ಬಾಗಲಕೋಟೆ/ಮಹಾಲಿಂಗಪುರ: ಬಾಗಲಕೋಟೆ ಜಿಲ್ಲೆಯ ಬೆಲ್ಲದ ನಾಡು ಎಂದು ಖ್ಯಾತಿ ಪಡೆದ ಮಹಾಲಿಂಗಪುರ ನಗರದಲ್ಲಿ ಎ ಆರ್ ಬೆಳಗಲಿ ಫೌಂಡೇಶನ್ ಇವರ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಣೆ ಮಾಡಿದರು.
ಹೆಣ್ಣು ಜಗದ ಕಣ್ಣು, ಕುಟುಂಬದ ಅಸ್ತಿತ್ವ, ಸಶಕ್ತ ಸಮಾಜದ ಆಧಾರ, ಬಲಿಷ್ಠ ರಾಷ್ಟ್ರದ ಅಡಿಪಾಯವೂ ಆಗಿರುವ ಹೆಣ್ಣಿನ ಸಾಧನೆಯನ್ನು ಗುರುತಿಸಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ನಿಮಿತ್ಯವಾಗಿ ಮಹಾಲಿಂಗಪುರದ ಖ್ಯಾತ ವೈದ್ಯರಾದ ಡಾ. ಉಷಾ ಬೆಳಗಲಿ ಅವರ ನೇತೃತ್ವದಲ್ಲಿ ವಿವಿಧ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಸುಮಾರು 200 ಮಹಿಳಾ ಸಾಧಕಿಯರಿಗೆ ಡಾ.ಎ ಆರ್ ಬೆಳಗಲಿ ಫೌಂಡೇಶನ್ ವತಿಯಿಂದ ಮಹಾಲಿಂಗಪುರದ ಶ್ರೀ ಬನಶಂಕರಿದೇವಿ ಸಾಂಸ್ಕೃತಿಕ ಭವನದಲ್ಲಿ ಸನ್ಮಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಡಾ. ಉಷಾ ಬೆಳಗಲಿ ಅವರು ಮಾತನಾಡಿ ಸ್ವಾತಂತ್ರ್ಯ ಪೂರ್ವದಿಂದಲೂ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ., ಸಾಕಷ್ಟು ವೀರ ಮಹಿಳೆಯರು ಬ್ರಿಟಿಷರ ವಿರುದ್ಧ ಹೋರಾಡಿ ದೇಶ ಸ್ವತಂತ್ರಗೊಳಿಸಲು ತಮ್ಮದೇ ಆದ ವಿಶೇಷ ಕೊಡುಗೆ ನೀಡಿದ್ದಾರೆ.ತೊಟ್ಟಿಲು ತೂಗುವ ಕೈ ಜಗತ್ತನ್ನೆ ಬೆಳಗುತ್ತದೆ. ಎಂಬ ದೇಶ ಸ್ವತಂತ್ರ ನಂತರ ಪಂಚಾಯಿತಿಯಿಂದ ಪಾರ್ಲಿಮೆಂಟ್ ವರೆಗೂ ಮಹಿಳೆಯರು ಸಮರ್ಥವಾಗಿ ದೇಶವನ್ನು ಮುನ್ನಡೆಸಿ ಎಲ್ಲ ಕ್ಷೇತ್ರದಲ್ಲೂ ಸೇವೆ ಸಲ್ಲಿಸಿ, ಬಲಿಷ್ಠ ಭಾರತಕ್ಕೆ ಅಪಾರ ಕೊಡುಗೆ ನೀಡಿದ್ದಾರೆ . ಪ್ರತಿ ವ್ಯಕ್ತಿಯ ಮೊದಲ ಗುರು ತಾಯಿ, ಅಮ್ಮ ಪ್ರತಿಯೊಬ್ಬರ ಮೊದಲ ಮಾತು. ತಾಯಿ, ಅಕ್ಕ, ತಂಗಿ, ಹೆಂಡತಿ, ಅಜ್ಜಿ ಅತ್ತೆಯಾಗಿ ಹೀಗೆ ವಿವಿಧ ಸಂಭಂದಗಳಿಗೆ ಜೀವ ತುಂಬಿದಾಕೆ ಮಹಿಳೆ.ಹೋರಾಟಗಾರರಾಗಿ, ರಾಣಿಯಾಗಿ, ರೈತ ಮಹಿಳೆಯಾಗಿ, ಉದ್ಯಮಿಯಾಗಿ, ರಾಜಕಾರಣಿಯಾಗಿ, ವೈದ್ಯೆಯಾಗಿ, ನರ್ಸ ಆಗಿ, ಶಿಕ್ಷಕಿಯಾಗಿ, ಪತ್ರಕರ್ತೆಯರಾಗಿ, ವಿಜ್ಞಾನಿಗಳಾಗಿ, ಎಂಜಿನಿಯರ್ ಆಗಿ, ಮಠಾಧೀಶರಾಗಿ, ಸನ್ಯಾಸಿನಿಯಾಗಿ, ಜ್ಞಾನಿಯಾಗಿ, ಕಾರ್ಮಿಕರಾಗಿ, ವಕೀಲೆಯಾಗಿ, ನ್ಯಾಯಾಧೀಶರಾಗಿ, ಅಧಿಕಾರಿಗಳಾಗಿ, ಹೀಗೆ ಎಲ್ಲಾ ರಂಗದಲ್ಲೂ ಮಹಿಳೆಯರ ಸಾಧನೆ ಅವಿಸ್ಮರಣೀಯ. ಮಹಿಳೆಯರಿಗೆ ಇನ್ನೂ ಕೂಡ ಸಾಕಷ್ಟು ವಿಧದಲ್ಲಿ ಅನ್ಯಾಯವಾಗುತ್ತಿದೆ. ಮಹಿಳೆ ಯಾವ ಪುರುಷರಿಗಿಂತಲೂ ಕಮ್ಮಿ ಇಲ್ಲ. ಇಂದು ಮಹಿಳೆ ವೃತ್ತಿ, ಪ್ರವೃತ್ತಿ, ಉದ್ಯೋಗ, ಉದ್ದಿಮೆ, ಜ್ಞಾನ, ವಿಜ್ಞಾನ, ತಂತ್ರಜ್ಞಾನದಲ್ಲಿ ಸಾಕಷ್ಟು ಯಶಸ್ಸನ್ನು ಕಂಡಿದ್ದಾಳೆ.
ಈ ಸಂದರ್ಭದಲ್ಲಿ ಶ್ರೀಮತಿ ಭಾಗ್ಯಶ್ರೀ, ಶ್ರೀಮತಿ ನಳಿನಿ ವಿ ಹಂವಿನಾಳ, ಶ್ರೀಮತಿ ಸವಿತಾ ಮುಗಳ್ಯಾಳ, ಶ್ರೀಮತಿ ದ್ರಾಕ್ಷಾಯಣಿ ಹುಣಶ್ಯಾಳ, ಶ್ರೀಮತಿ ಡಾ. ಮೀನಾಕ್ಷಿ ಹುಬ್ಬಳ್ಳಿ, ಶ್ರೀಮತಿ ಡಾ ಮೀನಾಕ್ಷಿ ಕುಬಾಟಿ. ಸೇರಿದಂತೆ ಸುಮಾರು ಎರಡು ನೂರು ಜನ ಮಹಿಳಾ ಸಾಧಕೀಯರನ್ನ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮಕ್ಕೆ ಕಾರಣಿಕರ್ತರಾದ ಸಕಲವ್ಯವಸ್ಥೆಯನ್ನು ಮಾಡಿದ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಯಶಸ್ವಿಗೊಳಿಸಲು ಕಾರಣಕರ್ತರಾದ ,ಬಸವರಾಜ ಗಣಿ, ಶ್ರೀ ಎಸ್ ಎಮ್ ಉಳ್ಳಾಗಡ್ಡಿ, ಶ್ರೀ ಸಂಜಯ ರೆಡ್ಡಿ, ಶ್ರೀ ರಮೇಶ ಗೌಂಡಿ, ಶ್ರೀ ಅಶೋಕ ಉಳ್ಳಾಗಡ್ಡಿ, ಶ್ರೀ ಜಗದೀಶ ಜಾರಿ, ಶ್ರೀ ಇಬ್ರಾಹಿಂ ಅಲಾಸ್, ಶ್ರೀ ಸಿದ್ದಪ್ಪ ಸೋರಗಾಂವಿ, ಶ್ರೀ ಬಸವರಾಜ ಗಬ್ಬಿಗೋಳ, ಸೇರಿದಂತೆ ಹಲವಾರು ಜನರು ಉಪಸ್ಥಿತರಿದ್ದರು.
ವರದಿ :-
ಮಹೆಬೂಬ ಎಂ ಬಾರಿಗಡ್ಡಿ
