ಭದ್ರಾವತಿ: ಅತ್ಯುತ್ತಮ ಜಿಲ್ಲಾಪಂಚಾಯತ್ ಪುರಸ್ಕಾರವನ್ನು ಶಿವಮೊಗ್ಗ ಜಿಲ್ಲಾ ಪಂಚಾಯತ್ ಮತ್ತು ಅತ್ಯುತ್ತಮ ತಾಲ್ಲೂಕು ಪಂಚಾಯತ್ ಪುರಸ್ಕಾರವನ್ನ ಭದ್ರಾವತಿ ತಾಲ್ಲೂಕು ಪಂಚಾಯಿತಿ ತನ್ನದಾಗಿಸಿಕೊಂಡಿದೆ.
ರಾಜ್ಯದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಮಾನವ ದಿನಗಳ ಸೃಜನೆ, ಕಾಮಗಾರಿ ಮುಕ್ತಾಯ, ಜಿಯೋಟ್ಯಾಗ್, ಮಹಿಳೆಯರ ಭಾಗವಹಿಸುವಿಕೆ, ಸಾಮಾಜಿಕ ಲೆಕ್ಕ ತಪಾಸಣೆ, ಕಡತ ನಿರ್ವಹಣೆ ಮತ್ತು ಇತರೆ ಹಲವು ಕ್ಷೇತ್ರದಲ್ಲಿ ರಾಜ್ಯ ಮಟ್ಟದಲ್ಲಿ ಅತ್ಯುತ್ತಮ ತಾಲ್ಲೂಕು ಪಂಚಾಯತಿ ಪುರಸ್ಕಾರದಲ್ಲಿ ತೃತಿಯ ಪುರಸ್ಕಾರ ಭದ್ರಾವತಿ ತಾಲ್ಲೂಕಿಗೆ ಲಭಿಸಿದೆ.
ರಾಜ್ಯಮಟ್ಟದ ಪುರಸ್ಕಾರಕ್ಕೆ ಸಹಕರಿಸಿದ ಸಹಾಯಕ ನಿರ್ದೇಶಕರು(ಗ್ರಾ.ಉ) ಎಲ್ಲಾ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ಎಸ್.ಡಿ.ಎ.ಎ ಡಿ.ಇ.ಓ ಗಳು, ಗ್ರಾ.ಪಂ.ಸಿಬ್ಬಂಧಿಗಳು, ತಾಂತ್ರಿಕ ಸಹಾಯಕರು, ಬಿ.ಎಫ್.ಟಿ.ಗಳು, ಕಾಯಕ ಮಿತ್ರ ಹಾಗೂ ಎಲ್ಲಾ ಸಿಬ್ಬಂಧಿ ವರ್ಗದವರಿಗೆ ತಾಪಂ ಕಾರ್ಯನಿರ್ವಾಹಣಾಧಿಕಾರಿ ರಮೇಶ್ ಅಭಿನಂದನೆ ತಿಳಿಸಿದ್ದಾರೆ.
ಇನ್ನೊಂದೆಡೆ ಶಿವಮೊಗ್ಗ ಜಿಲ್ಲಾಪಂಚಾಯತ್ ರಾಜ್ಯಮಟ್ಟದಲ್ಲಿ ಅತ್ತುತ್ತಮ ಜಿಲ್ಲಾ ಪಂಚಾಯತ್ ಪುರಸ್ಕಾರದ ಪ್ರಶಸ್ತಿಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದೆ.