ರಾಜ್ಯದ ತುಂಬಾ ಇರುವ ಕೆರೆ ಮತ್ತು ನದಿ ತೀರದಲ್ಲಿ ಮರಳು ಗಣಿಗಾರಿಕೆ ನಡೆಯುತ್ತಿದ್ದು
ಇದು ಕಾನೂನಿನ ಪ್ರಕಾರ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನಿಯಮದಂತೆ ನಡೆಯುತ್ತಿದೆಯೇ ಎಂಬ ಅನುಮಾನಗಳು ಕಾಡುತ್ತದೆ.
ಮರಳು ಗಣಿಗಾರಿಕೆಗೆ ನಡೆಯುವ ಸ್ಥಳದಲ್ಲಿ ನೋಡಿದರೆ ಸಾಕು ನನ್ನ ಮೈ ಜುಮ್ ಎನ್ನುತ್ತದೆ.
ಮನುಷ್ಯ ತನ್ನ ಸ್ವಾರ್ಥಕ್ಕೆ ಮತ್ತು ರಾಜಕೀಯ ವ್ಯಕ್ತಿಗಳು ಅಧಿಕಾರಿಗಳು, ಹಣದ ದುರಾಸೆಯಿಂದ
ಇಂದು ನಮ್ಮ ನಾಡಿನಲ್ಲಿ ಜೀವ ಜಲಗಳು ನಾಶದ ಅಂಚಿಗೆ ಬಂದು ನಿಂತಿದೆ.
ಅಕ್ರಮ ಮರಳು ಗಣಿಗಾರಿಕೆ ವಿರುದ್ಧ ಯಾರೇ ಒಬ್ಬ ವ್ಯಕ್ತಿ ಹೋರಾಟ ನಡೆಸಿದ್ದರೂ ಮತ್ತು ಅಧಿಕಾರಿಗಳು ಕ್ರಮ ಕೈಗೊಂಡರೆ ಅವರ ಮೇಲೆ ಹಲ್ಲೆಗಳು ನಡೆಯುವುದು ಖಚಿತ.
ಹೀಗೆ ಯಂತ್ರಗಳನ್ನು ಬಳಸಿ ಮರಳು ಗಣಿಗಾರಿಕೆ ಮಾಡಿದರೆ
ಅಂತರ್ಜಲ ಮಟ್ಟ ಕಡಿಮೆಯಾಗುತ್ತದೆ
ಅಲ್ಲದೆ ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ,ಆಹಾರಕ್ಕೆ ನಾಂದಿ ಹಾಡಿದ ಹಾಗೆ
ಇದಕ್ಕೆ ಯಾರು ಹೊಣೆ ಎಂಬುದು ನಮ್ಮ ಮುಂದೆ ಇರುವ ಪ್ರಶ್ನೆ.
ಅಧಿಕಾರಿಗಳೋ ? ಜನಪ್ರತಿನಿಧಿಗಳೋ ?
ಗಣಿಗಾರಿಕೆ ನಡೆಸುತ್ತಿರುವವರೋ?
ಕಂಡರು ಕಾಣದಂತೆ ಇರುವ ನಾವುಗಳೇ ?
ಮನುಷ್ಯ ತನ್ನ ಸ್ವಾರ್ಥಕ್ಕೆ ಪರಿಸರ ಗುಡ್ಡಗಳು,ಕಾಡು ಗಳು,ನದಿ ಕೆರೆ ಗಳನ್ನು ನಾಶ ಮಾಡುವ ಮುಖಾಂತರ ತನ್ನ ಸಾವಿನ ಮುನ್ನುಡಿ ಬರೆಯುತ್ತಿದ್ದಾನೆ.
ವರದಿ:ಪ್ರಭಾಕರ್.D,M