ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕು ಹುಲಿಹೈದರ ಗ್ರಾಮದಲ್ಲಿ ರಾಜವಂಶಸ್ಥರಿಂದ ಗೋಪಾಳ ಕಾರ್ಯಕ್ರಮವು ಪ್ರತೀ ವರ್ಷದಂತೆ ಈ ವರ್ಷವೂ ಕನಕಗಿರಿಯ ಜಾತ್ರೆಯ ಗರುಡೋತ್ಸವ ಕಾರ್ಯಕ್ರಮದ ಪ್ರಯುಕ್ತ ಕನಕಗಿರಿ ರಾಜವಂಶಸ್ಥರಾದ ಶ್ರೀ ರಾಜಾ ನವೀನ ಚಂದ್ರ ನಾಯಕ ರವರ ನೇತೃತ್ವದಲ್ಲಿ ಗೋಪಾಳ ಕಾರ್ಯಕ್ರಮ ವಿಜ್ರಂಭಣೆಯಿಂದ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ರಾಜವಂಶಸ್ಥರ ಕುಟುಂಬದವರು , ರಾಜಪುರೋಹಿತರಾದ ಗುರುರಾಜ ಪುರೋಹಿತರು, ವಾಲ್ಮೀಕಿ ಸಮಾಜದ ಬಂಧುಗಳು ಮತ್ತು ಸಮಸ್ತ ಊರಿನ ಗುರುಹಿರಿಯರು ಭಾಗವಹಿಸಿದ್ದರು.
