ಚಾಮರಾಜನಗರ ತಾಲೂಕಿನ ಹನೂರು.ಬಿ. ವಲಯ ವ್ಯಾಪ್ತಿಯ ಕುರಟ್ಟಿ ಹೊಸೂರು ಗ್ರಾಮದಲ್ಲಿ ಸ್ನೇಹ ಜ್ಞಾನ ವಿಕಾಸ ಕೇಂದ್ರ ದಲ್ಲಿ ಸೃಜನಶೀಲ ಕಾರ್ಯಕ್ರಮದ ಮೂಲಕ ಸಂಘದ ಸದಸ್ಯರಿಗೆ ಉಚಿತ ಆರೋಗ್ಯ ತಪಾಸಣೆಯನ್ನು ಮಾಡಿ ರಕ್ತಹೀನತೆ ಕೊರತೆಯನ್ನು ಹೊಂದಿರುವ 40 ಜನ ಫಲಾನುಭವಿಗಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆಯ ಸಿರಿ ಸಂಸ್ಥೆಯ ಪುಷ್ಟಿ ಪೌಡರ್ ನ್ನು ವಿತರಿಸಲಾಯಿತು ಹಾಗೂ ಆರೋಗ್ಯ ತಪಾಸಣಾ ಶಿಬಿರದಲ್ಲಿ 132 ಜನ ಸದಸ್ಯರಿಗೆ ಉಚಿತವಾಗಿ ಬಿಪಿ,ಶುಗರ್, ಹಿಮೋಗ್ಲೋಬಿನ್,ಪರೀಕ್ಷಿಸಿ ಮೂರು ತಿಂಗಳಿಗೆ ಆಗುವಷ್ಟು ಔಷಧಿಗಳನ್ನು ವಿತರಿಸಲಾಯಿತು ಈ ಸಂದರ್ಭದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ಶ್ರೀಮತಿ ಲತಾ ಬಂಗೇರಾ ಮೇಡಂ ರವರು ಹನೂರು ತಾಲೂಕಿನ ಯೋಜನಾಧಿಕಾರಿಗಳಾದ ಪ್ರವೀಣ್ ಕುಮಾರ್ ರವರು ಆರೋಗ್ಯ ವೈದ್ಯಾಧಿಕಾರಿಗಲಾದ ಆಭಿಷೇಕ್, ನರ್ಸ್ ವೀಣಾ,ಮನು,ಭಾಗ್ಯರವರು ಜ್ಞಾನವಿಕಾಸ ಕೇಂದ್ರದ ಸಮನ್ವಯ ಅಧಿಕಾರಿಯಾದ ಭಾನುಪ್ರಿಯರವರು ವಲಯದ ಮೇಲ್ವಿಚಾರಕರಾದ ಕೃಷ್ಣರವರು,ಸೇವಾ ಪ್ರತಿನಿಧಿಯಾದ ರುಬಿಯಾರವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ವರದಿ:ಉಸ್ಮಾನ್ ಖಾನ್
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.