ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಬದಲಾಗಿದೆ

ಎಲ್ಲಾ ಬದಲಾಗಿದೆ
ಹಿಡಿದ ಬೆರಳು
ಕೊರಳು ಹಿಸುಕುತಿದೆ
ಕರುಳ ಬಳ್ಳಿ
ವಿಷದ ಅಮಲಲಿ ತೇಲಿ

ಸಣ್ಣ ಮಾತಿಗೆ
ಧಗೆಯ ನಾಗಾಲೋಟ
ಬಣ್ಣ ಬಳಿದವನ ಮೇಲಾಟ
ಕಣ್ಣ ಕನ್ನಡಿಯಲ್ಲಿ ನೂರೆಂಟು ಅಪವಾದಗಳು

ಮತ ಬೇಟೆಗೆ
ಧನ ಕನಕ
ಅಧಿಕಾರ ದಾಹಕೆ
ಮಾರಿಕೊಂಡ ಮೈ ಮನ

ಜಾತಕದ ಹೆಸರಲಿ
ಹಣ ಬಾಕ ಸಂಸ್ಕೃತಿ
ಸತ್ತ ಹೆಣದ ಮೇಲೆ ವಂಚನೆ
ಸುತ್ತ ತಿರುಗುವ ಸ್ವಾರ್ಥದ ಗಮಲು

ಮಿಥ್ಯ ಮಾಯಾ ಬಜಾರು
ಸತ್ಯ ಸಾರುವ ಚಿತ್ರಕೆ
ಮಂಜು ಮುಸುಕಿದ ಹಾದಿ
ಸಂಚು ರೂಪಿಸಿ ಹೊಂಚು ಹಾಕುತ್ತಿವೆ

ಗದ್ದುಗೆಗೆ ಗುದ್ದಾಟ
ಅದಲು ಬದಲು ಆಟದ ಕಸರತ್ತು
ವೇಷಗಾರರ ಮಸಲತ್ತು
ನಂಬಲು ಮೀನ ಮೇಷದ ಸ್ಥಿತಿ

ಎಲ್ಲಾ ಬದಲಾಗಿದೆ
ಸುಳಿವಿಲ್ಲದೆ ಗುಂಡಿ ತೋಡಿದೆ
ಗಾಳಿಗೂ ಕರ ವಸೂಲಿ
ನಾಳೆಗಳೇ ದುಸ್ತರ

ಬದುಕುವುದು ಹೇಗೆ
ಹೆಗಲೇರಿದ ಬೇತಾಳ
ಸಾಗಲೇ ಬೇಕಿದೆ
ಮಗ್ಗಲು ಬದಲಿಸಿ ಹೊರಡಲೇ ಬೇಕಲ್ಲವೇ.

  • ರೇಷ್ಮಾ ಕಂದಕೂರ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!