ಕಂಡೆನೊಂದು ಡಬ್ಬಿ ಮುಚ್ಚಳದಿ ಕಾಮಧೇನು ಭಾವಚಿತ್ರ
ನಡುವಲಿರಿಸಿದೆ ದಿನಕ್ಕೊಂದು ಚಿತ್ತಾರದ ಕಟ್ಟೆಯ ಹತ್ರ
ಸುತ್ತ ಹರಡಿದೆ ಉದುರಿದ್ದ ನಿಸರ್ಗ ಪಕಳೆ ಪುಡಿಯನು
ಅಲ್ಲಲ್ಲಿ ಇರಿಸಿದೆ ಕತ್ತರಿಸಿದ ದಾಸವಾಳದ ಕುಡಿಗಳನು
ಸೇವಂತಿ ದಳಗಳ ಅರ್ಪಣೆ ಶುಭೋದಯದಿ ಗೋವಿಗೆ
ಲಘು ಕಾವ್ಯ ಸುಧೆಯು ಸಾಹಿತ್ಯ ಅಭಿಮಾನಿಗಳಿಗೆ
- ಲಲಿತಾ ಕೆ ಆಚಾರ್, ಬೆಂಗಳೂರು




















