ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ದಿ. 28ರಂದು ಸರ್ವ ಕಲಾವಿದರ ಸಾಮಾನ್ಯ ಸಭೆ

ಬಾಗಲಕೋಟೆ/ಮುಧೋಳ : ನಮ್ಮ ನಾಡಿನಲ್ಲಿ ಗ್ರಾಮೀಣ ಬದುಕಿನ ಜನಪದ ಸಂಸ್ಕೃತಿಯ ಕಲಾಶ್ರೀಮಂತಿಕೆಯನ್ನು ಅನಾವರಣಗೊಳಿಸುವಂತ ಕಲೆಗಳು ಇವತ್ತು ಅವಸಾನದ ಅಂಚಿನಲ್ಲಿವೆ. ಇಂತಹ ಸಂಧಿಗ್ಧತೆಯ ಕಾಲದಲ್ಲಿ ಅದರಲ್ಲಿ ಬಾಗಲಕೋಟೆ ಜಿಲ್ಲೆಯಲ್ಲಿ ಸಾಂಸ್ಕೃತಿಕ ಸಂಘ ಸಂಸ್ಥೆಗಳಿಗೆ ಹಾಗೂ ಹಿರಿಯ ವಯೋವೃದ್ಧ ಕಲಾವಿದರಿಗೆ ಹಾಗೂ ಪ್ರತಿಭಾನ್ವಿತ ಯುವಕಲಾವಿದರ ಅನೇಕ ಸಮಸ್ಯೆಗಳಿಗೆ ಪರಿಹಾರ ಇಲ್ಲದಂತಾಗಿದ್ದು ಕಲಾವಿದರ ಬದುಕು ಮುಳ್ಳಿನ ಹಾಸಿಗೆಯಂತಾಗಿದೆ ಎಂದು ಕರ್ನಾಟಕ ರಾಜ್ಯ ಸರ್ವ ಕಲಾವಿದರ ಸಂಘದ ಅಧ್ಯಕ್ಷ ಶ್ರೀಸಿದ್ಧಾರೂಢ ಭಾರತಿ ಆಶ್ರಮದ ಪೂಜ್ಯರಾದ ಶರಣಬಸವ ಶಾಸ್ತ್ರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅವರು ಪತ್ರಿಕೆಯೊಂದಿಗೆ ಮಾತನಾಡುತ್ತಾ ಕಲಾವಿದರ ಅನೇಕ ಸಮಸ್ಯೆಗಳನ್ನು ಸರ್ಕಾರದ ಮುಂದೆ ತೋಡಿಕೊಂಡಿದ್ದರು ಅದಕ್ಕೆ ಪರಿಹಾರ ದೊರೆತಿಲ್ಲ. ಹಾಗಾಗಿ ನಾವೆಲ್ಲಾ ಸಂಘಟಿತರಾಗಿ ಹೋರಾಟ ಮಾಡುವುದು ಅನಿವಾರ್ಯ ಎಂದ ಅವರು ಸೋಮವಾರ ದಿ. 28ರಂದು ಗದ್ದನಕೇರಿಯ ಸದ್ಗುರು ಲಡ್ಡು ಮುತ್ಯಾರ ಮಠದಲ್ಲಿ ಜಿಲ್ಲೆಯ ಸರ್ವ ಕಲಾವಿದರ ಸಭೆಯನ್ನು ಕರೆಯಲಾಗಿದೆ ಜಿಲ್ಲಯ ಎಲ್ಲಾ ತಾಲೂಕಿನ ಸಂಘ ಸಂಸ್ಥೆಗಳ ಮುಖಂಡರು ಹಿರಿಯ ಹಿರಿಯ ಕಲಾವಿದರು ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ತಿಳಿಸಿ ಮುಂದಿನ ಹೋರಾಟದ ರೂಪುರೇಷೆಗಳಿಗೆ ತಾವೆಲ್ಲಾ ಸಹಕಾರ ನೀಡಬೇಕೆಂದು ತಿಳಿಸಿದರು.
ಗೌರವಾಧ್ಯಕ್ಷ ಚಿನ್ನಪ್ಪಗೌಡ ಗಿಡ್ಢಪ್ಪಗೋಳ. ಉಪಾಧ್ಯಕ್ಷ ಶಂಕರೆಪ್ಪ ತಂಬಾಕದ. ಈಶ್ವರ ಹೊರಟ್ಟಿ. ಯಲ್ಲಪ್ಪ ಪೂಜಾರ ಉಪಸ್ಥಿತರಿದ್ದರು.

  • ಕರುನಾಡ ಕಂದ ಸುದ್ದಿ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!