ನೀರ್ಕಾಯ ಪುಷ್ಪಗಳ ಆಚೀಚೆ ಇಡಲು
ಪಕಳೆಗಳ ಜೋಡಿಸುತ ಸಿಂಗಾರ ಮಾಡಲು
ಬಾಳೆದಿಂಡಿನ ಗಾಲಿಗಳ ಅಲ್ಲಲಿ ಇರಿಸಲು
ಕತ್ತರಿಸಿದ ಎಲೆಗರಿಗಳಲಿ ಕಿರೀಟವ ಧರಿಸಲು
ಗುಲಾಬಿ ದಳಗಳ ಬೊಟ್ಟುಗಳ ಸೇರಿಸಲು
ಅರಳಿತು ಸುಲಲಿತ ಚಿತ್ತಾರದ ಹೊನಲು
ನಲ್ಮುಂಜಾವಲಿ ಸುಮನಗಳಿಗೆ ರವಾನಿಸಲು
ಆಸ್ವಾದಿಸಿದರೆ ಮೂಡುವುದು ಸ್ನೇಹದಾ ಕಡಲು
- ಲಲಿತಾ ಕೆ ಆಚಾರ್, ಬೆಂಗಳೂರು




















