ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ನವರಾತ್ರಿ / ದಸರಾ

ನಿಮಗೇನಾದರೂ ಗೊತ್ತಿದೆಯಾ ?

ಸಂಭ್ರಮ ಸಡಗರದ ನಾಡ ಹಬ್ಬ ದಸರಾ ನವರಾತ್ರಿಗಳು ನವ ದುರ್ಗೆಯರ ಅಲಂಕಾರ.

ಮನೆಯ ಕೊಳೆ ತೊಳೆದು ಭಕ್ತಿಯಿಂದ ಪೂಜಿಸಿದರು. ಮನದೊಳಗೆ ಉಳಿಯುತ್ತಿವೆ ಕೊಳೆಗಳು.

ನವರಾತ್ರಿಗಳನ್ನು ಹಾಡಿ ಹೊಗಳಿ ಕುಣಿದರು. ದುರ್ಗೆಯು ಮಾತ್ರ ನೋಡುತ್ತಿರುವಂತೆ ನಟಿಸುತ್ತಿರುವಳು.

ದಿನಕ್ಕೊಂದು ಭಕ್ಷದ ಪ್ರಸಾದ ಉಣ ಬಡಿಸಿದರು. ತುಂಬುತ್ತಿಲ್ಲ ಹಸಿದವರ ಹೊಟ್ಟೆಗಳು.
ದಿನಕ್ಕೊಂದು ಬಣ್ಣ ಬಣ್ಣದ ಸೀರೆಯನ್ನುಟ್ಟು ರಥಗೈದು ಭಕ್ತಿ ಮಾರ್ಗದಿಂದ ಅಬಲೆಯಿಂದ – ಸಬಲತೆಯೆಡೆಗೆ ದಾಪುಗಾಲು ಇಡುತ್ತಿರುವಳು ಹೆಣ್ಣು ಜಗದೊಳಗೆ.

ನಿಂಬೆ ಕುಂಬಳ ಬಲಿಗೈದು ಶಾಂತಿಯ ಮಾಡಿದರು, ಶಾಂತವಾಗುತ್ತಿಲ್ಲ ವಾಹನಗಳ ಆರ್ಭಟ ಜಗದೊಳಗೆ.

ಭಕ್ತಿ ಭಾವದಿಂದ ಆಯುಧಗಳ ಪೂಜೆಗೈದರು ಸುಮ್ಮನಿರುತ್ತಿಲ್ಲ, ತಕರಾರು ಮಾಡುತ್ತಿವೆ ಆಯುಧಗಳು.

ಪ್ರತಿ ದಸರಾ ದಿನದಂದು ರಾವಣನ ಸಂಹರಿಸಿದರು, ನಿರ್ನಾಮವಾಗುತ್ತಿಲ್ಲ ಅಸುರ ಗುಣಗಳು.

ಅನ್ಯಾಯ ಅಪಪ್ರಚಾರ ಮೋಸ ವಂಚನೆ ನಡೆಯುತ್ತಿದ್ದರು, ಹೇಗೆ ದುರ್ಗೆಯು ಬೆಚ್ಚನೆ ಕುಳಿತಿಹಳು ಗರ್ಭಗುಡಿಯೊಳಗೆ ನನಗಂತೂ ಉತ್ತರ ಸಿಗುತ್ತಿಲ್ಲ ಎಷ್ಟು ಹುಡುಕಿದರೂ
ನಿಮಗೇನಾದರೂ ಗೊತ್ತಿದೆಯಾ !

ನಿಮಗೇನಾದರೂ ಗೊತ್ತಿದೆಯಾ !

ಸಾಹಿತಿಗಳು : ಈಶಪ್ಪ ಎಸ್. ಎಲ್. ಮುಸಲಾಪುರ. ಕನಕಗಿರಿ ತಾಲೂಕು, ಕೊಪ್ಪಳ ಜಿಲ್ಲೆ,

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!