ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ರೋಟರಿ ಮಿಸ್ಟ್ ಹಿಲ್ಸ್ ನಿಂದ ನಾಲ್ವರು ಶಿಕ್ಷಕರಿಗೆ ನೇಷನ್ ಬಿಲ್ಡರ್ ಪ್ರಶಸ್ತಿ ಪ್ರದಾನ

ಮಡಿಕೇರಿ : ನವತಂತ್ರಜ್ಞಾನದ ಮೂಲಕ ಅಪಾರ ಜ್ಞಾನ ಗಳಿಸುತ್ತಿರುವ ವಿದ್ಯಾರ್ಥಿಗಳಿಗೆ ಯಾವ ರೀತಿಯ ಶಿಕ್ಷಣ ನೀಡಬೇಕೆಂಬುದೇ ಶಿಕ್ಷಕ ವರ್ಗದ ನೈಜ ಸವಾಲಾಗಿ ಪರಿಣಮಿಸಿದೆ. ಶಿಕ್ಷಕರು ಪ್ರತಿಯೊಂದನ್ನೂ ಜ್ಞಾನ ಮತ್ತು ಕೌಶಲ್ಯವನ್ನು ಪರಿಷ್ಕರಿಸುತ್ತಾ ಪಾಠ ಮಾಡುವ ಅನಿವಾರ್ಯತೆಯಿದೆ ಎಂದು ಮಡಿಕೇರಿ ಆಕಾಶವಾಣಿ ಕೇಂದ್ರದ ಮುಖ್ಯಸ್ಥೆ ಸುಜಾತ ಎಫ್.ತಳವಾರ್ ಅಭಿಪ್ರಾಯಪಟ್ಟಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಆಯೋಜಿತ ನಾಲ್ವರು ಸಾಧಕ ಶಿಕ್ಷಕರಿಗೆ ರಾಷ್ಟ್ರ ನಿರ್ಮಾತೃ ಪ್ರಶಸ್ತಿ ಪ್ರಧಾನ ನೆರವೇರಿಸಿ ಮಾತನಾಡಿದ ಸುಜಾತ ತಳವಾರ್, ದಿನಗಳೆದಂತೆ ವಿದ್ಯಾರ್ಥಿಗಳಿಗೆ ಲಭಿಸುತ್ತಿರುವ ನವತಾಂತ್ರಿಕತೆಯ ಮಾಧ್ಯಮಗಳಿಂದಾಗಿ ಮೊದಲಿನಂತೆ ಪಾಠ ಹೇಳಲು ಸಾಧ್ಯವಿಲ್ಲದಂತಾಗಿ ಶಿಕ್ಷಕರ ವೃತ್ತಿಯೂ ಸವಾಲಿನದ್ದಾಗುತ್ತಲೇ ಇದೆ ಇಂಥ ಸ್ಥಿತಿಯಲ್ಲಿ ವಿದ್ಯಾರ್ಥಿಗಳಿಗೆ ಹೊಸ ವಿಚಾರಗಳ ಬಗ್ಗೆ ತಿಳಿ ಹೇಳುತ್ತಲೇ ಪಠ್ಯ, ಪಠ್ಯೇತರ ವಿಚಾರಗಳನ್ನು ಕಲಿಸುವ ಬಹಳ ದೊಡ್ಡ ಹೊಣೆಗಾರಿಕೆ ಶಿಕ್ಷಕ ವೃತ್ತಿಯವರದ್ದಾಗಿದೆ ಎಂದು ಅಭಿಪ್ರಾಯಪಟ್ಟರು.

ಸಾಧ್ಯವಿಲ್ಲದಂತಾಗಿ ಶಿಕ್ಷಕರ ವೃತ್ತಿಯೂ ಸವಾಲಿನದಾಗುತ್ತದೆ. ಇದೇ ಇಂಥ ಸ್ಥಿತಿಯಲ್ಲಿ ವಿದ್ಯಾರ್ಥಿಗಳಿಗೆ ಹೊಸ ವಿಚಾರಗಳ ಬಗ್ಗೆ ತಿಳಿಹೇಳುತ್ತಲೇ ಪಠ್ಯ, ಪಠ್ಯೇತರ ವಿಚಾರಗಳನ್ನು ಕಲಿಸುವ ಬಹಳ ದೊಡ್ಡ ಹೊಣೆಗಾರಿಕೆ ಶಿಕ್ಷಕ ವೃತ್ತಿಯವರದ್ದಾಗಿದೆ ಎಂದು ಅಭಿಪ್ರಾಯಪಟ್ಟರು.

ಮಕ್ಕಳು ಕೂಡ ಹಲವು ಸಂದರ್ಭಗಳಲ್ಲಿ ಪೋಷಕರಿಗೆ ಗುರುವಾಗಿ ಪರಿಣಮಿಸುತ್ತಾರೆ. ಮಕ್ಕಳಿಂದಲೂ ಕಲಿಯುವುದು ಸಾಕಷ್ಟಿರುತ್ತದೆ ಎಂದು ಹೇಳಿದ ಸುಜಾತ, ಶಿಕ್ಷಕರಿಗೆ ಹಿಂದಿನ ಕಾಲದಿಂದ ಇಂದಿನ ಕಾಲದವರೆಗೂ ತರಗತಿಯಲ್ಲಿ ಪಾಠ ಮಾಡುವುದು ಎಂದರೆ ನಿತ್ಯದ ಅಗ್ನಿಪರೀಕ್ಷೆಯ ಸನ್ನಿವೇಶವೇ ಆಗಿರುತ್ತದೆ. ಪಠ್ಯದಲ್ಲಿ ಇರುವುದರೊಂದಿಗೆ ಜೀವನದ ಇತರ ಮೌಲ್ಯಗಳನ್ನೂ ಕಲಿಸಬೇಕಾದ ಗುರುಗಳು ಸಮಾಜದಲ್ಲಿ ಎಂದೆಂದೂ ಇತರ ವೃತ್ತಿಗೆ ಸರಿಸಾಟಿಯಾಗದ ಜ್ಞಾನವಂತರಾಗಿದ್ದಾರೆ ಎಂದು ಶ್ಲಾಘಿಸಿದರು. ಬದುಕಿನಲ್ಲಿ ನಿಖರ ಗುರಿ ಮುಟ್ಟಲು ಸರಿಯಾದ ಗುರು ಮುಖ್ಯವಾಗಿರುತ್ತದೆ. ಇಂಥ ಗುರುವಿದ್ದರೆ ಸಾಧನೆಯ ಗುರಿ ಸುಲಭಸಾಧ್ಯ ಎಂದೂ ಸುಜಾತ ತಳವಾರ್ ಅಭಿಪ್ರಾಯಪಟ್ಟರು.

ವರದಿ: ಪ್ರಿತುನ್ ಪೂವಣ್ಣ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!