ವಿಜಯಪುರ ಜಿಲ್ಲೆಯ ತಾಳಿಕೋಟೆ ಎಪಿಎಂಸಿ ಸಭಾಭವನದಲ್ಲಿ ಮೊದಲಿಗೆ ಶ್ರೀ ಗಜಾನನ ಮೂರ್ತಿಗೆ ಪೂಜೆಯನ್ನು ಸಲ್ಲಿಸುವುದರ ಮುಖಾಂತರ ಬರಗಾಲದ ಬೃಹತ್ ಹೋರಾಟದ ಪೂರ್ವಭಾವಿ ಸಭೆಯನ್ನು ರಾಜ್ಯ ರೈತ ಮೋರ್ಚಾ ಘಟಕದ ಅಧ್ಯಕ್ಷರು ಹಾಗೂ ಮಾಜಿ ಶಾಸಕರುಗಳಾದ ಶ್ರೀಮಾನ್ಯ ಎಎಸ್ ಪಾಟೀಲ್ ನಡಹಳ್ಳಿ ಅವರ ನೇತೃತ್ವದಲ್ಲಿ ದೇವರಹಿಪ್ಪರಗಿ ವಿಧಾನಸಭಾ ಮತ ಕ್ಷೇತ್ರದ ಬಿಜೆಪಿ ಮಾಜಿ ಶಾಸಕರುಗಳಾದ ಶ್ರೀ ಮಾನ್ಯ ಸೋಮನಗೌಡ ಪಾಟೀಲ್ ಹಾಗೂ ಇದೇ ಕ್ಷೇತ್ರದ ಜೆಡಿಎಸ್ ಪಕ್ಷದ ಹಾಲಿ ಶಾಸಕರುಗಳಾದ ಶ್ರೀಮಾನ್ಯ ರಾಜೂ ಗೌಡ ಕುದುರೆ ಸಾಲವಾಡಗಿ ಇವರುಗಳಲ್ಲದೆ ಬಿಜೆಪಿ ಜೆಡಿಎಸ್ ಪಕ್ಷದ ಮುಖಂಡರುಗಳು ಜಿಲ್ಲಾ ಪಂಚಾಯತಿ ತಾಲೂಕು ಪಂಚಾಯಿತಿ ಗ್ರಾಮ ಪಂಚಾಯಿತಿ ಸದಸ್ಯರುಗಳು ಹಾಗೂ ಮುದ್ದೇಬಿಹಾಳ ತಾಳಿಕೋಟೆ, ದೇವರಹಿಪ್ಪರಗಿಯ ಅಪಾರ ಸಂಖ್ಯೆಯಲ್ಲಿರುವ ರೈತಬಾಂಧವರ ನೇತೃತ್ವದಲ್ಲಿ ದಿನಾಂಕ 16. 9. 2026 ರಂದು ಪೂರ್ವಭಾವಿ ಸಭೆಯನ್ನು ಮಾಡಿದ ನಂತರ ದಿನಾಂಕ 18, 19, 20 ಮೂರು ದಿವಸ ಎಪಿಎಂಸಿ ಆವರಣದಲ್ಲಿ ವೇದಿಕೆಯ ಮುಖಾಂತರ ಕಾಂಗ್ರೆಸ್ ಸರ್ಕಾರದ ಮಲತಾಯಿ ಧೋರಣೆ ಖಂಡಿಸಿ , ಬರಗಾಲ ಘೋಷಣೆ ಆಗುವವರೆಗೂ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದು ಹೇಳಿ ದಿನಾಂಕ 22. 9. 2026 ರಂದು ಹೊರನಾಳ ಗ್ರಾಮದಿಂದ ಎತ್ತಿನ ಬಂಡಿ ಸವಾರಿ ಮಾಡಿ ತಾಳಿಕೋಟೆ ತಲುಪಿ ಶ್ರೀ ಕಾಸ್ಗತೇಶ್ವರ ಮಠದಿಂದ ಸಿದ್ದಲಿಂಗ ದೇವರುಗಳು ಬಂಡಿ ಹೋರಾಟಕ್ಕೆ ಚಾಲನೆ ನೀಡುವ ಮುಖಾಂತರ ರೈತರ ಹೋರಾಟಕ್ಕೆ ಅವರ ಕಷ್ಟಕಾರ್ಪಣ್ಯಗಳಿಗೆ ಶ್ರೀ ಖಾಸ್ಗತೇಶ್ವರನ ಆಶೀರ್ವಾದ ಇರುವುದೆಂದು ಆಶೀರ್ವಚನ ಮಾಡಿದರು.
ಹೋರಾಟಕ್ಕೆ ಬೆಂಬಲವಾಗಿ ತಾಳಿಕೋಟೆಯ ಬಸ್ ಸಂಚಾರ ಸೇರಿದಂತೆ ಪ್ರತಿಯೊಂದು ಅಂಗಡಿಗಳ ಮಾಲಕರು ಸ್ವ ಇಚ್ಛೆಯಿಂದ ಅಂಗಡಿಗಳನ್ನು ಬಂದ್ ಮಾಡಿ ಈ ಹೋರಾಟಕ್ಕೆ ಬೆಂಬಲ ಘೋಷಿಸಿದ್ದಾರೆ.
ನಂತರ ಕತ್ರಿಬಜಾರ, ಗಾಂಧಿಬಜಾರ್ ಮುಖಾಂತರ ಬಸ್ಟಾಂಡ್ ಮುಂಭಾಗದಿಂದ ರಸ್ತೆ ಹಿಡಿದು ವಿಜಯಪುರ ಸರ್ಕಲ್ ರವರೆಗೆ ಮೆರವಣಿಗೆ ಮುಖಾಂತರ ಬಂದು ಶ್ರೀ ವಿಶ್ವಜ್ಯೋತಿ ಬಸವೇಶ್ವರ ಮೂರ್ತಿಗೆ ಹಸಿರು ಶಾಲು ಹೊಂದಿಸಿದ ನಂತರ ನೆರೆದಿದ್ದ ರೈತರ ಉದ್ದೇಶಿಸಿ ಶ್ರೀಮಾನ್ಯ ಎಸ್ ಪಾಟೀಲ್ ನಡಹಳ್ಳಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ವರದಿಗಾರರು ಸಂಗಮೇಶ ಸಿ ಚೌದ್ರಿ




















