ತೆಂಗಿನ ಜುಟ್ಟನು ನಡುವಲಿ ಜೋಡಿಸಿ
ಎಲೆಕೋಸಿನ ದಿಂಡನು ಅಡಿಯಲಿ ಇರಿಸಿ
ಗೋಲಾಕಾರದ ಮೂಲಂಗಿ ಬಿಲ್ಲೆಗಳ ಹಾಸಿ
ಕ್ಯಾರೆಟ್ ತುಂಡುಗಳ ಅಲ್ಲಲ್ಲಿ ಸೇರಿಸಿ
ನೋಡಲು ಮೂಡಿತ್ತು ಸುಲಲಿತ ಚಿತ್ತಾರವು
ಪದಪುಂಜಗಳ ಸೇರಿಸಲು ಲಘು ಕಾವ್ಯವು
ನಲ್ಮನಗಳಲಿ ಹಂಚಿಕೊಳಲು ನವೋಲ್ಲಾಸವು
ಸುಪ್ರಭಾತದಲಿ ಸಂಭ್ರಮಿಸಲು ಮನಕಾನಂದವು
- ಲಲಿತಾ ಕೆ ಆಚಾರ್, ಬೆಂಗಳೂರು




















