ಮನುಕುಲದ ಜೀವಕೋಶಗಳ ಆಪ್ತರಕ್ಷಕ
ಪರಿಮಳದಿ ಎಲ್ಲರ ಚಿತ್ತಸೆಳೆಯುವ ಮನಮೋಹಕ
ಕರೆಯುವರು ಅವನನ್ನೇ ಪೈನಾಪಲ್ ಅನಾನಸ್
ಇವನ ಕಿರೀಟದ ಗರಿಗಳಲಿ ಗಿಡದ ಗರಿಗಳು
ತುದಿಯಲಿ ಅರಳಿವೆ ಕಿತ್ತಳೆ ಸಿಪ್ಪೆಯ ಪುಷ್ಪಗಳು
ನಡುವಿನಲಿ ಗುಂಡಗಿನ ಕಾಗದದ ಬೊಟ್ಟುಗಳು
ಇದುವೇ ಇಂದಿನ ಸುಲಲಿತ ಕಾವ್ಯಚಿತ್ತಾರದ
ಸೊಬಗಿನ ಶುಭೋದಯವು
- ಲಲಿತಾ ಕೆ ಆಚಾರ್, ಬೆಂಗಳೂರು



















