ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಹುನಗುಂದ ಕ್ಲಸ್ಟರ್ ಮಟ್ಟದ ಕ್ರೀಡಾಕೂಟ 2026-27ಕ್ಕೆ ಚಾಲನೆ

ಹುನಗುಂದ : ಕರ್ನಾಟಕ ಸರ್ಕಾರ, ಜಿಲ್ಲಾ ಪಂಚಾಯತ, ಶಾಲಾ ಶಿಕ್ಷಣ ಇಲಾಖೆ ಬಾಗಲಕೋಟೆ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಹುನಗುಂದ ಮತ್ತು ಸಮೂಹ ಸಂಪನ್ಮೂಲ ಕೇಂದ್ರ ಹುನಗುಂದ ಇವರ ಸಂಯುಕ್ತ ಸಹಯೋಗದಲ್ಲಿ ಹುನಗುಂದ ಕ್ಲಸ್ಟರ್ ಮಟ್ಟದ ಕ್ರೀಡಾಕೂಟ 2026-27 ನ್ನು ಶ್ರೀಮತಿ ಜಾಸ್ಮಿನ್ ಕಿಲ್ಲೆದಾರ್ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಉದ್ಘಾಟಿಸಿದರು.

ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಆಗಿರುವ ಶ್ರೀಮತಿ ಜಾಸ್ಮಿನ್ ಕಿಲ್ಲೇದಾರ ಮೇಡಂ ರವರು ತಾಲೂಕಾ ಕ್ರೀಡಾಂಗಣ ಹುನಗುಂದದಲ್ಲಿ ದಿನಾಂಕ 21 ಮತ್ತು 22-09-2026 ರಂದು ಎರಡು ದಿನಗಳ ಕಾಲ ಈ ಕ್ರೀಡಾಕೂಟ ಜರುಗಲಿದೆ. ಪ್ರತಿಯೊಬ್ಬ ವಿದ್ಯಾರ್ಥಿಯ ಬದುಕಿನಲ್ಲಿ ಕ್ರೀಡೆ ಬಹಳ ಅತ್ಯಮೂಲ್ಯವಾಗಿದ್ದು. ಕ್ರೀಡೆ ಇಲ್ಲದ ಜೀವನ ಕೀಟವಿದ್ದಂತೆ. ನಮ್ಮ ತಾಲೂಕಿನ ವಿದ್ಯಾರ್ಥಿಗಳು ಇಲ್ಲಿ ಜಯಶಾಲಿಯಾಗಿ ಜಿಲ್ಲಾ ಮಟ್ಟ ರಾಜ್ಯ ಮಟ್ಟದಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಬೇಕೆಂದು ವಿದ್ಯಾರ್ಥಿಗಳಿಗೆ ಸೂಚಿಸಿ, ಉದ್ಘಾಟನಾ ಪರ ನುಡಿಗಳನ್ನು ನುಡಿದರು.

ಈ ಕ್ರೀಡಾಕೂಟದಲ್ಲಿ ಹುನಗುಂದ ಕ್ಲಸ್ಟರ್ ವ್ಯಾಪ್ತಿಯ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿ , ಓಟ, ಗುಂಡು ಎಸೆತ, ಉದ್ದ ಜಿಗಿತ, ಎತ್ತರ ಜಿಗಿತ, ಕಬಡ್ಡಿ, ಖೋ-ಖೋ, ವಾಲಿಬಾಲ್ ಸೇರಿದಂತೆ ವಿವಿಧ ಕ್ರೀಡೆಗಳು ನಡೆದವು

ಕಾರ್ಯಕ್ರಮದಲ್ಲಿ ಶ್ರೀಮತಿ ಜಾಸ್ಮಿನ್ ಕಿಲ್ಲೆರ್ ಮಾನ್ಯ ಕ್ಷೇತ್ರಾಧಿಕಾರಿಗಳು ಹುನಗುಂದ,
ಶ್ರೀ ನಾಗರಾಜ್ ಹೊಸೂರು ದೈಹಿಕ ಪರಿವೀಕ್ಷಕರು ಹುನಗುಂದ,
ಶ್ರೀ ಎಂ ಎಚ್ ಪೂಜಾರಿ ಸಮೂಹ ಸಂಪನ್ಮೂಲ ವ್ಯಕ್ತಿಗಳು ಹುನಗುಂದ,
ಶ್ರೀ ಸಂಗಮೇಶ್ ಪಾಟೀಲ್ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಅಧ್ಯಕ್ಷರು ಹುನಗುಂದ,
ಶ್ರೀ ಶರಣಪ್ಪ ಮರೋಳ ಅಧ್ಯಕ್ಷರು ಎಸ್ಸಿ ಎಸ್ಟಿ ನೌಕರರ ಸಂಘ ಹುನಗುಂದ,
ಶ್ರೀ ಎನ್ ಎಂ ರೋಣದ ದೈಹಿಕ ಶಿಕ್ಷಕರು,
ಶ್ರೀ ಎಮ್ ಎಸ್ ಸಾಲಿಮಠ ದೈಹಿಕ ಶಿಕ್ಷಕರು,
ಶ್ರೀ ಎಮ್ ಎಸ್ ಮಾವಿನಕಾಯಿ ದೈಹಿಕ ಶಿಕ್ಷಕರು,
ಶ್ರೀ ಉದಯ್ ಸೆಲವಡಿ ದೈಹಿಕ ಶಿಕ್ಷಕರು,ಶ್ರೀ ಬಿ ಕೆ ಕರಡಿ ಉಪಾಧ್ಯಕ್ಷರು ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘ ಹುನಗುಂದ
ಶ್ರೀ ಮರಿಯಪ್ಪ ತಳವಾರ್ ಪೊಲೀಸ್ ಸಿಬ್ಬಂದಿಗಳು
ಹುನಗುಂದ ಕ್ಲಸ್ಟರ್ ನ ಮುಖ್ಯ ಗುರುಗಳು ಹಾಗೂ ದೈಹಿಕ ಶಿಕ್ಷಕರು ಮುದ್ದು ಮಕ್ಕಳು ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದರು.
ಶ್ರೀ ಎಂ ಎಸ್ ಮಾವಿನ ಕಾಯಿ ದೈಹಿಕ ಶಿಕ್ಷಕರು ನಿರೂಪಿಸಿದರು.
ಶ್ರೀ ಎನ್ ಎಂ ರೋಣದ ದೈಹಿಕ ಶಿಕ್ಷಕರು ಸ್ವಾಗತಿಸಿದರು.
ಶ್ರೀ ಎಂ ಎಚ್ ಪೂಜಾರಿ ಸಮೂಹ ಸಂಪನ್ಮೂಲ ವ್ಯಕ್ತಿಗಳು ವಂದಿಸಿದರು.

  • ಕರುನಾಡ ಕಂದ ಸುದ್ದಿ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!