ದಾಂಡೇಲಿ: ಕೊಡುವಂತಹ ಮನಸ್ಸು ಎಲ್ಲರಿಗೂ ಬರುವುದಿಲ್ಲ, ಆತ್ಮೀಯರೆಂದೆನಿಸಿದ ಪ್ರತಿಯೊಬ್ಬರನ್ನು ಗೌರವಿಸಿ, ಸನ್ಮಾನಿಸುವ ಸಹಜತೆ ಈಗಿನ ಕಾಲಘಟ್ಟದ ಜನರಲ್ಲಿ ಮಾಸ್ಕೇರಿ ನಾಯಕರಲ್ಲಿ ಮಾತ್ರ ಕಾಣಿಸುತ್ತದೆ ಎಂದು ಶ್ರೀ ಕೃಷ್ಣ ಗೌರವ ಪ್ರಶಸ್ತಿ ಪುರಸ್ಕೃತ ಕುಂದಾಪುರ ಹಾಗೂ ದಾಂಡೇಲಿ ನಿವಾಸಿಯಾದಂತಹ ಪ್ರಕಾಶ ಶೆಟ್ಟಿಯವರು ಹೇಳಿದರು.
ಮಾಸ್ತೇರಿ ಸಾಹಿತ್ಯಾರಾಧನ ಸಂಸ್ಥೆ ಹಾಗೂ ಭಾರತಿ ಪ್ರಕಾಶನ ದಾಂಡೇಲಿ ಇವರು ಸಹಯೋಗದಲ್ಲಿ ಮಾಸ್ಕೇರಿ ಸಭಾ ಭವನದಲ್ಲಿ ಮಾಸ್ಕೇರಿ ನಾಯಕರ ತಂದೆ ಕೃಷ್ಣ ಹೆಸರಿನಲಿ ಶ್ರೀ ಕೃಷ್ಣ ಜಯಂತಿಯಂದು ವರ್ಷಂಪ್ರತಿ ನೀಡಲಾಗುವ ಶ್ರೀ ಕೃಷ್ಣ ಗೌರವ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡುತ್ತಾ
ನನ್ನದು ಮತ್ತು ಮಾಸ್ಕೇರಿ ನಾಯಕರದು 26 ವರ್ಷಗಳ ಹಿಂದಿನ ಸ್ನೇಹವಾಗಿದೆ. ದಾಂಡೇಲಿಯಂತಹ ಕಾರ್ಮಿಕ ನಗರದಲ್ಲಿ ತಮ್ಮ ಹೆಸರಿನ ಮೊದಲ ಶಬ್ದದಲ್ಲಿ ಮಾಸ್ಕೇರಿ ಎನ್ನುವ ಊರಿನ ಹೆಸರನ್ನು ಸೇರಿಸಿ ತಮ್ಮೂರಿನ ಹೆಸರನ್ನು ದಾಂಡೇಲಿ ನಗರ ಮತ್ತು ಕರ್ನಾಟಕದಲ್ಲಿ ಬೆಳಗುತ್ತಿರುವುದು ಮೂಲತಃ ಕುಂದಾಪುರದ ನಿವಾಸಿಯಾದ ನನಗೆ ಹೆಮ್ಮ ಎಂದೆನಿಸುತ್ತದೆ. ಮಾಸ್ಕೇರಿ ನಾಯಕರಂತಹ ಸಜ್ಜನ ಮತ್ತು ಮೇಲ್ದರ್ಜೆಯ ಸಾಹಿತಿಗಳಿಂದ ಪ್ರಶಸ್ತಿ ಸ್ವೀಕರಿಸುತ್ತಿರುವುದಕ್ಕೆ ನನಗೆ ಹೆಮ್ಮೆ ಇದೆ. ನನ್ನ ಹುಟ್ಟೂರಿನಲ್ಲಿ ಮಾಸ್ಕೇರಿ ನಾಯಕರಿಂದ ಪ್ರಶಸ್ತಿ ಸ್ವೀಕರಿಸುತ್ತಿರುವುದಕ್ಕೆ ವ್ಯಾಪಕ ಪ್ರಚಾರ ಸಿಕ್ಕಿದೆ, ಸಾವಿರಾರು ಯುವಕರು ಸ್ಟೇಟಸ್ ಇಟ್ಟುಕೊಂಡು ಸಂಭ್ರಮಿಸಿದ್ದಾರೆ. ಆದರೆ ದಾಂಡೇಲಿ ನಗರದಲ್ಲಿ ಮಾತ್ರ ಇದು ಕಿಂಚಿತ್ತೂ ಕಾಣಿಸುತ್ತಿಲ್ಲ, ಆದರೂ ತಂದೆ ಹೆಸರಿನಲ್ಲಿ ಮಾಸ್ಕೇರಿ ನಾಯಕರಿಂದ ಪ್ರಶಸ್ತಿ ಸ್ವೀಕರಿಸುತ್ತಿರುವುದಕ್ಕೆ ಹೆಮ್ಮೆ ಪಡುತ್ತೇನೆ ಎಂದರು.
ಕಾರ್ಯಕ್ರಮವನ್ನು ದೀಪ ಉಜ್ವಲಿಸಿ ಮಾತನಾಡಿದ ಬಂಗಾರೋದ್ಯಮಿ ಗೋವಿಂದ ರಾಯ ಶೇಟ ಅವರು, ಸಜ್ಜನರನ್ನು ಮತ್ತು ಸಾಧಕರನ್ನು ಗುರುತಿಸಿ ಗೌರವಿಸುವ ಪರಿಪಾಠ ಮಾಸ್ಕೇರಿ ನಾಯಕರಂತೆ ಎಲ್ಲರಲ್ಲಿಯೂ ಮೂಡಬೇಕಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ದಾಂಡೇಲಿ ರೋಟರಿ ಕ್ಲಬ್ ಅಧ್ಯಕ್ಷರಾದ ಮಿಥುನ ನಾಯಕ ಅವರು ಮಾತನಾಡಿ ಅರ್ಹ ವ್ಯಕ್ತಿಯನ್ನು ಸೂಕ್ತ ಸಮಯದಲ್ಲಿ ಗೌರವಿಸುವ ಕಲೆ ಮಾಸ್ಕೇರಿ ನಾಯಕರಲ್ಲಿ ಇದೆ, ಇಂತಹ ಗುಣ ಕಾಣಸಿಗುವುದು ತೀರ ವಿರಳ, ಸಜ್ಜನಿನಿಕೆಯ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದಕ್ಕೆ ಹೆಮ್ಮೆ ಪಡುತ್ತೇನೆ. ಪನಃ ಮಾಸ್ಕೇರಿ ಸಂಸ್ಥೆಗೆ ಆಗಮಿಸಲು ಬಯಸುತ್ತೇನೆ ಎಂದರು
ದಾಂಡೇಲಿ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಉದಯ ಶೆಟ್ಟಿಯವರು ಮಾತನಾಡಿ ಇಂದು ಪ್ರಥಮ ಬಾರಿಗೆ ಮಾಸ್ಕೇರಿ ಸಾಹಿತ್ಯಾರಾಧನ ಸಂಸ್ಥೆಗೆ ಆಗಮಿಸಿ ಪುಳಕಿತಗೊಂಡಿದ್ದೇನೆ. ಮಾಸ್ಕೇರಿ ನಾಯಕರ ಮನೆಗೆ ಇಂದು ಪ್ರಥಮ ಬಾರಿಗೆ ಆಗಮಿಸಿದಾಗ ಅವರ ಮನೆಯು ಪ್ರಶಸ್ತಿಯ ದೇಗುಲದಂತೆ ಕಂಡಿತು ಎಂದರು.
ಕವಿ ರವಿ ಲಕ್ಷ್ಮೀಶ್ವರ ಹಾಸ್ಯ ಕಲಾವಿದ ವಿಶ್ವನಾಥ ಭಾಗವತ ಮತ್ತು ಎಸ್. ಎನ್. ಪಾಟೀಲ ಅವರುಗಳು ಮಾತನಾಡಿ ಪ್ರಶಸ್ತಿ ಸ್ವೀಕರಿಸಿದ ಪ್ರಕಾಶ ಶೆಟ್ಟಿಯವರಿಗೆ ಶುಭ ಕೋರಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪತ್ರಕರ್ತ ರಾಜೇಶ್ ತಳೇಕರ್ ಅವರು, ಸಾಕಷ್ಟು ಅಸಮರ್ಥರು ಮತ್ತು ಕಿಂಚಿತ್ತೂ ಪ್ರಾಮಾಣಿಕತೆ ಇಲ್ಲದ ಜನರು ನನಗೆ ಪ್ರಶಸ್ತಿ ಸಿಕ್ಕಿದೆ ಅಥವಾ ನನ್ನನ್ನು ಸನ್ಮಾನಿಸಲಾಗಿದೆ ಎಂದು ಸುದ್ದಿ ಕಳುಹಿಸುತ್ತಾರೆ, ಮನಸ್ಸಿಲ್ಲದಿದ್ದರೂ ಕಾಟಾಚಾರಕ್ಕೆ ನಾಲ್ಕು ಸಾಲುಗಳನ್ನು ಬರೆದು ಸಮಾಧಿಸುತ್ತೇನೆ. ಆದರೆ ಇಂದು ಪ್ರಶಸ್ತಿ ಸ್ವೀಕರಿಸಿದ ಪ್ರಕಾಶ ಶೆಟ್ಟಿ ಅವರ ಕುರಿತು ಹೆಮ್ಮೆಯಿಂದ ಬರೆಯ ಬಯಸುತ್ತೇನೆ ಎಂದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಾಡಿನ ಹಿರಿಯ ಸಾಹಿತ ಮಾಸ್ನೇರಿ ನಾಯಕರು ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನಾಡಿದರು, ಶಿಕ್ಷಕಿ ನಂದಿನ ನಾಯ್ಕ ಮತ್ತು ಉಪನ್ಯಾಸಕಿ ನಿರೂಪನಾ ನಾಯಕ ನಿರೂಪಿಸಿ ವಂದಿಸಿದರು.
ಕಾರ್ಯಕ್ರಮದಲ್ಲಿ ಒಂದು ಕವಿತೆ ಒಂದು ಕೃತಿ ಸಂಪಾದಕಿ ಲಕ್ಷ್ಮೀ ಎಸ್. ಸಿಂಗಾಡಿ, ನ್ಯಾಯವಾದಿ ಜಯಾ ನಾಯ್ಕ, ಶಾರದಾ ಪರಶುರಾಮ, ರವಿ ಚವ್ಹಾಣ, ಉಪನ್ಯಾಸಕ ರವಿ ನಾಯ್ಕ ಸೇರಿದಂತೆ ಅನೇಕರು ಇದ್ದರು.
ವರದಿ ತೇಜಸ್ ರಾವ್, ದಾಂಡೇಲಿ



















