದವರು ಅದರ ಮೂಲಕ ಮುಂಬೈ ಹಾಗೂ ದೆಹಲಿ ಮಟ್ಟದ ರಾಷ್ಟ್ರೀಯ ರಾಜಕಾರಣಿಗಳ ಜೊತೆ ಆತ್ಮೀಯತೆ ಗಳಿಸಿಕೊಂಡರುವ ಇವರು ಈಗ ಜೇವರ್ಗಿ ಕ್ಷೇತ್ರದಲ್ಲಿ ಅಚ್ಚರಿ ಮೂಡಿಸಿದ್ದಾರೆ.
ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೆ
ವೇದಿಕೆ ಸಿದ್ಧವಾಗುತ್ತಿದೆ ಎಂದು ಅವರ ಆಪ್ತ ವಲಯದಿಂದ ತಿಳಿದು ಬಂದಿದೆ. ರಾಷ್ಟ್ರೀಯ ನಾಯಕರ ಸಮ್ಮುಖದಲ್ಲಿ ಆಗುತ್ತಿದೆಯೇ ಇಲ್ಲವೇ ರಾಜ್ಯ ನಾಯಕರ ಸಮ್ಮುಖದಲ್ಲಿ ಆಗುತ್ತಿದೆಯೇ ಎಂಬುದುಯಕ್ಷ ಪ್ರಶ್ನೆಯಾಗಿದೆ.ಆದರೆ ಬಿಜೆಪಿ ಪಕ್ಷಕ್ಕೆ ಬರುವುದು ಖಚಿತ ಎಂದು ತಿಳಿದು ಬಂದಿದೆ.
ಸಮಾಧಾನ ಪೂಜಾರಿಯವರ ಕಣ್ಣು ಬಿಜೆಪಿ ಪಕ್ಷದ ಮೇಲೆ
ಜೇವರ್ಗಿ ಮತಕ್ಷೇತ್ರದಿಂದ ಸ್ಪರ್ಧಿಸಲು ಆಕಾಂಕ್ಷಿಗಳು ಹಲವಾರು ನಾಯಕರು ಇದ್ದಾರೆ.
ಆದರೆ ಮುಂಬೈನ ಖ್ಯಾತ ಉದ್ಯಮಿ ಸಮಾಧಾನ ಪೂಜಾರಿ ಅಂಕಲಗಿ ಗ್ರಾಮದ ಭಾಗ್ಯ ಡೆವಲಪರ್ಸ್ ಹಾಗೂ ಕಲಬುರ್ಗಿಯ ಖುಷಿ ಡೆವಲಪರ್ಸ್ ಮಾಲಿಕರಾದ ಸಮಾಧಾನ ಪೂಜಾರಿ ಬಿಜೆಪಿ ಪಕ್ಷದ ಹುರಿಯಾಳು ಆಗುವುದಕ್ಕೆ ಅಣಿಯಾಗಿದ್ದಾರೆ ಎಂದು ಅವರ ಆಪ್ತ ಬಳಗದಿಂದ ಸಿಕ್ಕ ಮಾಹಿತಿ.
ವರದಿ: ರಾಜಶೇಖರ ಮಾಲಿ ಪಾಟೀಲ್ ಶಹಾಪುರ