ಕಂದಗಲ್ಲ ಗ್ರಾಮದ ಚಾವಡಿ ಕಟ್ಟಡದಲ್ಲಿ ಹುಗ್ಗಿ ಬಸವೇಶ್ವರ ಗಜಾನನ ಮಂಡಳಿಯವರ ವತಿಯಿಂದ ಮಹಿಳೆಯರ ಉಡಿ ತುಂಬುವ , ಬಹುಮಾನ ಮತ್ತು ಸನ್ಮಾನ ಕಾರ್ಯಕ್ರಮ ಜರುಗಿತು.
ಕಂದಗಲ್ಲ: (ತಾ. ಇಲಕಲ್ಲ ) ಇತಿಹಾಸದುದ್ದಕ್ಕೂ ವಿಘ್ನೇಶ್ವರ ಪ್ರತಿಯೊಂದು ಶುಭ ಕಾರ್ಯಗಳಲ್ಲಿ ಪ್ರಥಮ ಪೂಜಿತಗೊಂಡು ಎಲ್ಲರ ವಿಘ್ನಗಳನ್ನು ದೂರ ಮಾಡುವ ದೇವರು ವಿಘ್ನೇಶ್ವರ ಆತನ ಹಬ್ಬದ ಆಚರಣೆಯೊಂದಿಗೆ ಎಲ್ಲ ಪ್ರತಿಯೊಬ್ಬ ಜನಾಂಗದವರು ಪ್ರೀತಿ ವಿಶ್ವಾಸದಿಂದ ಜೀವನ ನೆಡಸಬೇಕು. ವಿಶೇಷವಾಗಿ ಮಹಿಳೆಯರು ಧೃಢ ಸಂಕಲ್ಪದಿಂದ ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದು, 250 ಮಹಿಳೆಯರಿಗೆ ಉಡಿ ತುಂಬಿದ್ದು ಪುಣ್ಯದ ಕೆಲಸ ಎಂದು ಕಂದಗಲ್ಲ ಗ್ರಾಮದ ಶ್ರೀ ರುದ್ರುಸ್ವಾಮಿ ಸುವರ್ಣಗಿರಿ ಶ್ರೀ ಮಠದ ಡಾ ಮ ನಿ ಪ್ರ ಚನ್ನಮಲ್ಲ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ ಎಲ್ಲಾ ಸದ್ಭಕ್ತರನ್ನು ಆಶೀರ್ವದಿಸಿದರು.
ಗ್ರಾಮದ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಪಂಪಣ್ಣ ಸಜ್ಜನ ಅಧ್ಯಕ್ಷತೆ ವಹಿಸಿದ್ದರು.
ಹಿರಿಯರಾದ ಬಸೆಟ್ಟೆಪ್ಪ ಸಜ್ಜನ,ವೀರಣ್ಣ ಕಂಠಿ, ಗುರುಪಾದಪ್ಪ ಪುರದನ್ನವರ, ತಾಲೂಕ್ ಪಂಚಾಯತ್ ಮಾಜಿ ಅಧ್ಯಕ್ಷ ಮಹಾಂತೇಶ್ ಕಡಿವಾಲ, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಮಹಮ್ಮಸಾಬ್ ಭಾವಿಕಟ್ಟಿ ಶೇಖಯ್ಯ್ ಗುರುವಿನಮಠ್ ಕಾರ್ಯಕ್ರಮ ಉದ್ಘಾಟಿಸಿದರು.
ಮಾಜಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಚನ್ನಪ್ಪ ಜಾಲಿಹಾಳ್.ಪಂಪಯ್ಯ್ ಗುರುವಿನಮಠ, ಅಮರೇಶ್ ಕೊಡಕೇರಿ,ಡಾ ಮಲ್ಲಿಕಾರ್ಜುನ ಗಡಿಯನ್ನವರ ಉಪಸ್ಥಿತರಿದ್ದರು.ಗಜಾನನೋತ್ಸವದ ಅಂಗವಾಗಿ ನೆಡೆದ ವಿಶೇಷ ಹೋಮವನ್ನು ಸಂತೋಷ ಗುರುವಿನಮಠ, ಶಂಕ್ರಯ್ಯ ಚಂದ್ರಗಿರಿಮಠ, ಪಾದನಕಟ್ಟಿ, ನೆರವೇರಿಸಿದರು.
ಸೇವಾರ್ಥಿಗಳನ್ನು, ಹಿರಿಯರನ್ನು ಸನ್ಮಾನಿಸಲಾಯಿತು. ರಸಪ್ರಶ್ನೆ ಸ್ಪರ್ಧೆಯಲ್ಲಿ ಬಹುಮಾನ ಪಡೆದ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಕವಿತಾ ಹವಾಲ್ದಾರಮಠ ಹಾಗೂ ವಿಧ್ಯಾರ್ಥಿನಿಯರು ಪ್ರಾರ್ಥನೆ ಮಾಡಿದರು. ಮುತ್ತು ಸಜ್ಜನ ಸ್ವಾಗತಿಸಿದರು.
ಪ್ರಶಾಂತ ಸಜ್ಜನ (ತಾಳಿಕೋಟಿ )ಕಾರ್ಯಕ್ರಮ ನಿರೂಪಿಸಿದರು.
ಗುರು ಸಜ್ಜನ ವಂದನಾರ್ಪಣೆ ಮಾಡಿದರು. ಸಾವಿರಾರು ಸಂಖ್ಯೆಯಲ್ಲಿ ಕಂದಗಲ್ಲ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು, ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
- ಕರುನಾಡ ಕಂದ ಸುದ್ದಿ




















