ಕಲಬುರ್ಗಿ: ಜೇವರ್ಗಿ ತಾಲೂಕಿನ ಬಂಟ್ವಾಳ ಗ್ರಾಮದಲ್ಲಿ ಜನಿಸಿದ ಗ್ರಾಮೀಣ ಭಾಗದ ಬಡ ಕುಟುಂಬದಿಂದ ಬಂದ ದಿನ ದಲಿತರ ಪಾಲಿನ ಆಶಾಕಿರಣ ಬಡವರಿಗೆ ಸಹಾಯ ಮಾಡುವ ಒಳ್ಳೆಯ ಹೃದಯವಂತರು.
ಇವರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸ ಬಂಟ್ವಾಳ ಗ್ರಾಮದಲ್ಲಿ ಮುಗಿಸಿ ಪ್ರೌಢ ಹಾಗೂ ಪದವಿ ಜೇವರ್ಗಿಯಲ್ಲಿ ಪೂರ್ಣಗೊಳಿಸಿ,
ಸಿದ್ದಾರ್ಥ್ ಕಾನೂನು ಪದವಿಯನ್ನು ಕಲಬುರ್ಗಿ ವಿಶ್ವವಿದ್ಯಾಲಯದಲ್ಲಿ ಮುಗಿಸಿದರು.
ಕಾನೂನು ಪದವಿ ಮುಗಿಸಿ ಸತತವಾಗಿ 17 ವರ್ಷಗಳ ಕಾಲ ವಕೀಲ ವೃತ್ತಿಯನ್ನು ಮಾಡುತ್ತಾ ಬಂದವರು,
ಬಡತನ ಕುಟುಂಬದಿಂದ ಬಂದು ಮತ್ತು ರೈತನ ಮಗನಾಗಿ ಸಮಾಜದಲ್ಲಿ ಉತ್ತಮ ಸೇವೆ ಮಾಡುತ್ತಿರುವುದು. ನೋಡಿ ಎ.ಐ.ಸಿ.ಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರ ಕೃಪಾ ಆಶೀರ್ವಾದದಿಂದ ಭಾರತ ಸರ್ಕಾರ ನೋಟರಿ ಕೆಲಸ 2017 ರಿಂದ ಪ್ರಾರಂಭವಾಗಿ ಸಮಾಜಕ್ಕಾಗಿ ಜನಸಾಮಾನ್ಯರಿಗೆ ತೊಂದರೆ ಆಗದಂತೆ ಒಳ್ಳೆಯ ಮನಸ್ಸಿನಿಂದ ಜನರಿಗೆ ನ್ಯಾಯ ಒದಗಿಸುತ್ತಾ ಬಂದವರು.ಇವರ ಜನಪರ ಸೇವೆಯನ್ನು ನೋಡಿ ಗುರುತಿಸಿ ರಾಜಶೇಖರ್ ಶಿಲ್ಪಿ ಬುಟ್ನಾಳ ಅವರಿಗೆ ಮಾನಸ ಗಂಗೋತ್ರಿ ಶಿಕ್ಷಣ ಸಂಸ್ಥೆಯವರು ಗುರುದೇವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವರದಿ:ರಾಜಶೇಖರ ಮಾಲಿ ಪಾಟೀಲ್ ಶಹಾಪುರ