ಮೈಸೂರು ನಗರದ ಡಿಎಪಿಸಿ ಚರ್ಚ್ ಹಾಲ್ ಸುಭಾಷ್ ನಗರದಲ್ಲಿ ಅಹಿಂದ ಚಳುವಳಿ, ಅಲ್ಪಸಂಖ್ಯಾತರು, ಅತಿ ಹಿಂದುಳಿದ ವರ್ಗಗಳ, ದಲಿತ ಸಮ್ಮಿಲನ ಸಭೆ ನಡೆಯಿತು.
ಮೊದಲಿಗೆ ಸಮಾರಂಭದಲ್ಲಿ ಅತಿಥಿಗಳನ್ನು ನಟರಾಜ್ ಮಹರ್ಷಿಗಳು ನಿರೂಪಿಸಿ ಸ್ವಾಗತಿಸಿದರು. ಸಮಾರಂಭಕ್ಕೆ ವಿಶೇಷ ಅತಿಥಿಗಳಾಗಿ ಆಗಮಿಸಿದ ಜನಪ್ರಿಯ ಶಾಸಕರು ಶ್ರೀ ತನ್ವೀರ್ ಸೇಟ್ ಅವರನ್ನು ಸನ್ಮಾನಿಸಲಾಯಿತು. ಸಾಕ್ಷ ಚಿತ್ರವನ್ನು ಪ್ರದರ್ಶಿಸಿದ ನಂತರ ಶಾಸಕರು ಮಾತನಾಡಿ ಎಲ್ಲರ ಜೀವನದಲ್ಲಿ ಬೆಳಕು ಚೆಲ್ಲೋಣ ಸಮಾನತೆಗಾಗಿ ನಾವೆಲ್ಲರೂ ಹೋರಾಡೋಣ ನಾವೆಲ್ಲಾ ಭಾರತೀಯರು
ದಬ್ಬಾಳಿಕೆಗೆ ಒಳಗಾದ ಹಿಂದುಳಿದ ವರ್ಗದ ಜನಾಂಗದವರು ಒಗ್ಗಟ್ಟಾಗಿ ಸಮಾನತೆಯನ್ನು ಸಾರಬೇಕಾಗಿದೆ, ಎಲ್ಲರಿಗೂ ಒಳಿತನ್ನು ಸಾರೋಣ, ಎಲ್ಲರ ಒಳಿತಿಗಾಗಿ ಬಾಳೋಣ ನಾವೆಲ್ಲಾ ಭಾರತೀಯರು, ನಾವೆಲ್ಲಾ ಹಿಂದೂಗಳು ಜಾತಿಯನ್ನು ತೊಲಗಿಸೋಣ, ಹಿಂದುಳಿದ ಎಲ್ಲರಿಗೂ ಮೀಸಲಾತಿ ಸಿಗಬೇಕು, ಬದಲಾವಣೆಗಾಗಿ ಹೋರಾಡಬೇಕು ಅಂಬೇಡ್ಕರ್ ಅವರು ಬರೆದ ಸಂವಿಧಾನ ಮನುಕುಲದ ಒಳಿತಿಗಾಗಿ. ಅವರು ಈ ಮನುಕುಲದ ದೈವ ಎಂದರು. ನಂತರ ಮುಖ್ಯ ಭಾಷಣಕಾರರಾಗಿ ಶ್ರೀನಿವಾಸ್ ಅವರು ಮಾತನಾಡಿದರು. ಮೂರ್ತಿ ರಾಜ್ಯ ಸಂಚಾಲಕರು ದಲಿತ ಹಿಂದುಳಿದ ವರ್ಗ ಇವರು ಕೂಡ ಎಲ್ಲರನ್ನು ಸಭೆಯನ್ನು ಉದ್ದೇಶಿಸಿ ಸವಿಸ್ತಾರವಾಗಿ ಮಾತನಾಡಿದರು.
ಸಭೆಯಲ್ಲಿ ಫಾದರ್ ಬಿಷಪ್, ಅಣ್ಣಯ್ಯ ಸೇರಿದಂತೆ ಮುಂತಾದ ಗಣ್ಯರು ಹಾಜರಿದ್ದರು.




















