ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಅರೆಕಾಲಿಕ ಕಾನೂನು ಸ್ವಯಂ ಸೇವಕರ ತರಭೇತಿ ಕಾರ್ಯಾಗಾರದ ಉಧ್ಘಾಟನೆ

ಮಡಿಕೇರಿ‌ :ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕೊಡಗು-ಮಡಿಕೇರಿ, ಜಿಟ್‌ಲಾವೆಡ್ ಇಂಡಿಯಾ ಫೌಂಡೇಷನ್ ಮತ್ತು ವಕೀಲರ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ನ್ಯಾಯಾಲಯದಲ್ಲಿ ಅರೆಕಾಲಿಕ ಕಾನೂನು ಸ್ವಯಂ ಸೇವಕರಿಗೆ ತರಬೇತಿ ಕಾರ್ಯಗಾರದ ಉದ್ಘಾಟನಾ ಕಾರ್ಯಕ್ರಮವು ನಡೆಯಿತು.


ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಮಾರುತಿ ಎಸ್.ಬಾಗಡೆ ಅವರು ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿ, ಮಾತನಾಡಿ ಹಿಂದಿನ ಕಾಲದಲ್ಲಿ ಯಾವುದೇ ಕಾರ್ಯಕ್ರಮ, ಸಭೆ ಸಮಾರಂಭವಿದ್ದರೂ ಗಂಡಸರು ಭಾಗಿಯಾಗುತ್ತಿದ್ದರು. ಆದರೆ ಇಂದು ಬದಲಾಗಿದೆ. ಮಹಿಳೆಯರಿಗೆ ನೀಡಿದ ಅವಕಾಶ ಮತ್ತು ಕಾನೂನು ಸೌಲಭ್ಯ ಪಡೆಯುವ ಮೂಲಕ ಸ್ವಾವಲಂಬಿ, ಸದೃಢವಾಗಿ ಸಬಲರಾಗುತ್ತಿರುವುದು ಸಮಾಜದಲ್ಲಿ ಬದಲಾವಣೆಗೆ ಪೂರಕ ಎಂದರು. ಮಹಿಳೆಯೊಬ್ಬರು ಶಿಕ್ಷಣ ಪಡೆದರೆ ಇಡೀ ಕುಟುಂಬವೇ ಶಿಕ್ಷಣವಂತರಾಗುತ್ತಾರೆ. ಕಾನೂನಿನ ಅರಿವು, ಸರ್ಕಾರದ ಸೌಲಭ್ಯದ ಬಗ್ಗೆ ತಿಳಿದು ಇಂದು ಮನೆಮನೆಗೆ ಮಾಹಿತಿ ನೀಡುತ್ತಿದ್ದಾರೆ ಎಂದರು. ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ತನ್ನ ಛಾಪನ್ನು
ಮೂಡಿಸಿ ಅಭಿವೃದ್ಧಿಯ ಪಥದಲ್ಲಿ
ಮುನ್ನಡೆಯುತ್ತಿದ್ದಾರೆ. ಆ ದಿಶೆಯಲ್ಲಿ ಅರೆಕಾಲಿಕ
ಕಾನೂನು ಸ್ವಯಂ ಸೇವಕರು ಯಾವುದೇ
ಪ್ರತಿಫಲಾಪೇಕ್ಷೆ ಇಲ್ಲದೆ ನಿಸ್ವಾರ್ಥವಾಗಿ ಸಮಾಜ
ಸೇವೆಯಲ್ಲಿ ತೊಡಗಿಕೊಂಡು ಕಾನೂನು ಸೇವಾ ಪ್ರಾಧಿಕಾರ ಮತ್ತು ಸಮಾಜದ ಮಧ್ಯೆ ಸೇತುವೆಯಂತೆ
ಕೆಲಸ ನಿರ್ವಹಿಸಬೇಕು ಎಂದರು.

ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶುಭ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಅರೆಕಾಲಿಕ ಕಾನೂನು
ಸ್ವಯಂ ಸೇವಕರು ಹಳ್ಳಿಯಿಂದ ನಗರದವರೆಗೆ
ಕಾನೂನಿನ ಅರಿವಿನೊಂದಿಗೆ ಸಮಾಜದ ಪಿಡುಗುಗಳ
ವಿರುದ್ಧ ಮಾಹಿತಿ ನೀಡಿ, ಪ್ರಾಧಿಕಾರಕ್ಕೆ ಸಹಾಯ
ಮಾಡುತ್ತಿದ್ದು, ನೊಂದವರಿಗೆ ಕಾನೂನು ಬದ್ಧವಾಗಿ
ನೆರವಾಗಬೇಕು ಎಂದು ತಿಳಿಸಿದರು. ಆಯ್ಕೆಯಾದ
ಅರೆಕಾಲಿಕ ಕಾನೂನು ಸ್ವಯಂ ಸೇವಕರಿಗೆ
ಪ್ರಾಧಿಕಾರದ ವತಿಯಿಂದ ಗುರುತಿನ ಚೀಟಿ
ನೀಡಲಾಗುವುದು. ಅದನ್ನು ಸದುಪಯೋಗ
ಪಡಿಸಿಕೊಂಡು ಕಾನೂನು ಅರಿವು, ಜಾಗೃತಿ
ಮೂಡಿಸಬೇಕು ಎಂದು ಸಲಹೆ ಮಾಡಿದರು. ಕೊಡಗು ಜಿಲ್ಲೆಯಲ್ಲಿ 67 ಮಂದಿ ಅರೆಕಾಲಿಕ ಕಾನೂನು ಸ್ವಯಂ ಸೇವಕರಿದ್ದು, ಎರಡು ದಿನಗಳ ಕಾಲ ಪುನಶ್ಚೇತನ ತರಬೇತಿ ನಡೆಯಲಿದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ವಕೀಲರಾದ ಕೆ.ಎಂ.ಮೀನಾಕುಮಾರಿ ಅವರು ಮಾತನಾಡಿ ‘ಅರೆಕಾಲಿಕ ಕಾನೂನು ಸ್ವಯಂ ಸೇವಕರು ಪ್ರಾಧಿಕಾರದೊಂದಿಗೆ ಕೈಜೋಡಿಸಿ ಸಮಾಜದಲ್ಲಿನ ಅನ್ಯಾಯದ ವಿರುದ್ಧ ಮಾಹಿತಿ ನೀಡಿ ಹೆಚ್ಚಿನ ಕಾನೂನು ನೆರವು ಬೇಕಾದಾಗ ಪ್ರಾಧಿಕಾರ ಸಂಪರ್ಕಿಸಿ ಪ್ಯಾನೆಲ್ ವಕೀಲರಿಂದ ಪಡೆಯಬಹುದು. ನಿಸ್ವಾರ್ಥ ಸೇವೆಯ ಮೂಲಕ ಸಮಾಜ ಸೇವೆಗೆ ಇದೊಂದು ಅವಕಾಶ ಎಂದು ಅಭಿಪ್ರಾಯಪಟ್ಟರು.

ವರದಿ : ಪ್ರಿತುನ್ ಪೂವಣ್ಣ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!